Gold Price Today: ಚಿನ್ನದ ದರ ಸ್ಥಿರ, ಬೆಳ್ಳಿ ದುಬಾರಿ: ಹೀಗಿದೆ ಇಂದಿನ ದರ

ಏರಿಕೆ, ಇಳಿಕೆ ಕಾಣುತ್ತಿದ್ದ ಬಂಗಾರ ಇಂದು ಸೈಲೆಂಟ್‌ ಆಗಿದೆ. ನಿನ್ನೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ.5,570 ಇತ್ತು. ಇಂದೂ ಸಹ ಅದೇ ಬೆಲೆಯನ್ನು ಕಾಪಾಡಿಕೊಂಡಿದೆ.

First published:

 • 110

  Gold Price Today: ಚಿನ್ನದ ದರ ಸ್ಥಿರ, ಬೆಳ್ಳಿ ದುಬಾರಿ: ಹೀಗಿದೆ ಇಂದಿನ ದರ

  ಬಂಗಾರ-ಬೆಳ್ಳಿ ಕೊಳ್ಳುವವರಿಗೆ ಬೆಲೆಯದ್ದೇ ಚಿಂತೆ. ಇಂದು ಒಂದು ಗ್ರಾಂ ಚಿನ್ನಕ್ಕೆ ಎಷ್ಟಿದೆ? ಯಾವತ್ತು ಇಳಿಕೆ ಕಾಣುತ್ತದೆ? ಹೀಗೆ ಹತ್ತಾರು ಪ್ರಶ್ನೆಗಳು ತಲೆಯಲ್ಲಿರುತ್ತವೆ. ಯಾಕೆಂದರೆ ಚಿನ್ನ, ಬೆಳ್ಳಿ ಮತ್ತು ಇತರೆ ಬಂಗಾರದ ಆಭರಣಗಳು ಅನ್ನುವುದು ದಿನನಿತ್ಯ ಬದಲಾಗುವ ಒಂದು ವಿದ್ಯಾಮಾನ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬದಲಾಗುವ ದರಗಳ ಆಧಾರದ ಮೇಲೆ ನಿರ್ಧಾರವಾಗುವ ಬೆಲೆಯು ಒಂದು ದಿನ ಏರಿಕೆ, ಒಂದು ದಿನ ಇಳಿಕೆ ಕಾಣುತ್ತದೆ.

  MORE
  GALLERIES

 • 210

  Gold Price Today: ಚಿನ್ನದ ದರ ಸ್ಥಿರ, ಬೆಳ್ಳಿ ದುಬಾರಿ: ಹೀಗಿದೆ ಇಂದಿನ ದರ

  ಬಂಗಾರಕ್ಕೆ ಯಾಕಿಷ್ಟು ಮೌಲ್ಯ ಅಂತಾ ಕೇಳಿದರೆ, ಇದು ಒಂದು ರೀತಿಯಲ್ಲಿ ಮನೆಯಲ್ಲಿರುವ ಬ್ಯಾಂಕ್‌ ಹಣದಂತೆ. ಯಾವುದೇ ಆರ್ಥಿಕ ಕಷ್ಟದಲ್ಲೂ ನಮ್ಮ ಜೊತೆ ನಿಲ್ಲುವ ವಸ್ತು. ಹಣದ ಅಡಚಣೆ ಆದರೆ ಮೊದಲಿಗೆ ನಮ್ಮ ಆಲೋಚನೆಗೆ ಬರುವುದೇ ಬಂಗಾರ. ಇದನ್ನು ಆರ್ಥಿಕ ಗೆಳೆಯ ಎನ್ನಬಹುದು.

  MORE
  GALLERIES

 • 310

  Gold Price Today: ಚಿನ್ನದ ದರ ಸ್ಥಿರ, ಬೆಳ್ಳಿ ದುಬಾರಿ: ಹೀಗಿದೆ ಇಂದಿನ ದರ

  ಆಭರಣವಾಗಿ ಬಂಗಾರ ಎಷ್ಟು ಜನಪ್ರಿಯವಾಗಿದೆಯೂ ಅದರ ಜೊತೆಗೆ ಸಂಪತ್ತಾಗಿಯೂ ಬೆಳ್ಳಿ-ಬಂಗಾರ ಸೇರಿ ಇತರೆ ಆಭರಣ ವಸ್ತುಗಳು ಪ್ರಾಮುಖ್ಯತೆ ಗಳಿಸಿವೆ. ಬಂಗಾರ ಕೇವಲ ವ್ಯಕ್ತಿಯ ಸಂಪತ್ತನ್ನಲ್ಲದೆ ದೇಶದ ಆರ್ಥಿಕ ಶಕ್ತಿಯ ಸಂಕೇತವೂ ಆಗಿದ್ದು ಇಂದು ಯಾವುದೇ ದೇಶ ತಾನು ಹೊಂದಿರುವ ಚಿನ್ನದ ಪ್ರಮಾಣಕ್ಕನುಗುಣವಾಗಿ ತನ್ನ ಆರ್ಥಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ ಎಂದರೆ ತಪ್ಪಾಗಲಾರದು.

  MORE
  GALLERIES

 • 410

  Gold Price Today: ಚಿನ್ನದ ದರ ಸ್ಥಿರ, ಬೆಳ್ಳಿ ದುಬಾರಿ: ಹೀಗಿದೆ ಇಂದಿನ ದರ

  ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 55,750 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 56,300, ರೂ. 55,700, ರೂ. 55,700 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 55,850 ರೂ. ಆಗಿದೆ.

  MORE
  GALLERIES

 • 510

  Gold Price Today: ಚಿನ್ನದ ದರ ಸ್ಥಿರ, ಬೆಳ್ಳಿ ದುಬಾರಿ: ಹೀಗಿದೆ ಇಂದಿನ ದರ

  ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,570 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,076 ಆಗಿದೆ. ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 44,560 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 48,608 ಆಗಿದೆ.

  MORE
  GALLERIES

 • 610

  Gold Price Today: ಚಿನ್ನದ ದರ ಸ್ಥಿರ, ಬೆಳ್ಳಿ ದುಬಾರಿ: ಹೀಗಿದೆ ಇಂದಿನ ದರ

  ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 55,700 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 60,760 ಆಗಿದೆ. ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,57,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,07,600 ಆಗಿದೆ.

  MORE
  GALLERIES

 • 710

  Gold Price Today: ಚಿನ್ನದ ದರ ಸ್ಥಿರ, ಬೆಳ್ಳಿ ದುಬಾರಿ: ಹೀಗಿದೆ ಇಂದಿನ ದರ

  ಬಂಗಾರದಷ್ಟು, ಬೆಳ್ಳಿ ಅಪರೂಪದ ಹಾಗೂ ಬೆಲೆಯುಳ್ಳ ಲೋಹವಲ್ಲದೆ ಹೋದರೂ ಬೆಳ್ಳಿ ಖರೀದಿಗೇನೂ ಭಾರತದಲ್ಲಿ ಕಡಿಮೆಯಿಲ್ಲ. ಭಾರತದಲ್ಲಿ ಚಿನ್ನದಂತೆಯೇ ಬೆಳ್ಳಿಯ ಆಭರಣಗಳು ಸಹ ಸಾಕಷ್ಟು ಬೇಡಿಕೆ ಹೊಂದಿವೆ. ಹಾಗಾಗಿ ಬೆಳ್ಳಿಗೂ ದೊಡ್ಡದಾದ ಮಾರುಕಟ್ಟೆ ಇದೆ ಎನ್ನಬಹುದು.

  MORE
  GALLERIES

 • 810

  Gold Price Today: ಚಿನ್ನದ ದರ ಸ್ಥಿರ, ಬೆಳ್ಳಿ ದುಬಾರಿ: ಹೀಗಿದೆ ಇಂದಿನ ದರ

  ನಿನ್ನೆ ಒಂದು ಕೆಜಿ ಬೆಳ್ಳಿಗೆ ರೂ. 76,200 ಆಗಿದ್ದ, ಬೆಳ್ಳಿ ಇಂದು 76,100. ರೂ ಆಗಿದೆ. ಪ್ರಮುಖವಾಗಿ ಬೆಳ್ಳಿ ದರವು ಭಾರತದಲ್ಲಿ ಅದರ ಅಂತಾರಾಷ್ಟ್ರೀಯ ದರದ ಮೇಲೆ ಅವಲಂಬಿತವಾಗಿರುತ್ತದೆ, ಅಲ್ಲದೆ, ರೂಪಾಯಿ-ಡಾಲರ್ ಮಧ್ಯದ ಪೈಪೋಟಿಯು ಸಹ ಬೆಳ್ಳಿ ದರದ ಮೇಲೆ ಪ್ರಭಾವ ಬೀರುತ್ತಿರುತ್ತದೆ ಎನ್ನಬಹುದು. ಇತ್ತೀಚಿನ ಕೆಲ ವರ್ಷಗಳಿಂದ ಬೆಳ್ಳಿಯನ್ನು ಸಹ ಹೂಡಿಕೆಯ ವಸ್ತುವನ್ನಾಗಿ ಗುರುತಿಸಲಾಗಿದೆ

  MORE
  GALLERIES

 • 910

  Gold Price Today: ಚಿನ್ನದ ದರ ಸ್ಥಿರ, ಬೆಳ್ಳಿ ದುಬಾರಿ: ಹೀಗಿದೆ ಇಂದಿನ ದರ

  ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 805, ರೂ. 8,050 ಹಾಗೂ ರೂ. 80,500 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 80,500 ಆಗಿದ್ದರೆ, ದೆಹಲಿಯಲ್ಲಿ ರೂ. 76,100, ಮುಂಬೈನಲ್ಲಿ ರೂ. 76,100 ಹಾಗೂ ಕೊಲ್ಕತ್ತದಲ್ಲೂ ರೂ. 76,100 ಗಳಾಗಿದೆ.

  MORE
  GALLERIES

 • 1010

  Gold Price Today: ಚಿನ್ನದ ದರ ಸ್ಥಿರ, ಬೆಳ್ಳಿ ದುಬಾರಿ: ಹೀಗಿದೆ ಇಂದಿನ ದರ

  ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

  MORE
  GALLERIES