ಚಿನ್ನ-ಬೆಳ್ಳಿ ಖರೀದಿ, ಮಾರಾಟ ಪ್ರತಿನಿತ್ಯ ನಡೆಯುವ ಸಾವಿರಾರು ಕೋಟಿ ಮೌಲ್ಯದ ವ್ಯವಹಾರ. ಚಿನ್ನವನ್ನು ಧರಿಸಿಲು ಎಷ್ಟು ಜನ ಕೊಳ್ಳುತ್ತಾರೋ, ಚಿನ್ನದ ಮೇಲೆ ಹೂಡಿಕೆ ಮಾಡುವವರು ಸಹ ಅಷ್ಟೇ ಸಂಖ್ಯೆಯಲ್ಲಿದ್ದಾರೆ. ಚಿನ್ನ ಮಾಡಿಸಿಕೊಂಡು ಮನೆಯಲ್ಲಿಟ್ಟುಕೊಂಡು ಬೇಕಾದಾಗ ಧರಿಸಿಕೊಳ್ಳಬಹುದು, ಅದೇ ದೊಡ್ಡ ಮೊತ್ತದಲ್ಲಿ ಹಣ ಹೊಂದಿಸಲು ಸಾಧ್ಯವಾಗದೇ ಇದ್ದಾಗ ಚಿನ್ನದ ಮೇಲೆ ಸಾಲ ತೆಗೆದುಕೊಳ್ಳಬಹುದು.
ಇಷ್ಟೆಲ್ಲಾ ಮಹತ್ವ ಪಡೆದಿರುವ ಹಳದಿ ಲೋಹದ ಬೆಲೆಯಲ್ಲಿ ಪ್ರತಿನಿತ್ಯ ಏರಿಳಿತ ಇರುತ್ತದೆ. ಒಂದು ದಿನ ಏರಿಕೆಯಾದರೆ, ಇನ್ನೊಂದಿನ ಇಳಿಕೆ. ಹೀಗೆ ಇಂದು ಇದ್ದ ಬೆಲೆ ನಾಳೆ ಇರಲ್ಲ. ಹೀಗಾಗಿ ಚಿನ್ನ-ಬೆಳ್ಳಿಯ ಬೆಲೆ ಎಷ್ಟಾಗಿದೆ ಎಂದು ತಿಳಿಯುವ ಕುತೂಹಲ ಎಲ್ಲರಿಗೂ ಇರುತ್ತದೆ. ಆಭರಣ ಪ್ರಿಯರು ಹಾಗೂ ಹೂಡಿಕೆದಾರರಿಗಾಗಿ ಚಿನ್ನ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 754, ರೂ. 7,540 ಹಾಗೂ ರೂ. 75,400 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 75,400 ಆಗಿದ್ದರೆ, ದೆಹಲಿಯಲ್ಲಿ ರೂ. 72,600, ಮುಂಬೈನಲ್ಲಿ ರೂ. 72,600 ಹಾಗೂ ಕೊಲ್ಕತ್ತದಲ್ಲೂ ರೂ. 72,600 ಗಳಾಗಿದೆ.