ಬಂಗಾರಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಇರುವ ಮಹತ್ವ ಇಂದಿನದ್ದಲ್ಲ. ಕ್ರಿಸ್ತ ಪೂರ್ವ 5 ನೇ ಶತಮಾನದಿಂದಲೂ ಬಂಗಾರಕ್ಕೆ ಬಂಗಾರದ್ದೇ ಮೌಲ್ಯ. ಚಿನ್ನ ನಮ್ಮ ದೇಶದಲ್ಲಿ ಕೇವಲ ಆಭರಣವಾಗಿ ಉಳಿಯದೇ ಉಳಿತಾಯ, ಹೂಡಿಕೆಯಾಗಿದೆ. ಚಿನ್ನದಿಂದ ಉಳಿತಾಯವನ್ನು ಪ್ರಾರಂಭಿಸಲು ನೀವು ಆರ್ಥಿಕ ಪರಿಣತರಾಗಿರಬೇಕಿಲ್ಲ, ಬದಲಿಗೆ ಆಗಾಗ ಒಂದಿಷ್ಟು ಚಿನ್ನ ಮಾಡಿಸಿಟ್ಟುಕೊಂಡರೆ ಮುಗಿಯಿತು.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 746, ರೂ. 7,460 ಹಾಗೂ ರೂ. 74,600 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,600 ಆಗಿದ್ದರೆ, ದೆಹಲಿಯಲ್ಲಿ ರೂ. 72,000, ಮುಂಬೈನಲ್ಲಿ ರೂ. 72,000 ಹಾಗೂ ಕೊಲ್ಕತ್ತದಲ್ಲೂ ರೂ. 72,000 ಗಳಾಗಿದೆ.