ಕಳೆದ ಹಲವು ವರ್ಷಗಳಿಂದ ಬಂಗಾರ ಹೂಡಿಕೆದಾರರ ಸಾಕಷ್ಟು ಗಮನ ಸೆಳೆದಿದ್ದು ಆಕರ್ಷಕ ಹೂಡಿಕೆಯ ಸಾಧನವೂ ಆಗಿದೆ. ಏಕೆಂದರೆ, ಇದರ ಬೆಲೆಯಲ್ಲಿ ಸಣ್ಣ ಪುಟ್ಟ ಏರಿಳಿತಗಳಿದ್ದರೂ ಸಹ ವರ್ಷಗಳಿಂದ ವರ್ಷಕ್ಕೆ ಸಾಗಿದಂತೆ ಚಿನ್ನದ ಬೆಲೆಯಲ್ಲಿ ಏರಿಕೆಯೇ ಕಂಡುಬರುತ್ತಿದೆ ಎನ್ನಬಹುದು. ಅಲ್ಲದೆ, ಚಿನ್ನ ದೇಶಗಳ ಆರ್ಥಿಕ ಸದೃಢತೆಗೂ ಕಾರಣವಾಗಿದೆ ಹಾಗೂ ಹಣದುಬ್ಬರದಂತಹ ಸಮಸ್ಯೆಗೆ ರಕ್ಷಣಾತ್ಮಕ ಬೇಲಿಯಾಗಿದೆ.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 720, ರೂ. 7,200 ಹಾಗೂ ರೂ. 72,000 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 72,000 ಆಗಿದ್ದರೆ, ದೆಹಲಿಯಲ್ಲಿ ರೂ. 68,500, ಮುಂಬೈನಲ್ಲಿ ರೂ. 68,500 ಹಾಗೂ ಕೊಲ್ಕತ್ತದಲ್ಲೂ ರೂ. 68,500 ಗಳಾಗಿದೆ.