Gold-Silver Price Today: ಕೊಂಚ ಬಿಸಿ ಮುಟ್ಟಿಸಿದ ಚಿನ್ನ, ಬೆಳ್ಳಿ ದರ ಏರಿಕೆ ಇಲ್ಲ: ಹೀಗಿದೆ ಇಂದಿನ ರೇಟ್

ಕಳೆದ ವಾರವನ್ನು ಗಮನಿಸಿದರೆ, ಈ ವಾರದಾರಂಭ ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆಯೇ ಆಗಿದೆ ಎನ್ನಬಹುದು. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ಇಂದು ಮಾರುಕಟ್ಟೆಯಲ್ಲಿ ರೂ. 5,216 ಆಗಿದ್ದು ಪ್ರತಿ ಹತ್ತು ಗ್ರಾಂಗೆ ರೂ. 52,160 ಆಗಿದೆ. ಇನ್ನು 24 ಕ್ಯಾರಟ್ ಬಂಗಾರದ ಬೆಲೆಯು ಪ್ರತಿ ಹತ್ತು ಗ್ರಾಂಗೆ ರೂ. 56,890 ಆಗಿದೆ.

First published:

 • 110

  Gold-Silver Price Today: ಕೊಂಚ ಬಿಸಿ ಮುಟ್ಟಿಸಿದ ಚಿನ್ನ, ಬೆಳ್ಳಿ ದರ ಏರಿಕೆ ಇಲ್ಲ: ಹೀಗಿದೆ ಇಂದಿನ ರೇಟ್

  ಭಾರತದಲ್ಲಿ ಚಿನ್ನ ತನ್ನದೆ ಆದ ದೊಡ್ಡ ಮಾರುಕಟ್ಟೆಯನ್ನು ಹೊಂದಿದ್ದು ನಿತ್ಯ ಕೋಟ್ಯಂತರ ರೂಪಾಯಿಗಳಷ್ಟು ವ್ಯಾಪಾರ ವಹಿವಾಟು ಹೊಂದಿದೆ. ಇನ್ನು ಚಿನ್ನದ ಬೆಲೆಯೂ ಸಹ ಒಂದೇ ಸಮನಾಗಿರದೆ ಹಲವು ಅಂಶಗಳಿಂದಾಗಿ ಅದರ ಬೆಲೆ ಪ್ರಭಾವಿಸಲ್ಪಡುತ್ತಿರುತ್ತದೆ. ಅಂತೆಯೇ ಹೂಡಿಕೆದಾರರಿಗೆ ಹಾಗೂ ಆಭರಣ ಕೊಳ್ಳಬಯಸುವವರಿಗೆ ನಿತ್ಯದ ಬೆಲೆ ಅಪ್ಡೇಟ್ ಉಪಯುಕ್ತವಾಗಿರುತ್ತದೆ.

  MORE
  GALLERIES

 • 210

  Gold-Silver Price Today: ಕೊಂಚ ಬಿಸಿ ಮುಟ್ಟಿಸಿದ ಚಿನ್ನ, ಬೆಳ್ಳಿ ದರ ಏರಿಕೆ ಇಲ್ಲ: ಹೀಗಿದೆ ಇಂದಿನ ರೇಟ್

  ಕಳೆದ ಹಲವು ವರ್ಷಗಳಿಂದ ಬಂಗಾರ ಹೂಡಿಕೆದಾರರ ಆಕರ್ಷಣೀಯ ವಸ್ತುವಾಗಿ ತನ್ನ ಪ್ರಭುತ್ವ ಹೆಚ್ಚಿಸಿಕೊಳ್ಳುತ್ತಿದೆ. ಏಕೆಂದರೆ ಚಿನ್ನ ಕೇವಲ ವೈಯಕ್ತಿಕ ಸಂಪತ್ತಾಗಿ ಉಳಿದಿಲ್ಲ, ಬದಲಾಗಿ ದೇಶಗಳ ಆರ್ಥಿಕ ಬಲಕ್ಕೂ ನೀರೆರೆಯುತ್ತದೆ ಹಾಗೂ ಹಣದುಬ್ಬರದಂತಹ ಸಮಸ್ಯೆಗೆ ರಕ್ಷಣಾತ್ಮಕ ಬೇಲಿಯಾಗಿ ಗುರುತಿಸಿಕೊಂಡಿದೆ.

  MORE
  GALLERIES

 • 310

  Gold-Silver Price Today: ಕೊಂಚ ಬಿಸಿ ಮುಟ್ಟಿಸಿದ ಚಿನ್ನ, ಬೆಳ್ಳಿ ದರ ಏರಿಕೆ ಇಲ್ಲ: ಹೀಗಿದೆ ಇಂದಿನ ರೇಟ್

  ಯಾವುದೇ ಶುಭ ಸಮಾರಂಭಗಳಿರಲಿ ಭಾರತೀಯರು ಚಿನ್ನದ ಆಭರಣಗಳನ್ನು ತೊಡದೆ ಇರಲಾರರು. ಚಿನ್ನ-ಬೆಳ್ಳಿ ಖರೀದಿಗೆಂದೇ ನಮ್ಮಲ್ಲಿ ಮುಡಿಪಾದ ದಿನವೂ ಇದೆ ಎಂದರೆ ಚಿನ್ನಕ್ಕಿರುವ ಮಹತ್ವ ಎಷ್ಟು ಎಂಬುದನ್ನು ಊಹಿಸಬಹುದು.

  MORE
  GALLERIES

 • 410

  Gold-Silver Price Today: ಕೊಂಚ ಬಿಸಿ ಮುಟ್ಟಿಸಿದ ಚಿನ್ನ, ಬೆಳ್ಳಿ ದರ ಏರಿಕೆ ಇಲ್ಲ: ಹೀಗಿದೆ ಇಂದಿನ ರೇಟ್

  ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 52,210 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 52,710, ರೂ. 52,160, ರೂ. 52,160 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 52,310 ರೂ. ಆಗಿದೆ.

  MORE
  GALLERIES

 • 510

  Gold-Silver Price Today: ಕೊಂಚ ಬಿಸಿ ಮುಟ್ಟಿಸಿದ ಚಿನ್ನ, ಬೆಳ್ಳಿ ದರ ಏರಿಕೆ ಇಲ್ಲ: ಹೀಗಿದೆ ಇಂದಿನ ರೇಟ್

  ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,216 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,689 ಆಗಿದೆ. ಇತ್ತ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 41,728 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 45,512 ಆಗಿದೆ.

  MORE
  GALLERIES

 • 610

  Gold-Silver Price Today: ಕೊಂಚ ಬಿಸಿ ಮುಟ್ಟಿಸಿದ ಚಿನ್ನ, ಬೆಳ್ಳಿ ದರ ಏರಿಕೆ ಇಲ್ಲ: ಹೀಗಿದೆ ಇಂದಿನ ರೇಟ್

  ಇನ್ನು ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 52,160 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 56,890 ಆಗಿದೆ. ಇತ್ತ ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,21,600 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,68,900 ಆಗಿದೆ.

  MORE
  GALLERIES

 • 710

  Gold-Silver Price Today: ಕೊಂಚ ಬಿಸಿ ಮುಟ್ಟಿಸಿದ ಚಿನ್ನ, ಬೆಳ್ಳಿ ದರ ಏರಿಕೆ ಇಲ್ಲ: ಹೀಗಿದೆ ಇಂದಿನ ರೇಟ್

  ಇನ್ನು ಭಾರತದಲ್ಲಿ ಬೆಳ್ಳಿ ಖರೀದಿಯೂ ಜೋರಾಗಿರುತ್ತದೆ. ಏಕೆಂದರೆ ಚಿನ್ನದ ಜೊತೆ ಜೊತೆ ಬೆಳ್ಳಿಯ ಆಭರಣಗಳೂ ಅಪಾರ ಜನಪ್ರೀಯತೆ ಹೊಂದಿವೆ. ಬೆಳ್ಳಿಯಿಂದ ತಯಾರಿಸಲಾದ ದೇವರ ವಿಗ್ರಹಗಳಿಂದ ಹಿಡಿದು ಹಲವು ಬಗೆಯ ಪೂಜಾ ಪರಿಕರಗಳವರೆಗೆ ಅಪಾರ ಬೇಡಿಕೆ ಭಾರತದಲ್ಲಿದೆ. ಅಂತೆಯೇ ಬೆಳ್ಳಿಗೂ ದೊಡ್ಡದಾದ ಮಾರುಕಟ್ಟೆಯಿದೆ ಎನ್ನಬಹುದು.

  MORE
  GALLERIES

 • 810

  Gold-Silver Price Today: ಕೊಂಚ ಬಿಸಿ ಮುಟ್ಟಿಸಿದ ಚಿನ್ನ, ಬೆಳ್ಳಿ ದರ ಏರಿಕೆ ಇಲ್ಲ: ಹೀಗಿದೆ ಇಂದಿನ ರೇಟ್

  ಇಂದು ಒಂದು ಕೆಜಿ ಬೆಳ್ಳಿ ಬೆಲೆ ರೂ. 65,700 ಆಗಿದೆ. ಚಿನ್ನದಂತೆ ಇತ್ತೀಚಿನ ಕೆಲ ಸಮಯದಿಂದ ಬೆಳ್ಳಿಯೂ ಸಹ ಉತ್ತಮ ಹೂಡಿಕೆಯ ಸಾಧನವಾಗಿ ಗುರುತಿಸಲ್ಪಟ್ಟಿದ್ದು ಹೂಡಿಕೆದಾರರಲ್ಲಿ ಸಾಕಷ್ಟು ಜನಪ್ರಿಯತೆ ಪಡೆಯುತ್ತಿದೆ.

  MORE
  GALLERIES

 • 910

  Gold-Silver Price Today: ಕೊಂಚ ಬಿಸಿ ಮುಟ್ಟಿಸಿದ ಚಿನ್ನ, ಬೆಳ್ಳಿ ದರ ಏರಿಕೆ ಇಲ್ಲ: ಹೀಗಿದೆ ಇಂದಿನ ರೇಟ್

  ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 687, ರೂ. 6,870 ಹಾಗೂ ರೂ. 68,700 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 68,700 ಆಗಿದ್ದರೆ, ದೆಹಲಿಯಲ್ಲಿ ರೂ. 65,700, ಮುಂಬೈನಲ್ಲಿ ರೂ. 65,700 ಹಾಗೂ ಕೊಲ್ಕತ್ತದಲ್ಲೂ ರೂ. 65,700 ಗಳಾಗಿದೆ.

  MORE
  GALLERIES

 • 1010

  Gold-Silver Price Today: ಕೊಂಚ ಬಿಸಿ ಮುಟ್ಟಿಸಿದ ಚಿನ್ನ, ಬೆಳ್ಳಿ ದರ ಏರಿಕೆ ಇಲ್ಲ: ಹೀಗಿದೆ ಇಂದಿನ ರೇಟ್

  ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

  MORE
  GALLERIES