ಚಿನ್ನ ಭಾರತದಲ್ಲಿ ಕೇವಲ ಆಭರಣವಾಗಿರದೇ ಹೂಡಿಕೆಯಾಗಿ, ಉಳಿತಾಯವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಜನ ನಮ್ಮ ಉಳಿತಾಯದ ಹಣದಲ್ಲಿ ಬಂಗಾರ ಖರೀದಿ ಮಾಡಲು ಬಯಸುತ್ತಾರೆ. ಹಣ ಕೂಡಿಟ್ಟರೆ ಖರ್ಚಾಗುತ್ತದೆ, ಅದೇ ಚಿನ್ನ ಮಾಡಿಸಿಕೊಂಡರೆ ಯಾವತ್ತಾದರೂ ನಮ್ಮ ಕಷ್ಟಕಾಲಕ್ಕೆ ಬರುತ್ತದೆ ಎಂಬುವುದೇ ಕಾರಣ. ಚಿನ್ನ ಈಗ ಕೇವಲ ವೈಯಕ್ತಿಕ ಸಂಪತ್ತಾಗಿರುವುದಲ್ಲದೆ ದೇಶಗಳ ಆರ್ಥಿಕ ಬಲಕ್ಕೂ ಇಂಬು ನೀಡುತ್ತಿದೆ.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 700, ರೂ. 7,000 ಹಾಗೂ ರೂ. 70,000 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 70,000 ಆಗಿದ್ದರೆ, ದೆಹಲಿಯಲ್ಲಿ ರೂ. 66,900, ಮುಂಬೈನಲ್ಲಿ ರೂ. 66,900 ಹಾಗೂ ಕೊಲ್ಕತ್ತದಲ್ಲೂ ರೂ. 66,900 ಗಳಾಗಿದೆ.