ಇನ್ನು ಚಿನ್ನದ ದರ ಸದಾ ಸ್ಥಿರವಾಗಿರುವುದಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರ್ಪಡುವ ಹಲವು ಜಾಗತಿಕ ಅಂಶಗಳಿಂದಾಗಿ ಅದರ ಬೆಲೆ ಪ್ರಭಾವಿಸಲ್ಪಡುತ್ತಿರುತ್ತದೆ. ಇನ್ನು ಭಾರತದಂತಹ ದೇಶದಲ್ಲಿ ನಿತ್ಯ ಚಿನ್ನ ಕೊಳ್ಳುವಿಕೆ ರೂಢಿಯಲ್ಲಿದ್ದು ಚಿನ್ನದ ಬೆಲೆಯಲ್ಲಾಗುವ ವ್ಯತ್ಯಾಸಗಳ ಮೇಲೆ ಜನರು ಗಮನವಿಟ್ಟಿರುತ್ತಾರೆ. ಈ ದೃಷ್ಟಿಯಿಂದ ನಿತ್ಯದ ಚಿನ್ನ-ಬೆಳ್ಳಿ ದರಗಳಲ್ಲಾಗುವ ಅಪ್ಡೇಟ್ ಬಲು ಉಪಯುಕ್ತವಾಗಿದೆ.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 717, ರೂ. 7,170 ಹಾಗೂ ರೂ. 71,700 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 71,700 ಆಗಿದ್ದರೆ, ದೆಹಲಿಯಲ್ಲಿ ರೂ. 68,500, ಮುಂಬೈನಲ್ಲಿ ರೂ. 68,500 ಹಾಗೂ ಕೊಲ್ಕತ್ತದಲ್ಲೂ ರೂ. 68,500 ಗಳಾಗಿದೆ.