Gold-Silver Price Today: ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಕೊಂಚ ಅಗ್ಗ: ಹೀಗಿದೆ ಇಂದಿನ ರೇಟ್!

ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಇನ್ನಷ್ಟು ಜಿಗಿತವಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ಇಂದು ಮಾರುಕಟ್ಟೆಯಲ್ಲಿ ರೂ. 5,175 ಆಗಿದ್ದು ಪ್ರತಿ ಹತ್ತು ಗ್ರಾಂಗೆ ರೂ. 51,750 ಆಗಿದೆ. ಇನ್ನು 24 ಕ್ಯಾರಟ್ ಬಂಗಾರದ ಬೆಲೆಯು ಪ್ರತಿ ಹತ್ತು ಗ್ರಾಂಗೆ ರೂ. 56,450 ಆಗಿದೆ.

 • Trending Desk
 • |
 •   | Bangalore [Bangalore], India
First published:

 • 111

  Gold-Silver Price Today: ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಕೊಂಚ ಅಗ್ಗ: ಹೀಗಿದೆ ಇಂದಿನ ರೇಟ್!

  ನಿತ್ಯ ಕೋಟ್ಯಂತರ ರೂಪಾಯಿಗಳಷ್ಟು ವ್ಯಾಪಾರ ವಹಿವಾಟು ನಡೆಸುವ ಚಿನ್ನದ ಬೆಲೆ ಸದಾ ಸ್ಥಿರವಾಗಿರುವುದಿಲ್ಲ ಬದಲಾಗಿ ಅದರ ಬೆಲೆ ಹಲವು ಅಂಶಗಳಿಂದಾಗಿ ಬದಲಾಗುತ್ತದೆ. ಈ ನಿಟ್ಟಿನಲ್ಲಿ ಗ್ರಹಕರಿಗೆ ಒಳಿತಾಗುವ ದೃಷ್ಟಿಯಿಂದ ಹಾಗೂ ಅವರ ತಿಳುವಳಿಕೆಗಾಗಿ ಮಾತ್ರವೇ ನಿತ್ಯ ಚಿನ್ನದ ಅಪ್ಡೇಟ್ ಸಾಕಷ್ಟು ಉಪಯುಕ್ತವಾಗಿದೆ.

  MORE
  GALLERIES

 • 211

  Gold-Silver Price Today: ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಕೊಂಚ ಅಗ್ಗ: ಹೀಗಿದೆ ಇಂದಿನ ರೇಟ್!

  ಭಾರತದಂತಹ ದೇಶ ಇಂದು ಜಗತ್ತಿನಲ್ಲಿ ಸಾಕಷ್ಟು ಚಿನ್ನ ಹೊಂದಿರುವ ರಾಷ್ಟ್ರ, ಕಾರಣ ಭಾರತದಲ್ಲಿ ಚಿನ್ನ ಎಂಬುದು ಪ್ರಾಚೀನ ಕಾಲದಿಂದಲೂ ಅಪಾರ ಜನಪ್ರೀಯತೆ ಹೊಂದಿದೆ. ಭಾರತದ ಮಹಿಳೆಯರು ಮಿಕ್ಕೆಲ್ಲಾ ದೇಶಗಳ ಮಹಿಳೆಯರಿಗಿಂತ ಸಾಕಷ್ಟು ಚಿನ್ನದ ಆಭರಣಗಳನ್ನು ಹೊಂದಿದ್ದಾರೆಂದರೆ ತಪ್ಪಾಗಲಿಕ್ಕಿಲ್ಲ.

  MORE
  GALLERIES

 • 311

  Gold-Silver Price Today: ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಕೊಂಚ ಅಗ್ಗ: ಹೀಗಿದೆ ಇಂದಿನ ರೇಟ್!

  ಯಾವುದೇ ಶುಭ ಸಮಾರಂಭಗಳಿರಲಿ ಭಾರತೀಯರು ಚಿನ್ನದ ಆಭರಣಗಳನ್ನು ತೊಡದೆ ಇರಲಾರರು. ಚಿನ್ನ-ಬೆಳ್ಳಿ ಖರೀದಿಗೆಂದೇ ನಮ್ಮಲ್ಲಿ ಮುಡಿಪಾದ ದಿನವೂ ಇದೆ ಎಂದರೆ ಚಿನ್ನಕ್ಕಿರುವ ಮಹತ್ವ ಎಷ್ಟು ಎಂಬುದನ್ನು ಊಹಿಸಬಹುದು.

  MORE
  GALLERIES

 • 411

  Gold-Silver Price Today: ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಕೊಂಚ ಅಗ್ಗ: ಹೀಗಿದೆ ಇಂದಿನ ರೇಟ್!

  ಕಳೆದ ಫೆಬ್ರವರಿಯಲ್ಲಿ ಪ್ರತಿ ಹತ್ತು ಗ್ರಾಂ ಆಭರಣ ಚಿನ್ನದ ಬೆಲೆ ಗರಿಷ್ಠ ಮೊತ್ತ ಫೆಬ್ರುವರಿ 2 ರಂದು ರೂ. 53,600ಗೆ ತಲುಪಿದರೆ ಕನಿಷ್ಠ ಮೊತ್ತ ಫೆಬ್ರುವರಿ 27 ರಂದು ರೂ. 51,350 ಆಗಿತ್ತು.

  MORE
  GALLERIES

 • 511

  Gold-Silver Price Today: ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಕೊಂಚ ಅಗ್ಗ: ಹೀಗಿದೆ ಇಂದಿನ ರೇಟ್!

  ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 51,800 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 52,430, ರೂ. 51,750, ರೂ. 51,750 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 51,900 ರೂ. ಆಗಿದೆ.

  MORE
  GALLERIES

 • 611

  Gold-Silver Price Today: ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಕೊಂಚ ಅಗ್ಗ: ಹೀಗಿದೆ ಇಂದಿನ ರೇಟ್!

  ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,175 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,645 ಆಗಿದೆ. ಅಲ್ಲದೇ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 41,400 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 45,160 ಆಗಿದೆ.

  MORE
  GALLERIES

 • 711

  Gold-Silver Price Today: ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಕೊಂಚ ಅಗ್ಗ: ಹೀಗಿದೆ ಇಂದಿನ ರೇಟ್!

  ಇನ್ನು ಹತ್ತು ಗ್ರಾಂ (10GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 51,750 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 56,450 ಆಗಿದೆ. ಇತ್ತ ನೂರು ಗ್ರಾಂ (100GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,17,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,64,500 ಆಗಿದೆ.

  MORE
  GALLERIES

 • 811

  Gold-Silver Price Today: ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಕೊಂಚ ಅಗ್ಗ: ಹೀಗಿದೆ ಇಂದಿನ ರೇಟ್!

  ಚಿನ್ನದಂತೆ ಬೆಳ್ಳಿಯೂ ಸಹ ಭಾರತದಲ್ಲಿ ಅಪಾರವಾದ ಬೇಡಿಕೆ ಹೊಂದಿದೆ. ಭಾರತದಲ್ಲಿ ಬೆಳ್ಳಿ ದರಗಳು ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಬೆಳ್ಳಿ ದರಗಳಿಂದ ಪ್ರಭಾವಿಸಲ್ಪಡುತ್ತವೆ. ಇದಲ್ಲದೆ ರೂಪಾಯಿ-ಡಾಲರ್ ಮಧ್ಯದ ಪೈಪೋಟಿಯು ಬೆಳ್ಳಿ ದರವನ್ನು ಪ್ರಭಾವಿಸುತ್ತದೆ.

  MORE
  GALLERIES

 • 911

  Gold-Silver Price Today: ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಕೊಂಚ ಅಗ್ಗ: ಹೀಗಿದೆ ಇಂದಿನ ರೇಟ್!

  ಇಂದು ಒಂದು ಕೆಜಿ ಬೆಳ್ಳಿ ಬೆಲೆ ರೂ. 66,500 ಆಗಿದೆ. ಚಿನ್ನದಂತೆ ಇತ್ತೀಚಿನ ಕೆಲ ಸಮಯದಿಂದ ಬೆಳ್ಳಿಯೂ ಸಹ ಉತ್ತಮ ಹೂಡಿಕೆಯ ಸಾಧನವಾಗಿ ಗುರುತಿಸಲ್ಪಟ್ಟಿದ್ದು ಹೂಡಿಕೆದಾರರಲ್ಲಿ ಸಾಕಷ್ಟು ಜನಪ್ರಿ ಯತೆ ಪಡೆಯುತ್ತಿದೆ.

  MORE
  GALLERIES

 • 1011

  Gold-Silver Price Today: ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಕೊಂಚ ಅಗ್ಗ: ಹೀಗಿದೆ ಇಂದಿನ ರೇಟ್!

  ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 700, ರೂ. 7,000 ಹಾಗೂ ರೂ. 70,000 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 70,000 ಆಗಿದ್ದರೆ, ದೆಹಲಿಯಲ್ಲಿ ರೂ. 66,500, ಮುಂಬೈನಲ್ಲಿ ರೂ. 66,500 ಹಾಗೂ ಕೊಲ್ಕತ್ತದಲ್ಲೂ ರೂ. 66,500 ಗಳಾಗಿದೆ.

  MORE
  GALLERIES

 • 1111

  Gold-Silver Price Today: ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಕೊಂಚ ಅಗ್ಗ: ಹೀಗಿದೆ ಇಂದಿನ ರೇಟ್!

  ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

  MORE
  GALLERIES