ಕಳೆದ ಹಲವು ತಿಂಗಳುಗಳನ್ನು ಗಮನಿಸಿದರೆ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಸಾಕಷ್ಟು ಏರಿಳಿತಗಳು ಆಗುತ್ತಲೇ ಇದೆ. ಆದಾಗ್ಯೂ ಚಿನ್ನದ ಬೆಲೆ ಏರಿಕೆಯ ಪಥದಲ್ಲೇ ಇರುವುದನ್ನು ಗಮನಿಸಬಹುದು. ಅಷ್ಟಕ್ಕೂ ಕಳೆದ ತಿಂಗಳಿನಲ್ಲಿ ಪ್ರತಿ ಹತ್ತು ಗ್ರಾಂ ಆಭರಣ ಚಿನ್ನದ ಬೆಲೆ ಗರಿಷ್ಠ ಮೊತ್ತ ಫೆಬ್ರುವರಿ 2 ರಂದು ರೂ. 53,600ಗೆ ತಲುಪಿತ್ತು ಹಾಗೂ ಕನಿಷ್ಠ ಮೊತ್ತ ಫೆಬ್ರವರಿ 27 ರಂದು ರೂ. 51,350 ಗೆ ಕುಸಿದಿತ್ತು.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 702, ರೂ. 7,020 ಹಾಗೂ ರೂ. 70,200 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 70,200 ಆಗಿದ್ದರೆ, ದೆಹಲಿಯಲ್ಲಿ ರೂ. 67,000, ಮುಂಬೈನಲ್ಲಿ ರೂ. 66,800 ಹಾಗೂ ಕೊಲ್ಕತ್ತದಲ್ಲೂ ರೂ. 67,000 ಗಳಾಗಿದೆ.