Gold-Silver Price Today: ಚಿನ್ನ ಪ್ರಿಯರಿಗೆ ಕೊಂಚ ನೆಮ್ಮದಿ, ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

ಹೆಚ್ಚು ಕಡಿಮೆ ಪ್ರತಿನಿತ್ಯ ಮಾರುಕಟ್ಟೆಯಲ್ಲಿ ಕಣ್ಣು ಮುಚ್ಚಾಲೆ ಆಟ ಆಡುವ ಚಿನ್ನದ ಬೆಲೆ ಇಂದು ಪ್ರಭಾವಿಸಲ್ಪಟ್ಟಿಲ್ಲ. ನಿನ್ನೆಯ ಬೆಲೆಯಲ್ಲೇ ಇಂದು ಸಹ ಚಿನ್ನ ಮುಂದುವರೆದಿದ್ದು ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 5,265 ಆಗಿದೆ.

First published:

 • 111

  Gold-Silver Price Today: ಚಿನ್ನ ಪ್ರಿಯರಿಗೆ ಕೊಂಚ ನೆಮ್ಮದಿ, ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

  ಪ್ರಾಚೀನ ಕಾಲದಿಂದಲೂ ಬಂಗಾರಕ್ಕೆ ಸಾಕಷ್ಟು ಬೇಡಿಕೆಯಿದೆ. ವಾಸ್ತವದಲ್ಲಿ ಯಾರಿಗೆ ಆಗಲಿ ಹಣಕಾಸಿನ ಸಮಸ್ಯೆಯಾದಲ್ಲಿ ಚಿನ್ನವೇ ಮೊದಲು ನೆರವಿಗೆ ಬರುತ್ತದೆ ಎಂಬ ಸತ್ಯ ಸದಾ ಪ್ರಚಲಿತದಲ್ಲಿದೆ. ಅಲ್ಲದೆ ಇನ್ನೊಂದೆಡೆ ಪರಿಣಿತರು ಹೇಳುವಂತೆ ಬಂಗಾರವು ಇಂದು ಸುರಕ್ಷಿತ ಹಾಗೂ ಉತ್ತಮ ಹೂಡಿಕೆಯ ಸಾಧನವೂ ಆಗಿದೆ.

  MORE
  GALLERIES

 • 211

  Gold-Silver Price Today: ಚಿನ್ನ ಪ್ರಿಯರಿಗೆ ಕೊಂಚ ನೆಮ್ಮದಿ, ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

  ಹಾಗಾಗಿ ಭವಿಷ್ಯದ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡೇ ಜನರು ಚಿನ್ನವನ್ನು ಕೊಳ್ಳುತ್ತಿರುತ್ತಾರೆ. ಅದರಲ್ಲೂ ಭಾರತದಂತಹ ದೇಶದಲ್ಲಿ ಚಿನ್ನ ಖರೀದಿ ಮಾಡುವವರ ಸಂಖ್ಯೆ ಹೆಚ್ಚೇ ಆಗಿದೆ ಎಂದು ಹೇಳಬಹುದು. ಯಾವುದೇ ಶುಭ ಕಾರ್ಯಗಳಿದ್ದಲ್ಲಿ ಚಿನ್ನದ ಖರೀದಿ ನಡೆದೇ ನಡೆಯುತ್ತದೆ.

  MORE
  GALLERIES

 • 311

  Gold-Silver Price Today: ಚಿನ್ನ ಪ್ರಿಯರಿಗೆ ಕೊಂಚ ನೆಮ್ಮದಿ, ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

  ಇನ್ನು ಶುದ್ಧ ಚಿನ್ನ ಅಂದರೆ ಅಪರಂಜಿ (24 ಕ್ಯಾರಟ್) ಹಾಗೂ ಆಭರಣ ಚಿನ್ನ (22 ಕ್ಯಾರಟ್) ಖರೀದಿಸಬಹುದಾಗಿದ್ದು ಅದನ್ನು ಆಭರಣ ಮಳಿಗೆಗಳು ಅಥವಾ ಬ್ಯಾಂಕುಗಳ ಮೂಲಕ ಕೊಳ್ಳಬಹುದಾಗಿದೆ.

  MORE
  GALLERIES

 • 411

  Gold-Silver Price Today: ಚಿನ್ನ ಪ್ರಿಯರಿಗೆ ಕೊಂಚ ನೆಮ್ಮದಿ, ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

  ಚಿನ್ನವು ಹಣದುಬ್ಬರದ ವಿರುದ್ಧವೂ ರಕ್ಷಣಾತ್ಮಕ ಬೇಲಿಯನ್ನು ನಿರ್ಮಿಸುತ್ತದೆ. ಡಾಲರ್-ರೂಪಾಯಿ ವಿರುದ್ಧದ ಪೈಪೋಟಿಯಲ್ಲಿ ತನ್ನದೆ ಆದ ಪಾತ್ರ ಹೊಂದಿದೆ.

  MORE
  GALLERIES

 • 511

  Gold-Silver Price Today: ಚಿನ್ನ ಪ್ರಿಯರಿಗೆ ಕೊಂಚ ನೆಮ್ಮದಿ, ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

  ದೇಶವೊಂದು ತನ್ನಲ್ಲಿ ಉತ್ತಮ ಪ್ರಮಾಣದ ಚಿನ್ನ ಹೊಂದಿದ್ದಲ್ಲಿ ಅದರ ಕರೆನ್ಸಿ ಬಲಿಷ್ಠವಾಗಿರುತ್ತದೆ ಹಾಗೂ ಹಲವಾರು ಜಾಗತಿಕ ಕಾರಣಗಳಿಂದಾಗಿ ಚಿನ್ನದ ಬೆಲೆಯಲ್ಲಿ ಏರಿಳಿತವಾಗುತ್ತಿರುತ್ತದೆ. ಈ ಕಾರಣದಿಂದಾಗಿಯೇ ಚಿನ್ನದ ಬೆಲೆಯ ಪ್ರತಿನಿತ್ಯದ ಅಪ್ಡೇಟ್ ಹೂಡಿಕೆದಾರರು ಹಾಗೂ ಗ್ರಾಹಕರಿಗೆ ಸಾಕಷ್ಟು ಉಪಯುಕ್ತವಾಗಿರುತ್ತದೆ.

  MORE
  GALLERIES

 • 611

  Gold-Silver Price Today: ಚಿನ್ನ ಪ್ರಿಯರಿಗೆ ಕೊಂಚ ನೆಮ್ಮದಿ, ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

  ನಿನ್ನೆಗೆ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ ಪ್ರತಿ ಹತ್ತು ಗ್ರಾಂ 22 ಕ್ಯಾರಟ್ ಬಂಗಾರದ ಬೆಲೆ ರೂ. 52,700 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 53,500, ರೂ. 52,650, ರೂ. 52,650 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 52,800 ರೂ. ಆಗಿದೆ.

  MORE
  GALLERIES

 • 711

  Gold-Silver Price Today: ಚಿನ್ನ ಪ್ರಿಯರಿಗೆ ಕೊಂಚ ನೆಮ್ಮದಿ, ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

  ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,265 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,744 ಆಗಿದೆ. ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 42,120 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 45,952 ಆಗಿದೆ.

  MORE
  GALLERIES

 • 811

  Gold-Silver Price Today: ಚಿನ್ನ ಪ್ರಿಯರಿಗೆ ಕೊಂಚ ನೆಮ್ಮದಿ, ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

  ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 52,650 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 57,440 ಆಗಿದೆ. ನೂರು ಗ್ರಾಂ (100GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,26,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,74,400 ಆಗಿದೆ.

  MORE
  GALLERIES

 • 911

  Gold-Silver Price Today: ಚಿನ್ನ ಪ್ರಿಯರಿಗೆ ಕೊಂಚ ನೆಮ್ಮದಿ, ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

  ಚಿನ್ನದಂತೆ ಬೆಳ್ಳಿ ಬೆಲೆಯಲ್ಲೂ ಸಹ ಇಂದು ವ್ಯತ್ಯಾಸವಾಗಿಲ್ಲ ಹಾಗೂ ನಿನ್ನೆಯ ಬೆಲೆಯೇ ಇಂದೂ ಸಹ ಮುಂದುವರೆದಿದೆ. ಚಿನ್ನದಂತೆ ಬೆಳ್ಳಿಯೂ ಸಹ ಸಾಕಷ್ಟೂ ಬೇಡಿಕೆ ಹೊಂದಿದ್ದು ಜನರು ಇದನ್ನು ಭರವಸೆಯ ಹೂಡಿಕೆ ಎಂದೇ ಪರಿಗಣಿಸುತ್ತಾರೆ. ಒಟ್ಟಾರೆ ಇಂದು ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ದರ ರೂ. 72,200 ಆಗಿದೆ.

  MORE
  GALLERIES

 • 1011

  Gold-Silver Price Today: ಚಿನ್ನ ಪ್ರಿಯರಿಗೆ ಕೊಂಚ ನೆಮ್ಮದಿ, ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

  ವೈಜ್ಞಾನಿಕವಾಗಿ ಬೆಳ್ಳಿ ಉತ್ತಮವಾದ ಉಷ್ಣವಾಹಕಗಳಾಗಿದ್ದು ಕೆಲವು ಉಪಯುಕ್ತವಾದ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಎಲೆಕ್ಟ್ರಾನಿಕ್ಸ್ ಸೇರಿದಂತೆ ಹಲವು ವಲಯಗಳಲ್ಲಿ ಬೆಳ್ಳಿಯನ್ನು ಹೇರಳವಾಗಿ ಉಪಯೋಗಿಸಲಾಗುತ್ತದೆ.

  MORE
  GALLERIES

 • 1111

  Gold-Silver Price Today: ಚಿನ್ನ ಪ್ರಿಯರಿಗೆ ಕೊಂಚ ನೆಮ್ಮದಿ, ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

  ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 742, ರೂ. 7,420 ಹಾಗೂ ರೂ. 74,200 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,200 ಆಗಿದ್ದರೆ, ದೆಹಲಿಯಲ್ಲಿ ರೂ. 72,200, ಮುಂಬೈನಲ್ಲಿ ರೂ. 72,200 ಹಾಗೂ ಕೊಲ್ಕತ್ತದಲ್ಲೂ ರೂ. 72,200 ಗಳಾಗಿದೆ.

  MORE
  GALLERIES