ನಿನ್ನೆಗೆ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ ಯಲ್ಲಿ ಇಳಿಕೆಯಾಗಿದೆ. ಪ್ರತಿ ಹತ್ತು ಗ್ರಾಂ 22 ಕಾರಟ್ ಚಿನ್ನದ ದರ ರೂ. 52,550 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 53,550, ರೂ. 52,650, ರೂ. 52,650 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 52,800 ರೂ. ಆಗಿದೆ.
ಸತತವಾಗಿ ಎರಡು ದಿನಗಳಿಂದ ಏರುತ್ತಿದ್ದ ಚಿನ್ನದ ಬೆಲೆ ನಿನ್ನೆಗೆ ತಟಸ್ಥವಾಗಿದ್ದರೆ ಇಂದು ಇಳಿಕೆಯಾಗಿದೆ. ಇನ್ನೊಂದೆಡೆ ಬೆಳ್ಳಿ ಬೆಲೆಯಲ್ಲೂ ಅಲ್ಪ ಇಳಿಕೆ ಕಂಡುಬಂದಿದೆ ಎನ್ನಬಹುದು. ಒಟ್ಟಾರೆ ಇಂದು ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ದರ ರೂ. 72,200 ಆಗಿದೆ. ಚಿನ್ನದಂತೆ ಬೆಳ್ಳಿಯೂ ಸಹ ಹೂಡಿಕೆಯ ಸಾಧನವಾಗಿದ್ದು ಬಹಳಷ್ಟು ಜನರು ಬೆಳ್ಳಿಯ ಮೇಲೆಯೂ ಹೂಡಿಕೆ ಮಾಡುತ್ತಿರುತ್ತಾರೆ.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 748, ರೂ. 7,480 ಹಾಗೂ ರೂ. 74,800 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,800 ಆಗಿದ್ದರೆ, ದೆಹಲಿಯಲ್ಲಿ ರೂ. 72,200, ಮುಂಬೈನಲ್ಲಿ ರೂ. 72,200 ಹಾಗೂ ಕೊಲ್ಕತ್ತದಲ್ಲೂ ರೂ. 72,200 ಗಳಾಗಿದೆ.