ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. ಒಂದು ಕೆಜಿಗೆ 72,600 ಆಗಿರುವ ಬೆಳ್ಳಿ ಬೆಲೆ ನಾನೇನು ಕಮ್ಮಿ ಇಲ್ಲ ಎನ್ನುವಂತೆ ಏರಿಕೆ ಕಂಡಿದೆ. ಚಿನ್ನದಂತೆ ಬೆಳ್ಳಿಯೂ ಸಹ ಹೂಡಿಕೆಯ ಸಾಧನವಾಗಿದ್ದು ಬಹಳಷ್ಟು ಜನರು ಬೆಳ್ಳಿಯ ಮೇಲೆಯೂ ಹೂಡಿಕೆ ಮಾಡುತ್ತಿರುತ್ತಾರೆ. ಚಿನ್ನ-ಬೆಳ್ಳಿಗಳ ಬೆಲೆಗಳು ಸಾಮಾನ್ಯವಾಗಿ ಯುಎಸ್ ಡಾಲರ್ ಹಾಗೂ ರೂಪಾಯಿ ಮಧ್ಯದ ಏಳು-ಬೀಳುಗಳ ಮೇಲೆಯೂ ಅವಲಂಬಿತವಾಗಿರುತ್ತದೆ.