‘ಹಿಂದಿನಿಂದಲೂ ನಂಬಿಕೊಂಡು ಬಂದಿರುವಂತೆ ಚಿನ್ನ ಒಂದು ರೀತಿಯಲ್ಲಿ ಸೇಫ್ ಡಿಪಾಸಿಟ್ ಇದ್ದ ಹಾಗೆ. ಆರ್ಥಿಕವಾಗಿ ಯಾವುದೇ ಸಮಸ್ಯೆ ಎದುರಾದರೂ ಮೊದಲು ಮನುಷ್ಯನಿಗೆ ಕೈಬಿಡದ ಆಪದ್ಬಾಂಧವನೆಂದರೆ ಅದು ಬಂಗಾರ. ಹಾಗಾಗಿಯೇ ಜಗತ್ತಿನಾದ್ಯಂತ ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಮತ್ತು ಪ್ರತಿಯೊಬ್ಬ ಸಾಮಾನ್ಯ ಮನುಷ್ಯನೂ ಒಂದಿಷ್ಟು ಚಿನ್ನ ಖರೀದಿಸುವಲ್ಲಿ ಉತ್ಸುಕನಾಗಿಯೇ ಇರುತ್ತಾನೆ.