ಎರಡು ದಿನಗಳಿಂದ ಸತತವಾಗಿ ಏರುತ್ತಿದ್ದ ಚಿನ್ನದ ಬೆಲೆಗೆ ಇಂದು ಸ್ವಲ್ಪ ಬ್ರೇಕ್ ಬಿದ್ದಂತೆ ಕಾಣುತ್ತಿದೆ. ಏಕೆಂದರೆ ನಿನ್ನೆಗೆ ಹೋಲಿಸಿದರೆ ಇಂದು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಅಷ್ಟಕ್ಕೂ ಕಳೆದ ಎರಡು ವಾರಗಳನ್ನು ಅವಲೋಕಿಸಿದರೆ ಚಿನ್ನದ ಬೆಲೆ ಹಿಂದೆಂದಿಗಿಂತ ಚಿನ್ನ ದುಬಾರಿಯೇ ಆಗಿದೆ ಎನ್ನಬಹುದು. (image: Reliance Jewels)
ಇನ್ನು, ಕಳೆದ ಹಲವು ವರ್ಷಗಳನ್ನು ಗಮನಿಸಿದಾಗ ಚಿನ್ನವು ಹಣದುಬ್ಬರದ ವಿರುದ್ಧವೂ ಹೋರಾಡುವಂತಹ ಮಹತ್ತರ ಸಾಧನವಾಗಿದೆ. ಇತ್ತೀಚಿನ ಕೆಲ ಸಮಯದಿಂದ ಚಿನ್ನವು ಸುರಕ್ಷಿತ ಹೂಡಿಕೆಯಾಗಿಯೂ ಗಮನಸೆಳೆದಿದೆ. ಹಾಗಾಗಿಯೇ ಕೇವಲ ಆಭರಣ ಪ್ರಿಯರು ಮಾತ್ರವಲ್ಲದೆ ಸಾಕಷ್ಟು ಹೂಡಿಕೆದಾರರೂ ಸಹ ಈಗ ಚಿನ್ನದಲ್ಲಿ ಹೂಡಿಕೆ ಮಾಡಲು ಉತ್ಸಾಹ ತೋರುತ್ತಿದ್ದಾರೆ. (image: Reliance Jewels)
ಇದು ಹೂಡಿಕೆದಾರರಲ್ಲಿ ಒಂದು ಆಶಾಭಾವನೆಯನ್ನು ಮೂಡಿಸಿದರೆ ಭಾರತದ ಬಹುತೇಕ ಮಧ್ಯಮ ಕುಟುಂಬಗಳಿಗೆ ಚಿನ್ನ ಆರ್ಥಿಕವಾಗಿ ಬಂದೊದಗುವ ಕಷ್ಟದ ಕಾಲದ ಆಪದ್ಬಾಂಧವ ಎಂದೆನಿಸಿದೆ. ಹಾಗಾಗಿ ಜಗತ್ತಿನಾದ್ಯಂತ ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಚಿನ್ನಕ್ಕಿರುವ ಬೇಡಿಕೆ ಅಷ್ಟಿಷ್ಟಲ್ಲ. ಅಷ್ಟಕ್ಕೂ ಚಿನ್ನವನ್ನು ಇಂದು ಜಗತ್ತಿನಾದ್ಯಂತ ಒಂದು ಸುರಕ್ಷಿತ ಹೂಡಿಕೆಯ ವಸ್ತುವನ್ನಾಗಿ ಪರಿಗಣಿಸಲಾಗುತ್ತದೆ. (image: Reliance Jewels)
ನಿನ್ನೆಗೆ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ ಯಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪ್ರತಿ ಹತ್ತು ಗ್ರಾಂ 22 ಕಾರಟ್ ಚಿನ್ನದ ದರ ರೂ. 52,300 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 53,200, ರೂ. 52,250, ರೂ. 52,250 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 52,400 ರೂ. ಆಗಿದೆ. (image: Reliance Jewels)