ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,200 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,673 ಆಗಿದೆ. ಅದೇ ರೀತಿ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 41,600 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 45,384 ಆಗಿದೆ.
ಚಿನ್ನ ನಿನ್ನೆಯ ಬೆಲೆಯನ್ನೇ ಇಂದೂ ಸಹ ಉಳಿಸಿಕೊಂಡಿದ್ದರೆ ಇನ್ನೊಂದೆಡೆ ಬೆಳ್ಳಿ ಬೆಲೆಯಲ್ಲಿ ನಿನ್ನೆಗೆ ಹೋಲಿಸಿದರೆ ಇನ್ನಷ್ಟು ಇಳಿಕೆ ಕಂಡುಬಂದಿದೆ ಎನ್ನಬಹುದು. ಒಟ್ಟಾರೆ ಇಂದು ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ದರ ರೂ. 71,900 ಆಗಿದೆ. ಚಿನ್ನದಂತೆ ಬೆಳ್ಳಿಯೂ ಸಹ ಹೂಡಿಕೆಯ ಸಾಧನವಾಗಿದ್ದು ಬಹಳಷ್ಟು ಜನರು ಬೆಳ್ಳಿಯ ಮೇಲೆಯೂ ಹೂಡಿಕೆ ಮಾಡುತ್ತಿರುತ್ತಾರೆ.
ಬಂಗಾರದಂತೆ ಬೆಳ್ಳಿಯೂ ಸಹ ಉತ್ತಮವಾದ ಹೂಡಿಕೆಯ ಸಾಧನವಾಗಿದೆ ಹಾಗೂ ಡಾಲರ್ -ರೂಪಾಯಿ ಪೈಪೋಟಿಯಲ್ಲಿ ತನ್ನ ಪಾತ್ರವನ್ನೂ ಸಹ ಹೊಂದಿದೆ. ಆದರೆ, ಬಂಗಾರದಂತೆ ಮಾತ್ರ ಬೆಳ್ಳಿ ಬೆಲೆಯನ್ನು ಹೊಂದಿಲ್ಲ ಬದಲಾಗಿ ಅದಕ್ಕಿಂತಲೂ ಕಡಿಮೆ ಮೌಲ್ಯವುಳ್ಳದ್ದಾಗಿದೆ. ಇದಕ್ಕೆ ಕಾರಣ ಇಷ್ಟೆ, ಚಿನ್ನದಂತೆ ಬೆಳ್ಳಿಯನ್ನು ಅಪರೂಪದ ಲೋಹ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲದೆ ಜಾಗತಿಕವಾಗಿಯೂ ಬಂಗಾರದಂತೆ ಬೆಳ್ಳಿಗೆ ಅಷ್ಟೊಂದು ಬೇಡಿಕೆ ಇರುವುದಿಲ್ಲ.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 735, ರೂ. 7,350 ಹಾಗೂ ರೂ. 73,500 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 73,500 ಆಗಿದ್ದರೆ, ದೆಹಲಿಯಲ್ಲಿ ರೂ. 71,900, ಮುಂಬೈನಲ್ಲಿ ರೂ. 71,900 ಹಾಗೂ ಕೊಲ್ಕತ್ತದಲ್ಲೂ ರೂ. 72,200 ಗಳಾಗಿದೆ.