ಇದು ಹೂಡಿಕೆದಾರರಲ್ಲಿ ಒಂದು ಆಶಾಭಾವನೆಯನ್ನು ಮೂಡಿಸಿದರೆ ಭಾರತದ ಬಹುತೇಕ ಮಧ್ಯಮ ಕುಟುಂಬಗಳಿಗೆ ಚಿನ್ನ ಆರ್ಥಿಕವಾಗಿ ಬಂದೊದಗುವ ಕಷ್ಟದ ಕಾಲದ ಆಪದ್ಬಾಂಧವ ಎಂದೆನಿಸಿದೆ. ಹಾಗಾಗಿ ಜಗತ್ತಿನಾದ್ಯಂತ ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಚಿನ್ನಕ್ಕಿರುವ ಬೇಡಿಕೆ ಅಷ್ಟಿಷ್ಟಲ್ಲ. ಅಷ್ಟಕ್ಕೂ ಚಿನ್ನವನ್ನು ಇಂದು ಜಗತ್ತಿನಾದ್ಯಂತ ಒಂದು ಸುರಕ್ಷಿತ ಹೂಡಿಕೆಯ ವಸ್ತುವನ್ನಾಗಿ ಪರಿಗಣಿಸಲಾಗುತ್ತದೆ.
ನಿನ್ನೆಗೆ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ ಯಲ್ಲಿ ಏರಿಕೆಯಾಗಿದ್ದು ಪ್ರತಿ ಹತ್ತು ಗ್ರಾಂ 22 ಕಾರಟ್ ಚಿನ್ನದ ದರ ರೂ. 52,250 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 53,050, ರೂ. 52,200, ರೂ. 52,200 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 52,350 ರೂ. ಆಗಿದೆ. ಚೆನ್ನೈ ಒಂದನ್ನು ಹೊರತುಪಡಿಸಿ ಇತರೆ ಮಹಾನಗರಗಳಲ್ಲಿ ಇಂದು ಚಿನ್ನದ ಬೆಲೆ ನಿನ್ನೆಯಂತೆಯೇ ಇರುವುದನ್ನು ಗಮನಿಸಬಹುದು.
ಇನ್ನು, ಕಳೆದ ತಿಂಗಳು ಅಂದರೆ ಡಿಸೆಂಬರ್ 2022 ರಲ್ಲಿ ಬೆಳ್ಳಿ ತನ್ನ ಗರಿಷ್ಠ ಬೆಲೆ ರೂ. 72,300 ತಲುಪಿತ್ತು ಹಾಗೂ ಕನಿಷ್ಠ ಬೆಲೆ ರೂ. 63,600ಕ್ಕೆ ಕುಸಿದಿತ್ತು. ಅದರಂತೆ ಬೆಳ್ಳಿ ಈ ತಿಂಗಳು ಯಾವ ರೀತಿ ಪ್ರದರ್ಶನ ತೋರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಚಿನ್ನದಂತೆ ಬೆಳ್ಳಿಯೂ ಸಹ ಹೂಡಿಕೆಯ ಸಾಧನವಾಗಿದ್ದು ಬಹಳಷ್ಟು ಜನರು ಬೆಳ್ಳಿಯ ಮೇಲೆಯೂ ಹೂಡಿಕೆ ಮಾಡುತ್ತಿರುತ್ತಾರೆ.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 753, ರೂ. 7,530 ಹಾಗೂ ರೂ. 75,300 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 75,300 ಆಗಿದ್ದರೆ, ದೆಹಲಿಯಲ್ಲಿ ರೂ. 72,500, ಮುಂಬೈನಲ್ಲಿ ರೂ. 72,500 ಹಾಗೂ ಕೊಲ್ಕತ್ತದಲ್ಲೂ ರೂ. 72,500 ಗಳಾಗಿದೆ.