ಬೆಲೆ ಏರಿಳಿಕೆಯಲ್ಲಿ ಚಿನ್ನ, ಬೆಳ್ಳಿಯ ಹಾವು ಏಣಿ ಆಟ ಜೋರಾಗಿದೆ. ಖರೀದಿಗೆ ಸೂಕ್ತವಾಗಿದ್ದ ಬೆಳ್ಳಿ ಮತ್ತೆ ದುಬಾರಿಯಾಗಿದೆ, ಇತ್ತ ಬಂಗಾರವೂ ಸ್ವಲ್ಪ ಏರಿಕೆ ಕಂಡಿದೆ. ಈ ವರ್ಷದ ಬಜೆಟ್ನಲ್ಲಿ ಕೇಂದ್ರ ಚಿನ್ನಾಭರಣಗಳ ಮೇಲಿನ ಸುಂಕವನ್ನು ಏರಿಕೆ ಮಾಡಲು ಯೋಜಿಸುತ್ತಿದೆ, ಈ ವಿದ್ಯಾಮಾನ ಹೇಗೆ ಪರಿಣಾಮ ಬೀರುತ್ತದೆ ಕಾದು ನೋಡಬೇಕಿದೆ. ಸದ್ಯಕ್ಕಂತೂ ಭಾರತದಲ್ಲಿ ಶುಭಸಮಾರಂಭಗಳು ಪ್ರಾರಂಭವಾಗಿದ್ದರಿಂದ ಚಿನ್ನ ಇನ್ನಷ್ಟು ಅಗ್ಗ ಆಗಲಿ ಎಂದು ಕಾಯುತ್ತಿರುವುದಂತೂ ಸತ್ಯ.
ಬಂಗಾರಕ್ಕೆ ಯಾವತ್ತಿದ್ದರೂ ಕಿಮ್ಮತ್ತಿದೆ. ಆರ್ಥಿಕ ಕಷ್ಟಕಾಲಕ್ಕೆ ಆಗುವ ಏಕೈಕ ಬಂಧು ಎಂದರೆ ಅದು ನಾವು ಮಾಡಿಸಿಕೊಳ್ಳುವ ಒಡವೆಗಳು ಎನ್ನಬಹುದು. ಕಷ್ಟ ಕಾಲದ ಬಂಧುವಾಗಿ, ಸೌಂದರ್ಯ ಹೆಚ್ಚಿಸುವ ಆಭರಣವಾಗಿ, ಪ್ರತಿಷ್ಠೆ ಸಂಕೇತವಾಗಿ ಬಂಗಾರ ತನ್ನದೇ ಪಾತ್ರ ವಹಿಸುತ್ತದೆ. ಹೀಗಾಗಿ ಬಂಗಾರ ಎಲ್ಲರಿಗೂ ಪ್ರಿಯ. ಬೆಲೆ ಎಷ್ಟೇ ಏರಿಕೆಯಾದರೂ ಚಿನ್ನ ಖರೀದಿಸುವವರ ಸಂಖ್ಯೆಗೇನೂ ಬರವಿಲ್ಲ, ಚಿನ್ನದ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತವೆ. ಇನ್ನು ಮದುವೆಯ ಸೀಸನ್ ಆದ್ರೆ ಹೇಳಬೇಕಾಗಿಲ್ಲ. ಬಲವಾದ ಮಾರಾಟ ಮುಂದುವರಿಯುತ್ತದೆ.
ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,140 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,607 ಆಗಿದೆ. ಇದೇ ರೀತಿ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 41,120 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 44,856 ಆಗಿದೆ.