ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟೆಷ್ಟಿದೆ ಎಂದು ನೋಡುವುದಾದರೆ, ಇಂದು ಬೆಂಗಳೂರಿನಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಬಂಗಾರದ ಬೆಲೆಯಲ್ಲಿ ಸಾಕಷ್ಟು ಕುಸಿತವಾಗಿದೆ, 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 50,500 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 51,500, ರೂ. 50,450, ರೂ. 50,450 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 50,600 ರೂ. ಆಗಿದೆ.
ಸಾಮಾನ್ಯವಾಗಿ ಚಿನ್ನ-ಬೆಳ್ಳಿಗಳ ದರಗಳು ಮುಖ್ಯವಾಗಿ ಅಂತಾರಾಷ್ಟ್ರೀಯ ಬೆಲೆಗಳಿಂದ ನಿತ್ಯ ಪ್ರಭಾವಿಸಲ್ಪಡುತ್ತಿರುತ್ತವೆ. ಹಾಗಾಗಿ ಒಂದು ನಿರ್ದಿಷ್ಟ ತಿಂಗಳಿನಲ್ಲಿ ಬೆಳ್ಳಿಯ ಗರಿಷ್ಠ ಹಾಗೂ ಕನಿಷ್ಠ ಪ್ರದರ್ಶನಗಳನ್ನು ಅಳೆಯಲಾಗುತ್ತಿರುತ್ತದೆ. ಕಳೆದ ಡಿಸೆಂಬರ್ 2022 ಅನ್ನು ತೆಗೆದುಕೊಂಡರೆ ಬೆಳ್ಳಿ ತನ್ನ ಗರಿಷ್ಠ ಬೆಲೆ ರೂ. 72,300 ತಲುಪಿತ್ತು ಹಾಗೂ ಕನಿಷ್ಠ ಬೆಲೆ ರೂ. 63,600ಕ್ಕೆ ಕುಸಿದಿತ್ತು.
ಇನ್ನು, ಬೆಂಗಳೂರು ನಗರ ನೋಡುವುದಾದರೆ ಬೆಳ್ಳಿ ಬೆಲೆಯಲ್ಲಿ ಗಮನಾರ್ಹಏರಿಕೆಯಾಗಿದೆ. ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 745, ರೂ. 7,450 ಹಾಗೂ ರೂ. 74,500 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,500 ಆಗಿದ್ದರೆ, ದೆಹಲಿಯಲ್ಲಿ ರೂ. 71,300, ಮುಂಬೈನಲ್ಲಿ ರೂ. 71,300 ಹಾಗೂ ಕೊಲ್ಕತ್ತದಲ್ಲೂ ರೂ. 71,300 ಗಳಾಗಿದೆ.