ಭಾರತದಲ್ಲಿ ಬಂಗಾರದ ಬೆಲೆ ದಿನ ದಿನ ಏರಿಕೆಯಾಗುತ್ತಿದ್ದು, ಬಂಗಾರ ಖರೀದಿ ಮಾಡುವವರ ಬಜೆಟ್ ಪ್ಲ್ಯಾನ್ ಉಲ್ಟಾ ಆಗುತ್ತಿದೆ ಎನ್ನಬಹುದು. ಬ್ಯಾಗ್ ತುಂಬಾ ದುಡ್ಡು ತೆಗೆದುಕೊಂಡು ಹೋದರೂ ಒಂದು ಹತ್ತು ಗ್ರಾಂ ಚಿನ್ನ ಖರೀದಿ ಮಾಡಬಹುದಷ್ಟೇ. ಅಷ್ಟರ ಮಟ್ಟಿಗೆ ಚಿನ್ನ-ಬೆಳ್ಳಿ ಎರಡೂ ಏರಿಕೆ ಆಗುತ್ತಲೇ ಇದೆ. ಈ ಗಗನಮುಖಿಯಾಗುತ್ತಿರುವ ಚಿನ್ನ ಹೂಡಿಕೆ ಮಾಡಿದವರ ಮುಖದಲ್ಲಿ ಮಾತ್ರ ನಗು ತರಿಸುತ್ತಿದೆ.
ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5, 200 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,673 ಆಗಿದೆ. ಅಲ್ಲದೇ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 41,600 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 45,384 ಆಗಿದೆ.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಬೆಳ್ಳಿ ಬೆಲೆಯಲ್ಲಿ ಹೆಚ್ಚಿನ ಏರಿಕೆಯಾಗಿದೆ. ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 717, ರೂ. 7,170 ಹಾಗೂ ರೂ. 71,700 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 71,700 ಆಗಿದ್ದರೆ, ದೆಹಲಿಯಲ್ಲಿ ರೂ. 68,500, ಮುಂಬೈನಲ್ಲಿ ರೂ. 68,500 ಹಾಗೂ ಕೊಲ್ಕತ್ತದಲ್ಲೂ ರೂ. 68,500 ಗಳಾಗಿದೆ.