Gold-Silver Price Today: ಚಿನ್ನದ ದರದಲ್ಲಿಲ್ಲ ಬದಲಾವಣೆ, ಬೆಳ್ಳಿ ಮತ್ತಷ್ಟು ಹಗುರ: ಹೀಗಿದೆ ಇಂದಿನ ರೇಟ್!.

ನಿನ್ನೆ ಆಭರಣ ಕೊಳ್ಳಬಯಸುವವರಿಗೆ ಸ್ವಲ್ಪ ಉತ್ತಮ ದಿನವಾಗಿತ್ತೆನ್ನಬಹುದು. ಏಕೆಂದರೆ ಚಿನ್ನದ ಬೆಲೆ ಸತತ ಎರಡು ದಿನಗಳಿಂದ ಅಲ್ಪವಾಗಿ ಕುಸಿದಿತ್ತು. ನಿನ್ನೆಗೆ ಹೋಲಿಸಿದರೆ ಇಂದು ಸಹ ಚಿನ್ನ ಪ್ರಿಯರಿಗೆ ಅಥವಾ ಹೂಡಿಕೆದಾರರಿಗೆ ಉತ್ತಮ ಎಂದು ಹೇಳಬಹುದು. ಆದಾಗ್ಯೂ ಚಿನ್ನದ ದರದಲ್ಲಿ ಕುಸಿತವಾಗಿಲ್ಲವಾದರೂ ಏರಿಕೆಯಂತೂ ಆಗಿಲ್ಲ, ನಿನ್ನೆಯ ಬೆಲೆಯನ್ನೇ ಚಿನ್ನ ಇಂದಿಗೂ ಕಾಪಾಡಿಕೊಂಡಿದೆ.

First published:

  • 111

    Gold-Silver Price Today: ಚಿನ್ನದ ದರದಲ್ಲಿಲ್ಲ ಬದಲಾವಣೆ, ಬೆಳ್ಳಿ ಮತ್ತಷ್ಟು ಹಗುರ: ಹೀಗಿದೆ ಇಂದಿನ ರೇಟ್!.

    ಚಿನ್ನ ಸಾಕಷ್ಟು ಆಕರ್ಷಣೀಯ ಹಾಗೂ ಜಗತ್ತಿನಾದ್ಯಂತ ಬೇಡಿಕೆಯುಳ್ಳ ಅಪರೂಪದ ಲೋಹವಾಗಿದೆ. ಜಗತ್ತಿನೆಲ್ಲೆಡೆ ಚಿನ್ನಕ್ಕೆ ಮನ್ನಣೆಯಿದ್ದು ಇದು ದೇಶಗಳ ಆರ್ಥಿಕ ಸ್ಥಿತಿಯ ಒಂದು ರೀತಿಯ ಮಾಪಕವೂ ಆಗಿದೆ ಎಂದರೆ ತಪ್ಪಿಲ್ಲ. ಒಂದು ದೇಶವು ತಾನು ಹೊಂದಿರುವ ಚಿನ್ನದ ಪ್ರಮಾಣಕ್ಕನುಸಾರವಾಗಿ ತನ್ನ ಆರ್ಥಿಕ ಪ್ರಬುದ್ಧತೆಯನ್ನು ಹೊಂದಿರುತ್ತದೆ ಎನ್ನಲಾಗುತ್ತದೆ.

    MORE
    GALLERIES

  • 211

    Gold-Silver Price Today: ಚಿನ್ನದ ದರದಲ್ಲಿಲ್ಲ ಬದಲಾವಣೆ, ಬೆಳ್ಳಿ ಮತ್ತಷ್ಟು ಹಗುರ: ಹೀಗಿದೆ ಇಂದಿನ ರೇಟ್!.

    ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸದಾ ಸ್ಥಿರವಾಗಿರುವುದಿಲ್ಲ. ಹಲವು ಜಾಗತಿಕ ಅಂಶಗಳಿಂದಾಗಿ ಇದರ ಬೆಲೆಯು ಪ್ರಭಾವಿಸಲ್ಪಡುತ್ತಿರುತ್ತದೆ. ಇನ್ನು ಭಾರತದ ವಿಷಯಕ್ಕೆ ಬಂದರೆ, ಭಾರತ ಮೊದಲಿನಿಂದಲೂ ಚಿನ್ನ ಪ್ರಿಯ ನಾಡು ಎಂದೇ ಹೇಳಬಹುದು.

    MORE
    GALLERIES

  • 311

    Gold-Silver Price Today: ಚಿನ್ನದ ದರದಲ್ಲಿಲ್ಲ ಬದಲಾವಣೆ, ಬೆಳ್ಳಿ ಮತ್ತಷ್ಟು ಹಗುರ: ಹೀಗಿದೆ ಇಂದಿನ ರೇಟ್!.

    ಹಾಗಾಗಿ ಭಾರತದಲ್ಲಿ ನಿತ್ಯ ಚಿನ್ನ ಕೊಳ್ಳೂವಿಕೆ ರೂಢಿಯಲ್ಲಿದ್ದು ಚಿನ್ನದ ಬೆಲೆಯಲ್ಲಾಗುವ ವ್ಯತ್ಯಾಸಗಳ ಮೇಲೆ ಜನರು ಗಮನವಿಟ್ಟಿರುತ್ತಾರೆ. ಈ ದೃಷ್ಟಿಯಿಂದ ನಿತ್ಯದ ಚಿನ್ನ-ಬೆಳ್ಳಿ ದರಗಳಲ್ಲಾಗುವ ಅಪ್ಡೇಟ್ ಬಲು ಉಪಯುಕ್ತವಾಗಿರುತ್ತದೆ.

    MORE
    GALLERIES

  • 411

    Gold-Silver Price Today: ಚಿನ್ನದ ದರದಲ್ಲಿಲ್ಲ ಬದಲಾವಣೆ, ಬೆಳ್ಳಿ ಮತ್ತಷ್ಟು ಹಗುರ: ಹೀಗಿದೆ ಇಂದಿನ ರೇಟ್!.

    ಹಣದುಬ್ಬರದ ಸಮಸ್ಯೆಯ ವಿರುದ್ಧವೂ ಚಿನ್ನ ಒಂದು ರಕ್ಷಣಾತ್ಮಕ ಬೇಲಿಯಾಗಿ ಕಾರ್ಯನಿರ್ವಹಿಸುತ್ತದೆ. ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆಯು ರೂ. 5,240 ಆಗಿದ್ದು ಪ್ರತಿ ಹತ್ತು ಗ್ರಾಂಗೆ ರೂ. 52,400 ಆಗಿದೆ. ಇನ್ನೊಂದೆಡೆ 24 ಕ್ಯಾರಟ್ ಬಂಗಾರದ ಬೆಲೆಯು ಪ್ರತಿ ಹತ್ತು ಗ್ರಾಂಗೆ ರೂ. 57,160 ಆಗಿದೆ.

    MORE
    GALLERIES

  • 511

    Gold-Silver Price Today: ಚಿನ್ನದ ದರದಲ್ಲಿಲ್ಲ ಬದಲಾವಣೆ, ಬೆಳ್ಳಿ ಮತ್ತಷ್ಟು ಹಗುರ: ಹೀಗಿದೆ ಇಂದಿನ ರೇಟ್!.

    ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 52,450 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 53,150, ರೂ. 52,400, ರೂ. 52,400 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 52,550 ರೂ. ಆಗಿದೆ.

    MORE
    GALLERIES

  • 611

    Gold-Silver Price Today: ಚಿನ್ನದ ದರದಲ್ಲಿಲ್ಲ ಬದಲಾವಣೆ, ಬೆಳ್ಳಿ ಮತ್ತಷ್ಟು ಹಗುರ: ಹೀಗಿದೆ ಇಂದಿನ ರೇಟ್!.

    ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,240 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,716 ಆಗಿದೆ. ಇತ್ತ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 41,920 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 45,728 ಆಗಿದೆ.

    MORE
    GALLERIES

  • 711

    Gold-Silver Price Today: ಚಿನ್ನದ ದರದಲ್ಲಿಲ್ಲ ಬದಲಾವಣೆ, ಬೆಳ್ಳಿ ಮತ್ತಷ್ಟು ಹಗುರ: ಹೀಗಿದೆ ಇಂದಿನ ರೇಟ್!.

    ಇನ್ನು ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 52,400 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 57,160 ಆಗಿದೆ. ಇತ್ತ ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,24,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,71,600 ಆಗಿದೆ.

    MORE
    GALLERIES

  • 811

    Gold-Silver Price Today: ಚಿನ್ನದ ದರದಲ್ಲಿಲ್ಲ ಬದಲಾವಣೆ, ಬೆಳ್ಳಿ ಮತ್ತಷ್ಟು ಹಗುರ: ಹೀಗಿದೆ ಇಂದಿನ ರೇಟ್!.

    ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ದರದಲ್ಲಿ ಕುಸಿತವಾಗಿದೆ. ಬೆಳ್ಳಿ ಚಿನ್ನದಷ್ಟು ಅಪರೂಪದ ಲೋಹವಲ್ಲ. ಆದರೂ ಇದಕ್ಕಿರುವ ಬೇಡಿಕೆಗೇನೂ ಕಮ್ಮಿ ಇಲ್ಲ. ಇತ್ತೀಚಿನ ಕೆಲ ಸಮಯದಿಂದ ಬೆಳ್ಳಿಯೂ ಉತ್ತಮ ಹೂಡಿಕೆಯ ಸಾಧನವಾಗಿ ಗುರುತಿಸಲ್ಪಡುತ್ತಿದೆ. ಬೆಳ್ಳಿಗೂ ವಿಶ್ವದೆಲ್ಲೆಡೆ ಸಾಕಷ್ಟು ಬೇಡಿಕೆ ಇದೆ ಎಂದು ಹೇಳಬಹುದು.

    MORE
    GALLERIES

  • 911

    Gold-Silver Price Today: ಚಿನ್ನದ ದರದಲ್ಲಿಲ್ಲ ಬದಲಾವಣೆ, ಬೆಳ್ಳಿ ಮತ್ತಷ್ಟು ಹಗುರ: ಹೀಗಿದೆ ಇಂದಿನ ರೇಟ್!.

    ಇಂದು ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ದರ ರೂ. 69,950 ಆಗಿದೆ. ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿಯನ್ನು ಅಧಿಕೃತ ಆಭರಣ ಮಳಿಗೆಗಳು ಮತ್ತು ಬ್ಯಾಂಕುಗಳಿಂದ ಕೊಳ್ಳಬಹುದಾಗಿದೆ.

    MORE
    GALLERIES

  • 1011

    Gold-Silver Price Today: ಚಿನ್ನದ ದರದಲ್ಲಿಲ್ಲ ಬದಲಾವಣೆ, ಬೆಳ್ಳಿ ಮತ್ತಷ್ಟು ಹಗುರ: ಹೀಗಿದೆ ಇಂದಿನ ರೇಟ್!.

    ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 720, ರೂ. 7,200 ಹಾಗೂ ರೂ. 72,000 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 72,000 ಆಗಿದ್ದರೆ, ದೆಹಲಿಯಲ್ಲಿ ರೂ. 69,950, ಮುಂಬೈನಲ್ಲಿ ರೂ. 69,950 ಹಾಗೂ ಕೊಲ್ಕತ್ತದಲ್ಲೂ ರೂ. 69,950 ಗಳಾಗಿದೆ.

    MORE
    GALLERIES

  • 1111

    Gold-Silver Price Today: ಚಿನ್ನದ ದರದಲ್ಲಿಲ್ಲ ಬದಲಾವಣೆ, ಬೆಳ್ಳಿ ಮತ್ತಷ್ಟು ಹಗುರ: ಹೀಗಿದೆ ಇಂದಿನ ರೇಟ್!.

    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

    MORE
    GALLERIES