ಹಣದುಬ್ಬರ ಎಂಬುವುದು ದೈನಂದಿನ ಸಾಮಾನು ಸರಂಜಾಮುಗಳ ಬೆಲೆಯನ್ನೇರಿಸುವ ಸಮಸ್ಯೆಯಾಗಿದ್ದು ಇದನ್ನು ಹತೋಟಿಯಲ್ಲಿರಿಸಲು ಬಂಗಾರವನ್ನೂ ಕೂಡ ಅಸ್ತ್ರವನ್ನಾಗಿ ಬಳಸಬಹುದಾಗಿದೆ. ಅಲ್ಲದೇ ಹೂಡಿಕೆದಾರರಲ್ಲೂ ಇತ್ತೀಚಿನ ಕೆಲ ಸಮಯದಿಂದ ಚಿನ್ನ ಒಂದು ಆಕರ್ಷಕ ಹೂಡಿಕೆಯ ಸಾಧನವಾಗಿ ಮನ್ನಣೆ ಗಳಿಸಿದೆ. ಕಳೆದ ಎರಡು ವಾರಗಳನ್ನು ಅವಲೋಕಿಸಿದರೆ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಿದೆಯಾದರೂ ಹಿಂದೆಂದಿಗಿಂತ ಚಿನ್ನ ದುಬಾರಿಯ ಪಥದಲ್ಲೇ ಸಾಗುತ್ತಿರುವುದನ್ನು ಕಾಣಬಹುದಾಗಿದೆ.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 725, ರೂ. 7,250 ಹಾಗೂ ರೂ. 72,500 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 72,500 ಆಗಿದ್ದರೆ, ದೆಹಲಿಯಲ್ಲಿ ರೂ. 70,400, ಮುಂಬೈನಲ್ಲಿ ರೂ. 70,400 ಹಾಗೂ ಕೊಲ್ಕತ್ತದಲ್ಲೂ ರೂ. 70,400 ಗಳಾಗಿದೆ.