ಚಿನ್ನ ಒಂದು ಅಪರೂಪದ ಹಾಗೂ ಜಾಗತಿಕವಾಗಿ ಅಪಾರ ಬೇಡಿಕೆ ಹೊಂದಿರುವ ಲೋಹ. ಪ್ರಾಚೀನ ಕಾಲದಿಂದಲೂ ಸಹ ಚಿನ್ನ ಆಕರ್ಷಣೀಯ ವಸ್ತುವಾಗಿದೆ. ಹಿಂದಿನ ನಮ್ಮ ಪೂರ್ವಜರು ಏನಿಲ್ಲವೆಂದರೂ ಚಿನ್ನದ ಏನಾದರೂ ವಸ್ತುವನ್ನು.ಆಭರಣಗಳನ್ನು ಮನೆಯಲ್ಲಿ ಮಾಡಿಸಿ ಇರಿಸುತ್ತಿದ್ದರು. ಈಗಲೂ ಅದು ಮುಂದುವರೆದಿದೆ, ಕಾರಣ ಚಿನ್ನ ಯಾವತ್ತಿಗೂ ಬೆಲೆಯುಳ್ಳ ವಸ್ತುವಾಗಿದ್ದು ಕಷ್ಟಕರ ಆರ್ಥಿಕ ಪರಿಸ್ಥಿತಿ ತಲೆದೋರಿದಾಗ ಮೊದಲಿಗೆ ಕೈಹಿಡಿಯುತ್ತದೆ.
ಪ್ರಸ್ತುತ ಬಂಗಾರವು ಒಂದು ರೀತಿಯ ಭದ್ರತೆ ಒದಗಿಸುವ ಸಾಧನ ಆಗಿರುವುದರಿಂದ ಭವಿಷ್ಯದಲ್ಲಿನ ಆರ್ಥಿಕ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಜನರು ಚಿನ್ನವನ್ನು ಕೊಳ್ಳುತ್ತಾರೆ. ಅದರಲ್ಲೂ ಭಾರತೀಯರು ಚಿನ್ನ ಕೊಳ್ಳುವುದರಲ್ಲಿ ಸಾಕಷ್ಟು ಮುಂದಿದ್ದಾರೆ. ಯಾವುದೇ ಶುಭ ಸಂದರ್ಭಗಳಿದ್ದಾಗ ಚಿನ್ನ ಕೊಳ್ಳುವುದು ಒಂದು ವಾಡಿಕೆಯಾಗಿದ್ದು ನಿತ್ಯ ಕೋಟ್ಯಂತರ ರೂ.ಗಳಷ್ಟು ಚಿನ್ನದ ವ್ಯವಹಾರ ನಡೆಯುತ್ತಿರುತ್ತದೆ.
ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟೆಷ್ಟಿದೆ ಎಂದು ನೋಡುವುದಾದರೆ, ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 52,550 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 53,350, ರೂ. 52,500, ರೂ. 52,500 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 52,650 ರೂ. ಆಗಿದೆ.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 720, ರೂ. 7,200 ಹಾಗೂ ರೂ. 72,000 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 72,000 ಆಗಿದ್ದರೆ, ದೆಹಲಿಯಲ್ಲಿ ರೂ. 70,000, ಮುಂಬೈನಲ್ಲಿ ರೂ. 70,000 ಹಾಗೂ ಕೊಲ್ಕತ್ತದಲ್ಲೂ ರೂ. 70,000 ಗಳಾಗಿದೆ.