ಇಂದು ಚಿನ್ನ ಒಂದು ರೀತಿಯ ಭದ್ರತೆ ಒದಗಿಸುವ ಸಾಧನ ಆಗಿರುವುದರಿಂದ ಭವಿಷ್ಯದಲ್ಲಿನ ಆರ್ಥಿಕ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಜನರು ಚಿನ್ನವನ್ನು ಕೊಳ್ಳುತ್ತಾರೆ. ಅಲ್ಲದೆ, ಚಿನ್ನದ ಬೆಲೆ ಸದಾ ಸ್ಥಿರವಾಗಿರುವುದಿಲ್ಲ, ಹಲವು ಅಂತಾರಾಷ್ಟ್ರೀಯ ವಿದ್ಯಮಾನಗಳಿಂದಾಗಿ ಅದರ ಬೆಲೆಯು ಪ್ರಭಾವಿಸಲ್ಪಡುತ್ತಿರುತ್ತದೆ. ಹಾಗಾಗಿ ಚಿನ್ನ ಕೊಳ್ಳಬಯಸುವವರು ಚಿನ್ನದ ಬೆಲೆಗಳ ಮೇಲೆ ಸದಾ ಕಣ್ಣಿಟ್ಟಿರುತ್ತಾರೆ. ಅಂತೆಯೇ, ಈ ನಿತ್ಯದ ಅಪ್ಡೇಟ್ ಆಯಾ ಪ್ರದೇಶಗಳ ಗ್ರಾಹಕರಿಗೆ ಸಾಕಷ್ಟು ಸಹಾಯಕವಾಗುತ್ತದೆ.
ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಚಿನ್ನದ ಬೆಲೆ ನೋಡುವುದಾದರೆ, ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 52,650 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 53,400, ರೂ. 52,600, ರೂ. 52,600 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 52,750 ರೂ. ಆಗಿದೆ.