ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿ ಸಹಜ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ಖರೀದಿ ವ್ಯವಹಾರವನ್ನು ಇದು ಹೊಂದಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 52,450 ಆಗಿದೆ. ಮಿಕ್ಕಂತೆ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಚಿನ್ನದ ಬೆಲೆ (ಹತ್ತು ಗ್ರಾಂ) ರೂ. 53,200 ಆಗಿದ್ದರೆ ಮುಂಬೈನಲ್ಲಿನ ಬೆಲೆ ರೂ. 52,400 ಆಗಿದೆ. ಕೊಲ್ಕತ್ತದಲ್ಲಿ ಬೆಲೆ ರೂ. 52,400 ಆಗಿದ್ದರೆ ರಾಜಧಾನಿ ದೆಹಲಿಯಲ್ಲಿನ ಚಿನ್ನದ ಬೆಲೆ ರೂ. 52,450 ಆಗಿದೆ.
ಇನ್ನು ತಿಂಗಳಿನ ಅವಧಿಯಲ್ಲಿ ಬೆಳ್ಳಿಯ ಗರಿಷ್ಠ ಹಾಗೂ ಕನಿಷ್ಠ ಬೆಲೆಯನ್ನು ಗಮನಿಸುವುದಾದರೆ ಕಳೆದ ತಿಂಗಳಿನಲ್ಲಿ ಬೆಳ್ಳಿಯ ಗರಿಷ್ಠ ಬೆಲೆ ಜನವರಿ 16 ರಂದು ಪ್ರತಿ ಕೆಜಿಗೆ ರೂ. 72,900 ತಲುಪಿತ್ತು ಹಾಗೂ ಕನಿಷ್ಠ ಬೆಲೆ ಜನವರಿ 6 ರಂದು ರೂ. 71,000ಕ್ಕೆ ಕುಸಿದಿತ್ತು. ಈ ತಿಂಗಳಿನಲ್ಲಿ ಬೆಳ್ಳಿ ದರ ಯಾವ ರೀತಿ ಪ್ರದರ್ಶನ ತೋರಲಿದೆ ಎಂಬುದನ್ನು ಕಾದು ನೋಡಬೇಕಷ್ಟೆ.