Gold-Silver Price Today: ಕೈಗೆಟುಕದ ಚಿನ್ನ, ಬೆಳ್ಳಿ ದರ ಇಳಿಕೆ: ಹೀಗಿದೆ ನೋಡಿ ಇಂದಿನ ದರ

ನಿನ್ನೆಗೆ ಹೋಲಿಸಿದರೆ ಇಂದು ಮಾರುಕಟ್ಟೆಯಲ್ಲಿ ಚಿನ್ನ ಮತ್ತೆ ಏರಿಕೆಯತ್ತ ಮುಖ ಮಾಡಿದಂತಿದೆ. ಇಂದು ಪ್ರತಿ ಹತ್ತು ಗ್ರಾಂ ಆಭರಣ ಚಿನ್ನದ ಬೆಲೆಯು ರೂ. 52,900 ಆಗಿದ್ದು ನಿನ್ನೆಗಿಂತ ರೂ. 150 ರಷ್ಟು ದುಬಾರಿಯಾಗಿದೆ. ಅಷ್ಟಕ್ಕೂ ಒಂದು ವರ್ಷದ ಹಿಂದಿದ್ದ ಬೆಲೆಗೆ ಹೋಲಿಸಿದರೆ ಪ್ರಸ್ತುತ ಚಿನ್ನ ಸಾಕಷ್ಟು ಏರಿಕೆಯಾಗಿದೆ ಅಂತಾನೇ ಹೇಳಬಹುದು.

First published:

 • 111

  Gold-Silver Price Today: ಕೈಗೆಟುಕದ ಚಿನ್ನ, ಬೆಳ್ಳಿ ದರ ಇಳಿಕೆ: ಹೀಗಿದೆ ನೋಡಿ ಇಂದಿನ ದರ

  ಚಿನ್ನದ ದರ ವರ್ಷದಿಂದ ವರ್ಷಕ್ಕೆ ಈ ರೀತಿ ಏರಿಕೆಯಾಗುತ್ತಿರುವುದರಿಂದಲೇ ಇದು ಹೂಡಿಕೆದಾರರ ನೆಚ್ಚಿನ ವಸ್ತುವಾಗಿದೆ ಎಂದರೆ ತಪ್ಪಾಗಲಾರದು. ಚಿನ್ನ ಒಂದು ಅಪರೂಪದ ಲೋಹವಾಗಿದ್ದು ಜಾಗತಿಕವಾಗಿಯೂ ಅಪಾರ ಬೇಡಿಕೆ ಹೊಂದಿದೆ. ರಾಷ್ಟ್ರಗಳ ಆರ್ಥಿಕ ಸ್ಥಿತಿಯೂ ಸಹ ಅವು ಹೊಂದಿರುವ ಚಿನ್ನದ ಪ್ರಮಾಣದ ಮೇಲೆ ಅವಲಂಬಿತವೂ ಆಗಿರುತ್ತದೆ.

  MORE
  GALLERIES

 • 211

  Gold-Silver Price Today: ಕೈಗೆಟುಕದ ಚಿನ್ನ, ಬೆಳ್ಳಿ ದರ ಇಳಿಕೆ: ಹೀಗಿದೆ ನೋಡಿ ಇಂದಿನ ದರ

  ಭಾರತ ಮೊದಲಿನಿಂದಲೂ ಚಿನ್ನಕ್ಕಾಗಿ ಹೆಸರುವಾಸಿಯಾಗಿದೆ. ಮದುವೆಯಿಂದ ಹಿಡಿದು ಅನೇಕ ಇತರೆ ಶುಭ ಕಾರ್ಯಗಳಲ್ಲಿ ಭಾರತೀಯರು ಬಂಗಾರವನ್ನು ಯಥೇಚ್ಛವಾಗಿ ಕೊಳ್ಳುತ್ತಾರೆ. ನಿತ್ಯ ಕೋಟ್ಯಂತರ ರೂಪಾಯಿಗಳಷ್ಟು ಚಿನ್ನ ಖರೀದಿ ವ್ಯವಹಾರಗಳು ಇಲ್ಲಿ ನಡೆಯುತ್ತವೆ.

  MORE
  GALLERIES

 • 311

  Gold-Silver Price Today: ಕೈಗೆಟುಕದ ಚಿನ್ನ, ಬೆಳ್ಳಿ ದರ ಇಳಿಕೆ: ಹೀಗಿದೆ ನೋಡಿ ಇಂದಿನ ದರ

  ಅಲ್ಲದೇ, ಚಿನ್ನದ ಬೇಡಿಕೆಯು ಜಾಗತಿಕ ಮಾರುಕಟ್ಟೆಯಲ್ಲೂ ಅಪಾರವಾಗಿದೆ. ಸಾಕಷ್ಟು ದೇಶಗಳು ವಿದೇಶಿ ವಿನಿಮಯ ರೂಪದಲ್ಲಿ ಚಿನ್ನದ ಸಂಗ್ರಹ ಹೊಂದಿರುವುದು ಎಲ್ಲರಿಗೂ ಗೊತ್ತೇ ಇದೆ, ಏಕೆಂದರೆ ಚಿನ್ನ ಎಲ್ಲ ದೇಶಗಳಲ್ಲೂ ಮಾನ್ಯತೆ ಪಡೆದಿದ್ದು ಎಲ್ಲರಿಂದಲೂ ಸ್ವೀಕರಿಸಲ್ಪಡುತ್ತದೆ.

  MORE
  GALLERIES

 • 411

  Gold-Silver Price Today: ಕೈಗೆಟುಕದ ಚಿನ್ನ, ಬೆಳ್ಳಿ ದರ ಇಳಿಕೆ: ಹೀಗಿದೆ ನೋಡಿ ಇಂದಿನ ದರ

  ಕೆಲ ದಿನಗಳ ಹಿಂದಷ್ಟೇ 24 ಕ್ಯಾರಟ್ ಚಿನ್ನದ ಬೆಲೆಯು ಅರವತ್ತು ಸಾವಿರದ ಗಡಿ ದಾಟಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈಗಲೂ ಅಪರಂಜಿ ಚಿನ್ನವು ಹೆಚ್ಚು ಕಡಿಮೆ ಅದೇ ಮೊತ್ತದ ಸುತ್ತ ತನ್ನ ದರವನ್ನು ಕಾಯ್ದುಕೊಳ್ಳುತ್ತಿದೆ ಎನ್ನಬಹುದು.

  MORE
  GALLERIES

 • 511

  Gold-Silver Price Today: ಕೈಗೆಟುಕದ ಚಿನ್ನ, ಬೆಳ್ಳಿ ದರ ಇಳಿಕೆ: ಹೀಗಿದೆ ನೋಡಿ ಇಂದಿನ ದರ

  ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿ ಸಹಜ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ಖರೀದಿ ವ್ಯವಹಾರವನ್ನು ಇದು ಹೊಂದಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 52,950 ಆಗಿದೆ. ಮಿಕ್ಕಂತೆ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಚಿನ್ನದ ಬೆಲೆ (ಹತ್ತು ಗ್ರಾಂ) ರೂ. 53,750 ಆಗಿದ್ದರೆ ಮುಂಬೈನಲ್ಲಿನ ಬೆಲೆ ರೂ. 52,900 ಆಗಿದೆ. ಕೊಲ್ಕತ್ತದಲ್ಲಿ ಬೆಲೆ ರೂ. 52,900 ಆಗಿದ್ದರೆ ರಾಜಧಾನಿ ದೆಹಲಿಯಲ್ಲಿನ ಚಿನ್ನದ ಬೆಲೆ ರೂ. 53,050 ಆಗಿದೆ.

  MORE
  GALLERIES

 • 611

  Gold-Silver Price Today: ಕೈಗೆಟುಕದ ಚಿನ್ನ, ಬೆಳ್ಳಿ ದರ ಇಳಿಕೆ: ಹೀಗಿದೆ ನೋಡಿ ಇಂದಿನ ದರ

  ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,290 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,771 ಆಗಿದೆ. ಇತ್ತ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 42,320 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 46,168 ಆಗಿದೆ.

  MORE
  GALLERIES

 • 711

  Gold-Silver Price Today: ಕೈಗೆಟುಕದ ಚಿನ್ನ, ಬೆಳ್ಳಿ ದರ ಇಳಿಕೆ: ಹೀಗಿದೆ ನೋಡಿ ಇಂದಿನ ದರ

  ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 52,900 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 57,710 ಆಗಿದೆ. ನೂರು ಗ್ರಾಂ (100GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,29,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,77,100 ಆಗಿದೆ.

  MORE
  GALLERIES

 • 811

  Gold-Silver Price Today: ಕೈಗೆಟುಕದ ಚಿನ್ನ, ಬೆಳ್ಳಿ ದರ ಇಳಿಕೆ: ಹೀಗಿದೆ ನೋಡಿ ಇಂದಿನ ದರ

  ಇನ್ನು ಬೆಳ್ಳಿಯ ವಿಷಯಕ್ಕೆ ಬಂದರೆ ಚಿನ್ನದಂತೆ ಸಾಮಾನ್ಯವಾಗಿ ಬೆಳ್ಳಿ ದರದಲ್ಲೂ ವ್ಯತ್ಯಾಸ ಆಗುತ್ತಲೇ ಇರುತ್ತದೆ. ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ ಬೆಳ್ಳಿ ದರ ಅತ್ಯಲ್ಪ ಮಟ್ಟದಲ್ಲಿ ಇಳಿಕೆಯಾಗಿದೆ ಎಂದು ಹೇಳಬಹುದು. ಅಷ್ಟಕ್ಕೂ ಇಂದು ಭಾರತದ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಬೆಳ್ಳಿ ಬೆಲೆ 71,350 ರೂ. ಆಗಿದೆ.

  MORE
  GALLERIES

 • 911

  Gold-Silver Price Today: ಕೈಗೆಟುಕದ ಚಿನ್ನ, ಬೆಳ್ಳಿ ದರ ಇಳಿಕೆ: ಹೀಗಿದೆ ನೋಡಿ ಇಂದಿನ ದರ

  ಇನ್ನು ತಿಂಗಳಿನ ಅವಧಿಯಲ್ಲಿ ಬೆಳ್ಳಿಯ ಗರಿಷ್ಠ ಹಾಗೂ ಕನಿಷ್ಠ ಬೆಲೆಯನ್ನು ಗಮನಿಸುವುದಾದರೆ ಕಳೆದ ತಿಂಗಳಿನಲ್ಲಿ ಬೆಳ್ಳಿಯ ಗರಿಷ್ಠ ಬೆಲೆ ಜನವರಿ 16 ರಂದು ಪ್ರತಿ ಕೆಜಿಗೆ ರೂ. 72,900 ತಲುಪಿತ್ತು ಹಾಗೂ ಕನಿಷ್ಠ ಬೆಲೆ ಜನವರಿ 6 ರಂದು ರೂ. 71,000ಕ್ಕೆ ಕುಸಿದಿತ್ತು. ಈ ತಿಂಗಳಿನಲ್ಲಿ ಬೆಳ್ಳಿ ದರ ಯಾವ ರೀತಿ ಪ್ರದರ್ಶನ ತೋರಲಿದೆ ಎಂಬುದನ್ನು ಕಾದು ನೋಡಬೇಕಷ್ಟೆ.

  MORE
  GALLERIES

 • 1011

  Gold-Silver Price Today: ಕೈಗೆಟುಕದ ಚಿನ್ನ, ಬೆಳ್ಳಿ ದರ ಇಳಿಕೆ: ಹೀಗಿದೆ ನೋಡಿ ಇಂದಿನ ದರ

  ಬೆಂಗಳೂರು ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 735, ರೂ. 7,350 ಹಾಗೂ ರೂ. 73,500 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 73,500 ಆಗಿದ್ದರೆ ದೆಹಲಿಯಲ್ಲಿ ರೂ. 71,350 ಮುಂಬೈನಲ್ಲಿ ರೂ. 71,350 ಹಾಗೂ ಕೊಲ್ಕತ್ತದಲ್ಲೂ ರೂ. 71,350 ಗಳಾಗಿದೆ.

  MORE
  GALLERIES

 • 1111

  Gold-Silver Price Today: ಕೈಗೆಟುಕದ ಚಿನ್ನ, ಬೆಳ್ಳಿ ದರ ಇಳಿಕೆ: ಹೀಗಿದೆ ನೋಡಿ ಇಂದಿನ ದರ

  ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

  MORE
  GALLERIES