Gold-Silver Price Today: ಮತ್ತೆ ಏರಿಕೆಯಾಯ್ತು ಬಂಗಾರದ ದರ: ಬೆಳ್ಳಿ ಮಾತ್ರ ಸ್ಥಿರ: ಹೀಗಿದೆ ಇಂದಿನ ರೇಟ್​

ಕಳೆದೆರೆಡು ದಿನಗಳಲ್ಲಿ ಚಿನ್ನ ಇಳಿಕೆ ಆಗಿದ್ದನ್ನು ಕಂಡು ನಿಟ್ಟುಸಿರು ಬಿಟ್ಟಿದ್ದ ಗ್ರಾಹಕರಿಗೆ ಚಿನ್ನ ಮತ್ತೆ ಇಂದು ಶಾಕ್ ನೀಡಿದೆ. ಅತ್ತ ಬೆಳ್ಳಿ ಏರಿಕೆಯೋ ಇಲ್ಲದೇ, ಇಳಿಕೆಯೂ ಇಲ್ಲದೆ ಇಂದು ಸ್ಥಿರವಾಗಿದೆ.

 • Trending Desk
 • |
 •   | Bangalore [Bangalore], India
First published:

 • 112

  Gold-Silver Price Today: ಮತ್ತೆ ಏರಿಕೆಯಾಯ್ತು ಬಂಗಾರದ ದರ: ಬೆಳ್ಳಿ ಮಾತ್ರ ಸ್ಥಿರ: ಹೀಗಿದೆ ಇಂದಿನ ರೇಟ್​

  ಚಿನ್ನ-ಬೆಳ್ಳಿ ಹಾವು-ಏಣಿ ಆಟ ಆಡುತ್ತಿವೆ. ಆರು ಸಾವಿರ ಗಡಿ ತಲುಪಿದರೂ ಆಶ್ಚರ್ಯ ಇಲ್ಲ ಎನ್ನುವಂತಾಗಿದೆ. ಹೀಗಾಗಿ ಬಂಗಾರ-ಬೆಳ್ಳಿ ಖರೀದಿಗೆ ಮುಂದಾಗುವವರು ಎಂದು ಚಿನ್ನದ ಬೆಲೆ ಕಡಿಮೆ ಇರುತ್ತದೆಯೋ ಅಂದೇ ಬಂಗಾರದ ಅಂಗಡಿಗೆ ಹೋಗಿ ಕೊಳ್ಳುವುದು ಸೂಕ್ತ.

  MORE
  GALLERIES

 • 212

  Gold-Silver Price Today: ಮತ್ತೆ ಏರಿಕೆಯಾಯ್ತು ಬಂಗಾರದ ದರ: ಬೆಳ್ಳಿ ಮಾತ್ರ ಸ್ಥಿರ: ಹೀಗಿದೆ ಇಂದಿನ ರೇಟ್​

  ಅಂದ ಹಾಗೆ ಬಂಗಾರದ ರೇಟ್ ಇಂದು ಕೊಂಚ ಹೆಚ್ಚಾಗಿದೆ. ನಿನ್ನೆ ಪ್ರತಿ ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ರೂ. 5,240 ಆಗಿತ್ತು. ಇಂದು 25 ರೂ ಹೆಚ್ಚಳವಾಗುವ ಮೂಲಕ 5,265 ರೂ ಆಗಿದೆ.

  MORE
  GALLERIES

 • 312

  Gold-Silver Price Today: ಮತ್ತೆ ಏರಿಕೆಯಾಯ್ತು ಬಂಗಾರದ ದರ: ಬೆಳ್ಳಿ ಮಾತ್ರ ಸ್ಥಿರ: ಹೀಗಿದೆ ಇಂದಿನ ರೇಟ್​

  ಬಂಗಾರದ ಬಗ್ಗೆ ಹೆಚ್ಚೇನೂ ಹೇಳುವ ಅಗತ್ಯವೇ ಇಲ್ಲ. ಚಿಕ್ಕ ಮಕ್ಕಳಿಗೂ ಬಂಗಾರದ ಬೆಲೆ ಗೊತ್ತು. ಚಿನ್ನ ಎಂಬುದು ಮೊದಲಿನಿಂದಲೂ ಸಾಕಷ್ಟು ಆಕರ್ಷಣೆಯುಳ್ಳ ಮೌಲ್ಯಯುತ ವಸ್ತುವಾಗಿದೆ. ಹೂಡಿಕೆಗೂ ಆದರ್ಶಪ್ರಾಯವಾಗಿರುವ ಚಿನ್ನವನ್ನು ಪ್ರತಿನಿತ್ಯ ಖರೀದಿಸುಲೇ ಇರುತ್ತಾರೆ. ಪರಿಣಿತರು ಹೇಳುವಂತೆ ಬಂಗಾರವು ಇಂದು ಸಾಕಷ್ಟು ಸುರಕ್ಷಿತ ಹಾಗೂ ಉತ್ತಮ ಹೂಡಿಕೆಯ ಸಾಧನವಾಗಿದೆ.

  MORE
  GALLERIES

 • 412

  Gold-Silver Price Today: ಮತ್ತೆ ಏರಿಕೆಯಾಯ್ತು ಬಂಗಾರದ ದರ: ಬೆಳ್ಳಿ ಮಾತ್ರ ಸ್ಥಿರ: ಹೀಗಿದೆ ಇಂದಿನ ರೇಟ್​

  ಭಾರತೀಯರಿಗೆ ಮೊದಲಿನಿಂದಲೂ ಚಿನ್ನ ಹಾಗೂ ಅದರ ಆಭರಣಗಳೆಂದರೆ ಹೆಚ್ಚು ಆಕರ್ಷಣೆ ಎಂತಲೇ ಹೇಳಬಹುದು. ಹಾಗಾಗಿಯೇ ಯಾವುದೇ ಶುಭ ಸಂದರ್ಭಗಳಿದ್ದಾಗ ಭಾರತೀಯರಾದವರು ಚಿನ್ನ ಖರೀದಿ ಮಾಡದೆ ಇರಲಾರರು.

  MORE
  GALLERIES

 • 512

  Gold-Silver Price Today: ಮತ್ತೆ ಏರಿಕೆಯಾಯ್ತು ಬಂಗಾರದ ದರ: ಬೆಳ್ಳಿ ಮಾತ್ರ ಸ್ಥಿರ: ಹೀಗಿದೆ ಇಂದಿನ ರೇಟ್​

  ಆದರೆ, ಚಿನ್ನದ ಬೆಲೆ ಎಂಬುದು ಸದಾ ಸ್ಥಿರವಾಗಿರುವಂಥದ್ದಲ್ಲ. ಅಂತಾರಾಷ್ಟ್ರೀಯವಾಗಿ ಹಲವಾರು ಕಾರಣಗಳಿಂದಾಗಿ ಅದರ ಬೆಲೆಯಲ್ಲಿ ಏರಿಳಿತವಾಗುತ್ತಲೇ ಇರುತ್ತದೆ. ಈ ಕಾರಣದಿಂದಾಗಿಯೇ ಚಿನ್ನದ ಬೆಲೆಯ ಪ್ರತಿನಿತ್ಯದ ಅಪ್ಡೇಟ್ ಹೂಡಿಕೆದಾರರು ಹಾಗೂ ಗ್ರಾಹಕರಿಗೆ ಸಾಕಷ್ಟು ಉಪಯುಕ್ತವಾಗಿರುತ್ತದೆ.

  MORE
  GALLERIES

 • 612

  Gold-Silver Price Today: ಮತ್ತೆ ಏರಿಕೆಯಾಯ್ತು ಬಂಗಾರದ ದರ: ಬೆಳ್ಳಿ ಮಾತ್ರ ಸ್ಥಿರ: ಹೀಗಿದೆ ಇಂದಿನ ರೇಟ್​

  ನಿನ್ನೆಗೆ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ ಪ್ರತಿ ಹತ್ತು ಗ್ರಾಂ 22 ಕ್ಯಾರಟ್ ಬಂಗಾರದ ಬೆಲೆ ಏರಿಕೆ ಕಂಡಿದ್ದು, ರೂ. 52,700 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 53,650, ರೂ. 52,650, ರೂ. 52,650 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 52,800 ರೂ. ಆಗಿದೆ.

  MORE
  GALLERIES

 • 712

  Gold-Silver Price Today: ಮತ್ತೆ ಏರಿಕೆಯಾಯ್ತು ಬಂಗಾರದ ದರ: ಬೆಳ್ಳಿ ಮಾತ್ರ ಸ್ಥಿರ: ಹೀಗಿದೆ ಇಂದಿನ ರೇಟ್​

  ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5, 265 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,744 ಆಗಿದೆ. ಅಲ್ಲದೇ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 42,120 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 45,952 ಆಗಿದೆ.

  MORE
  GALLERIES

 • 812

  Gold-Silver Price Today: ಮತ್ತೆ ಏರಿಕೆಯಾಯ್ತು ಬಂಗಾರದ ದರ: ಬೆಳ್ಳಿ ಮಾತ್ರ ಸ್ಥಿರ: ಹೀಗಿದೆ ಇಂದಿನ ರೇಟ್​

  ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 52,650 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 57,440 ಆಗಿದೆ. ನೂರು ಗ್ರಾಂ (100GM)
  22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,26,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,74,400 ಆಗಿದೆ.

  MORE
  GALLERIES

 • 912

  Gold-Silver Price Today: ಮತ್ತೆ ಏರಿಕೆಯಾಯ್ತು ಬಂಗಾರದ ದರ: ಬೆಳ್ಳಿ ಮಾತ್ರ ಸ್ಥಿರ: ಹೀಗಿದೆ ಇಂದಿನ ರೇಟ್​

  ಚಿನ್ನದಂತೆ ಬೆಳ್ಳಿಯೂ ಗಗನಮುಖಿಯಾಗಿತ್ತು. ಆದರೆ ಮತ್ತೆ ನಿನ್ನೆಯಿಂದ ಇಳಿಕೆ ಕಂಡ ಬೆಳ್ಳಿ ಇಂದು ನಿನ್ನೆ ಬೆಲೆಯಲ್ಲಿಯೇ ಸ್ಥಿರವಾಗಿದೆ. ಇಂದು ಬೆಳ್ಳಿ ಕೆಜಿಗೆ 71,200 ರೂ ಇದೆ.

  MORE
  GALLERIES

 • 1012

  Gold-Silver Price Today: ಮತ್ತೆ ಏರಿಕೆಯಾಯ್ತು ಬಂಗಾರದ ದರ: ಬೆಳ್ಳಿ ಮಾತ್ರ ಸ್ಥಿರ: ಹೀಗಿದೆ ಇಂದಿನ ರೇಟ್​

  ಚಿನ್ನದಂತೆ ಬೆಳ್ಳಿಯೂ ಸಹ ಸಾಕಷ್ಟು ಆಕರ್ಷಣೆಯುಳ್ಳ ವಸ್ತುವಾಗಿದ್ದು ಹೂಡಿಕೆದಾರರ ಹಾಗೂ ಆಭರಣಪ್ರಿಯರ ನೆಚ್ಚಿನ ಸಾಧನವಾಗಿದೆ.ಇತ್ತೀಚಿನ ಕೆಲ ಸಮಯದಿಂದ ಬೆಳ್ಳಿಯು ಸಹ ಉತ್ತಮ ಹೂಡಿಕೆಯ ವಸ್ತುವಾಗಿ ಗುರುತಿಸಲ್ಪಟ್ಟಿದ್ದು ಹೂಡಿಕೆದಾರರು ಬೆಳ್ಳಿಯಲ್ಲೂ ಹೂಡಿಕೆ ಮಾಡುತ್ತಿದ್ದಾರೆ.

  MORE
  GALLERIES

 • 1112

  Gold-Silver Price Today: ಮತ್ತೆ ಏರಿಕೆಯಾಯ್ತು ಬಂಗಾರದ ದರ: ಬೆಳ್ಳಿ ಮಾತ್ರ ಸ್ಥಿರ: ಹೀಗಿದೆ ಇಂದಿನ ರೇಟ್​

  ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಬೆಳ್ಳಿ ಬೆಲೆಯಲ್ಲಿ ಹೆಚ್ಚಿನ ಏರಿಕೆಯಾಗಿದೆ. ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 740, ರೂ. 7,400 ಹಾಗೂ ರೂ. 74,000 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,000 ಆಗಿದ್ದರೆ, ದೆಹಲಿಯಲ್ಲಿ ರೂ. 71,200, ಮುಂಬೈನಲ್ಲಿ ರೂ. 71,200 ಹಾಗೂ ಕೊಲ್ಕತ್ತದಲ್ಲೂ ರೂ. 71,200 ಗಳಾಗಿದೆ.

  MORE
  GALLERIES

 • 1212

  Gold-Silver Price Today: ಮತ್ತೆ ಏರಿಕೆಯಾಯ್ತು ಬಂಗಾರದ ದರ: ಬೆಳ್ಳಿ ಮಾತ್ರ ಸ್ಥಿರ: ಹೀಗಿದೆ ಇಂದಿನ ರೇಟ್​

  ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

  MORE
  GALLERIES