ಇಂದು ಭಾರತದ ಹಲವು ಮಾರುಕಟ್ಟೆಗಳಲ್ಲಿ ಬಂಗಾರವಾಗಿದೆ ಬಲು ಭಾರ. ಅಂತೂ ಇಂತೂ ಅಪರಂಜಿ ಚಿನ್ನವು ಪ್ರತಿ ಹತ್ತು ಗ್ರಾಂಗೆ ಹಲವೆಡೆ ಇಂದು ದಾಖಲೆಯ 60,000ರ ಗಡಿ ದಾಟಿದ್ದು ಚಿನ್ನ ಈ ಹಿಂದೆಗಿಂತಲೂ ಸಾಕಷ್ಟು ದುಬಾರಿಯಾಗಿ ಪರಿಣಮಿಸಿದೆ. ಬಂಗಾರದಲ್ಲಿ ಹೂಡಿಕೆ ಮಾಡಿದವರಿಗೆ ಇದು ಗುಡ್ ನ್ಯೂಸ್ ಆಗಿದ್ದರೆ ಆಭರಣ ಕೊಳ್ಳ ಬಯಸುವ ಗ್ರಾಹಕರಿಗೆ ಮಾತ್ರ ಪಾಕೆಟ್ ಸುಡುವಂತಾಗಿದೆ.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಬೆಳ್ಳಿ ಬೆಲೆಯಲ್ಲಿ ಹೆಚ್ಚಿನ ಏರಿಕೆಯಾಗಿದೆ. ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 778, ರೂ. 7,780 ಹಾಗೂ ರೂ. 77,800 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 77,800 ಆಗಿದ್ದರೆ, ದೆಹಲಿಯಲ್ಲಿ ರೂ. 74,700, ಮುಂಬೈನಲ್ಲಿ ರೂ. 74,700 ಹಾಗೂ ಕೊಲ್ಕತ್ತದಲ್ಲೂ ರೂ. 77,800 ಗಳಾಗಿದೆ.