ಪರಿಣಿತರು ಹೇಳುವಂತೆ ಬಂಗಾರವು ಇಂದು ಸಾಕಷ್ಟು ಸುರಕ್ಷಿತ ಹಾಗೂ ಉತ್ತಮ ಹೂಡಿಕೆಯ ಸಾಧನವಾಗಿದೆ. ಹಾಗಾಗಿ ಭವಿಷ್ಯದ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡೇ ಜನರು ಚಿನ್ನವನ್ನು ಕೊಳ್ಳುತ್ತಿರುತ್ತಾರೆ ಎಂದರೆ ತಪ್ಪಾಗಲಾರದು. ಅಲ್ಲದೆ ದೇಶದ ಆರ್ಥಿಕತೆಯ ಮೇಲೂ ಚಿನ್ನ ಪ್ರಭಾವ ಬೀರುತ್ತದೆ ಮತ್ತು ಹಣದುಬ್ಬರ ಎಂಬ ಪೆಡಂಭೂತದ ವಿರುದ್ಧ ಒಂದು ರಕ್ಷಣಾತ್ಮಕ ಬೇಲಿಯಾಗಿ ಕಾರ್ಯನಿರ್ವಹಿಸುತ್ತದೆ.
ಇತ್ತೀಚಿನ ಕೆಲ ಸಮಯದಿಂದ ಬೆಳ್ಳಿಯು ಸಹ ಉತ್ತಮ ಹೂಡಿಕೆಯ ವಸ್ತುವಾಗಿ ಗುರುತಿಸಲ್ಪಟ್ಟಿದ್ದು ಹೂಡಿಕೆದಾರರು ಬೆಳ್ಳಿಯಲ್ಲೂ ಹೂಡಿಕೆ ಮಾಡುತ್ತಿದ್ದಾರೆ. ಚಿನ್ನ ಹಾಗೂ ಬೆಳ್ಳಿಯನ್ನು ಭಾರತದಲ್ಲಿ ಸಾಮಾನ್ಯವಾಗಿ ಅಧಿಕೃತ ನೋಂದಾಯಿತ ಆಭರಣ ಮಳಿಗೆಗಳು ಹಾಗೂ ಬ್ಯಾಂಕುಗಳಿಂದ ಖರೀದಿಸಬಹುದಾಗಿದ್ದು ದೇಶದ ಆಯಾ ಭಾಗಗಳಲ್ಲಿ ಚಿಕ್ಕ ಪುಟ್ಟ ವ್ಯತ್ಯಾಸಗಳನ್ನು ಬೆಲೆಗಳಲ್ಲಿ ಕಾಣಬಹುದು.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಬೆಳ್ಳಿ ಬೆಲೆಯಲ್ಲಿ ಹೆಚ್ಚಿನ ಏರಿಕೆಯಾಗಿದೆ. ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 760, ರೂ. 7,600 ಹಾಗೂ ರೂ. 76,000 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 76,000 ಆಗಿದ್ದರೆ, ದೆಹಲಿಯಲ್ಲಿ ರೂ. 73,300, ಮುಂಬೈನಲ್ಲಿ ರೂ. 73,300 ಹಾಗೂ ಕೊಲ್ಕತ್ತದಲ್ಲೂ ರೂ. 73,300 ಗಳಾಗಿದೆ.