ಇತ್ತ ಚಿನ್ನದ ಬೆಲೆಯಲ್ಲಿ ಇಂದು ಕುಸಿತವಾಗಿದ್ದರೂ ಬೆಳ್ಳಿ ದರ ಮಾತ್ರ ಸ್ಥಿರವಾಗಿದ್ದು ನಿನ್ನೆಯ ಬೆಲೆಯನ್ನೇ ಕಾಯ್ದುಕೊಂಡಿದೆ. ಮಾರುಕಟ್ಟೆಯಲ್ಲಿ ಇಂದು ಒಂದು ಕೆಜಿ ಬೆಳ್ಳಿ ಬೆಲೆ ರೂ. 76,900 ಆಗಿದೆ. ಕಳೆದ ತಿಂಗಳನ್ನು ಗಮನಿಸುವುದಾದರೆ ಮಾರ್ಚ್ 22 ರಂದು ಬೆಳ್ಳಿಯ ಗರಿಷ್ಠ ಬೆಲೆ ಪ್ರತಿ ಕೆಜಿಗೆ ರೂ. 74,000 ತಲುಪಿತ್ತು ಹಾಗೂ ಕನಿಷ್ಠ ಬೆಲೆ ಮಾರ್ಚ್ 10 ರಂದು ಪ್ರತಿ ಕೆಜಿಗೆ ರೂ. 65,250 ದಾಖಲಿಸಿತ್ತು.