ಇನ್ನೂ ಬೆಂಗಳೂರು ಸೇರಿ ದೊಡ್ಡ ದೊಡ್ಡ ನಗರಗಳಲ್ಲಿ ಚಿನ್ನದ ದರ ನೋಡುವುದಾದರೆ, ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 56,100 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 56,650, ರೂ. 56,050, ರೂ. 56,050 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 56,200 ರೂ. ಆಗಿದೆ.
ಬೆಳ್ಳಿ ಕೂಡ ಬಂಗಾರದಷ್ಟೇ ಡಿಮ್ಯಾಂಡ್ ಹೊಂದಿದೆ. ಭಾರತದಲ್ಲಿ ಬಂಗಾರ ಮನೆಯಲ್ಲಿದಿದ್ದರೂ ಬೆಳ್ಳಿಯ ಒಂದು ವಸ್ತುವಾದರೂ ಇದ್ದೇ ಇರುತ್ತದೆ. ಬೆಳ್ಳಿಯನ್ನು ನಮ್ಮ ದೇಶದಲ್ಲಿ ಶುಭ ಎಂದು ನಂಬಲಾಗಿದೆ. ಪೂಜೆಯಿಂದ ಹಿಡಿದು ಎಲ್ಲದಕ್ಕೂ ಬೆಳ್ಳಿಗೆ ಪ್ರಾಶಸ್ತ್ಯ ನೀಡಲಾಗಿದೆ. ಬೆಳ್ಳಿಯನ್ನು ಹಲವು ಕೈಗಾರಿಕಾ ಕ್ಷೇತ್ರಗಳಲ್ಲಿ ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ.810, ರೂ. 8,100 ಹಾಗೂ ರೂ. 81,100 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ.81,000 ಆಗಿದ್ದರೆ, ದೆಹಲಿಯಲ್ಲಿ ರೂ. 77,600 ಮುಂಬೈನಲ್ಲಿ ರೂ. 77,600 ಹಾಗೂ ಕೊಲ್ಕತ್ತದಲ್ಲೂ ರೂ. 77,600 ಗಳಾಗಿದೆ