Gold-Silver price today: ಬಂಗಾರ-ಬೆಳ್ಳಿಯ ಬೆಲೆ ಏರಿಕೆಗೆ ಬಿತ್ತು ಬ್ರೇಕ್: ಆಭರಣ ಖರೀದಿಗೆ ಇದೇ ಒಳ್ಳೆ ಟೈಂ ನೋಡಿ

ನಿನ್ನೆಗೆ ಹೋಲಿಸಿದರೆ ಇಂದು ಬಂಗಾರ ಕೊಂಚ ಇಳಿಕೆಯಾಗಿದ್ದು, ಒಂದು ಗ್ರಾಂ ಚಿನ್ನಕ್ಕೆ 5,590 ರೂಪಾಯಿ ಆಗಿದೆ.

First published:

  • 19

    Gold-Silver price today: ಬಂಗಾರ-ಬೆಳ್ಳಿಯ ಬೆಲೆ ಏರಿಕೆಗೆ ಬಿತ್ತು ಬ್ರೇಕ್: ಆಭರಣ ಖರೀದಿಗೆ ಇದೇ ಒಳ್ಳೆ ಟೈಂ ನೋಡಿ

    ನಿನ್ನೆ ಬಂಗಾರ ಮುಟ್ಟಂಗಿರಲಿಲ್ಲ, ಬೆಳ್ಳಿ ರೇಟ್‌ ಅಂತೂ ಕೇಳೋ ಹಾಗೆ ಇರಲಿಲ್ಲ. ಆದರೆ ಎರಡರ ನಾಗಲೋಟಕ್ಕೂ ಇಂದು ಬ್ರೇಕ್‌ಬಿದ್ದಿದ್ದು ಚಿನ್ನ-ಬೆಳ್ಳಿ ದರ ಎರಡೂ ಮಾರುಕಟ್ಟೆಯಲ್ಲಿ ಇಳಿಕೆಯಾಗಿವೆ.

    MORE
    GALLERIES

  • 29

    Gold-Silver price today: ಬಂಗಾರ-ಬೆಳ್ಳಿಯ ಬೆಲೆ ಏರಿಕೆಗೆ ಬಿತ್ತು ಬ್ರೇಕ್: ಆಭರಣ ಖರೀದಿಗೆ ಇದೇ ಒಳ್ಳೆ ಟೈಂ ನೋಡಿ

    ಬಂಗಾರ, ಸರ್ವಕಾಲಕ್ಕೂ ಸಲ್ಲುವಂತದ್ದು. ಯಾಕೆಂದರೆ ಬಂಗಾರ ಅನ್ನೋದು ಇತ್ತೀಚಿನ ಮೌಲ್ಯಯುತವಾದ ವಸ್ತು ಅಲ್ಲ. ಈ ಹಳದಿ ಲೋಹಕ್ಕೆ ರಾಜರ ಕಾಲದಿಂದಲೂ ಬೆಲೆ ಇದೆ. ಮುಂದೆ ಕೂಡ ಇದೇ ಬೆಲೆ ಇರುತ್ತದೆ ಎಂಬ ನಂಬಿಕೆಯಿಂದಲೇ ಬಂಗಾರದ ಮೇಲೆ ಹೆಚ್ಚಿನವರು ದೀರ್ಘಾವಧಿ ಹೂಡಿಕೆ ಮಾಡುತ್ತಿದ್ದಾರೆ.

    MORE
    GALLERIES

  • 39

    Gold-Silver price today: ಬಂಗಾರ-ಬೆಳ್ಳಿಯ ಬೆಲೆ ಏರಿಕೆಗೆ ಬಿತ್ತು ಬ್ರೇಕ್: ಆಭರಣ ಖರೀದಿಗೆ ಇದೇ ಒಳ್ಳೆ ಟೈಂ ನೋಡಿ

    ಕಷ್ಟ ಅಂತಾ ಬಂದರೆ, ಆರ್ಥಿಕವಾಗಿ ತೀರ ಅಡಚಣೆಯಾದರೆ ಮಾಡಿಸಿಟ್ಟುಕೊಂಡ ಚಿನ್ನವನ್ನು ಮಾರಾಟ ಮಾಡಿ ಅಥವಾ ಅದರ ಮೇಲೆ ಲೋನ್‌ತೆಗೆದುಕೊಳ್ಳುವ ಮೂಲಕ ಹಣ ಪಡೆಯಲಾಗುತ್ತದೆ. ಹೆಚ್ಚಿನ ಭಾರತೀಯರು ಇಂತಹ ತುರ್ತು ಪರಿಸ್ಥಿತಿಯ ಆರ್ಥಿಕ ಗೆಳೆಯನಂತೆಯೇ ಬಂಗಾರವನ್ನು ನೋಡುತ್ತಾರೆ.

    MORE
    GALLERIES

  • 49

    Gold-Silver price today: ಬಂಗಾರ-ಬೆಳ್ಳಿಯ ಬೆಲೆ ಏರಿಕೆಗೆ ಬಿತ್ತು ಬ್ರೇಕ್: ಆಭರಣ ಖರೀದಿಗೆ ಇದೇ ಒಳ್ಳೆ ಟೈಂ ನೋಡಿ

    ವಿಶ್ವದ ಎಲ್ಲಾ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತ ಚಿನ್ನದ ಬಳಕೆಯಲ್ಲಿ ಮತ್ತು ಹೂಡಿಕೆಯಲ್ಲಿ ಮುಂಚೂಣಿಯಲ್ಲಿದೆ ಎನ್ನಬಹುದು. ಭಾರತೀಯ ಮಹಿಳೆಯರಿಗೆ ಬಂಗಾರದ ದರ ಗಗನಕ್ಕೇರಿದರೂ ಅದರ ಮೇಲಿನ ವ್ಯಾಮೋಹ ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಅಷ್ಟರ ಮಟ್ಟಿಗೆ ಭಾರತದಲ್ಲಿ ಬೆಳ್ಳಿ-ಬಂಗಾರ ಉದ್ಯಮ ಅಗ್ರಪಂಥಿಯಲ್ಲಿದೆ.

    MORE
    GALLERIES

  • 59

    Gold-Silver price today: ಬಂಗಾರ-ಬೆಳ್ಳಿಯ ಬೆಲೆ ಏರಿಕೆಗೆ ಬಿತ್ತು ಬ್ರೇಕ್: ಆಭರಣ ಖರೀದಿಗೆ ಇದೇ ಒಳ್ಳೆ ಟೈಂ ನೋಡಿ

    ಇನ್ನೂ ಬೆಂಗಳೂರು ಸೇರಿ ದೊಡ್ಡ ದೊಡ್ಡ ನಗರಗಳಲ್ಲಿ ಚಿನ್ನದ ದರ ನೋಡುವುದಾದರೆ, ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 55,950 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 56,500, ರೂ. 55,900, ರೂ. 55,900 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 56,050 ರೂ. ಆಗಿದೆ.

    MORE
    GALLERIES

  • 69

    Gold-Silver price today: ಬಂಗಾರ-ಬೆಳ್ಳಿಯ ಬೆಲೆ ಏರಿಕೆಗೆ ಬಿತ್ತು ಬ್ರೇಕ್: ಆಭರಣ ಖರೀದಿಗೆ ಇದೇ ಒಳ್ಳೆ ಟೈಂ ನೋಡಿ

    ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ರೇಟ್ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,590 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,098 ಆಗಿದೆ. ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 44,720 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 48,784 ಆಗಿದೆ.

    MORE
    GALLERIES

  • 79

    Gold-Silver price today: ಬಂಗಾರ-ಬೆಳ್ಳಿಯ ಬೆಲೆ ಏರಿಕೆಗೆ ಬಿತ್ತು ಬ್ರೇಕ್: ಆಭರಣ ಖರೀದಿಗೆ ಇದೇ ಒಳ್ಳೆ ಟೈಂ ನೋಡಿ

    ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 55,900 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 60,980 ಆಗಿದೆ. ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,59,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,09,800 ಆಗಿದೆ.

    MORE
    GALLERIES

  • 89

    Gold-Silver price today: ಬಂಗಾರ-ಬೆಳ್ಳಿಯ ಬೆಲೆ ಏರಿಕೆಗೆ ಬಿತ್ತು ಬ್ರೇಕ್: ಆಭರಣ ಖರೀದಿಗೆ ಇದೇ ಒಳ್ಳೆ ಟೈಂ ನೋಡಿ

    ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ.80೦, ರೂ. 8,0೦0 ಹಾಗೂ ರೂ. 80,೦00 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ.80,000 ಆಗಿದ್ದರೆ, ದೆಹಲಿಯಲ್ಲಿ ರೂ. 76,490 ಮುಂಬೈನಲ್ಲಿ ರೂ. 76,490 ಹಾಗೂ ಕೊಲ್ಕತ್ತದಲ್ಲೂ ರೂ. 76,490 ಗಳಾಗಿದೆ.

    MORE
    GALLERIES

  • 99

    Gold-Silver price today: ಬಂಗಾರ-ಬೆಳ್ಳಿಯ ಬೆಲೆ ಏರಿಕೆಗೆ ಬಿತ್ತು ಬ್ರೇಕ್: ಆಭರಣ ಖರೀದಿಗೆ ಇದೇ ಒಳ್ಳೆ ಟೈಂ ನೋಡಿ

    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

    MORE
    GALLERIES