ಇನ್ನೇನು ಐದು ಸಾವಿರ ಗಡಿ ತಲುಪೇ ಬಿಟ್ಟಿತ್ತು ಎನ್ನುವಂತಿದ್ದ ಬಂಗಾರ ನಿನ್ನೆ ಆ ಗಡಿಯನ್ನು ದಾಟಿದೆ. ಹದಿನೈದು ದಿನಗಳ ಹಿಂದೆ ಕೂಡ ಬಂಗಾರ ಐದು ಸಾವಿರಕ್ಕಿಂತ ಹೆಚ್ಚಾಗಿತ್ತು. ಇಂದು ಬಂಗಾರದ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ ರೂ. 5,015 ಇದ್ದದ್ದು. ಇಂದು ಒಂದು ಗ್ರಾಂ ಚಿನ್ನ 5,005 ರೂ ಆಗಿದ್ದು ಕೇವಲ ಹತ್ತು ರೂಪಾಯಿ ಇಳಿಕೆ ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಬೆಳ್ಳಿ ದರ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 740, ರೂ. 7,400 ಹಾಗೂ ರೂ 74,000 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,000 ಆಗಿದ್ದರೆ ದೆಹಲಿಯಲ್ಲಿ ರೂ. 70,300 ಮುಂಬೈನಲ್ಲಿ ರೂ. 70,300 ಹಾಗೂ ಕೊಲ್ಕತ್ತದಲ್ಲೂ ರೂ. 70,300 ಗಳಾಗಿದೆ.