ಚಿನ್ನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಇನ್ನೇನು ಮದುವೆ ಮುಹೂರ್ತಗಳು ಸಮೀಪಿಸುತ್ತಿದ್ದು ಚಿನ್ನ ಖರೀದಿಗೆ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
2/ 7
ಕಳೆದ ಕೆಲವು ದಿನಗಳಿಂದ ಚಿನ್ನ ದರ ಸಾಕಷ್ಟು ಏರಿಳಿತವನ್ನು ಕಾಣುತ್ತಿದೆ. ಆದ್ರಿಂದ ಚಿನ್ನ ಯಾವಾಗ ಖರೀದಿ ಮಾಡಬೇಕು ಎಂಬ ಗೊಂದಲ ಬಹುತೇಕರಿಗೆ ಉಂಟಾಗುತ್ತದೆ. (ಸಾಂದರ್ಭಿಕ ಚಿತ್ರ)
3/ 7
ನವೆಂಬರ್ 24ರಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 300 ರೂಪಾಯಿ ಏರಿಕೆಯಾಗಿತ್ತು. ಇದೀಗ ಶನಿವಾರ ಮತ್ತು ಭಾನುವಾರ ಚಿನ್ನದ ಬೆಲೆ ಸ್ಥಿರವಾಗಿದೆ. (ಸಾಂದರ್ಭಿಕ ಚಿತ್ರ)
4/ 7
ಭಾರತದಲ್ಲಿ ಚಿನ್ನವನ್ನು ಆಭರಣ ಪ್ರಿಯರು ಹೆಚ್ಚಾಗಿ ಖರೀದಿ ಮಾಡೋದುಂಟು. ಇದರ ಜೊತೆಗೆ ಷೇರು ಮಾರುಕಟ್ಟೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಕಾಯುತ್ತಿರುವ ಹೂಡಿಕೆದಾರರು ಬೆಲೆ ಏರಿಳಿತದ ಮೇಲೆ ಕಣ್ಣಿಟ್ಟಿರುತ್ತಾರೆ. (ಸಾಂದರ್ಭಿಕ ಚಿತ್ರ)
5/ 7
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ. 22 ಕ್ಯಾರೆಟ್ 8 ಗ್ರಾಂ ಚಿನ್ನದ ಬೆಲೆ 38,800 ರೂಪಾಯಿ ಮತ್ತು 10 ಗ್ರಾಂ ಚಿನ್ನದ ಬೆಲೆ 48,600 ರೂಪಾಯಿ ಆಗಿದೆ. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 42,416 ರೂಪಾಯಿ ಮತ್ತು 10 ಗ್ರಾಂ ಚಿನ್ನದ ಬೆಲೆ 53,020 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)
6/ 7
ವಿವಿಧ ನಗರಗಳಲ್ಲಿ ಚಿನ್ನದ ಬೆಲೆ
ಇನ್ನುಳಿದಂತೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಮುಂಬೈನಲ್ಲಿ 52,970 ರೂ, ದೆಹಲಿಯಲ್ಲಿ 53,120 ರೂಪಾಯಿ, ಹೈದರಾಬಾದ್ನಲ್ಲಿ 52,970 ರೂಪಾಯಿ, ಕೋಲ್ಕತ್ತಾದಲ್ಲಿ 52,970 ರೂ ಮತ್ತು ಚೆನ್ನೈನಲ್ಲಿ 53,730 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)
7/ 7
ಇಂದಿನ ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ಬೆಲೆ ಕೊಂಚ ಇಳಿಕೆಯಾಗಿದೆ. 100 ಗ್ರಾಂ ಬೆಳ್ಳಿ ಬೆಲೆಯಲ್ಲಿ 20 ರೂಪಾಯಿ ಇಳಿಕೆ ಕಂಡಿದ್ದು, ಇಂದು 6,180 ರೂಪಾಯಿ ಆಗಿದೆ. 1 ಕೆಜಿ ಬೆಳ್ಳಿ ಬೆಲೆ 61,800 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)