ಬಂಗಾರಕ್ಕೆ ಯಾವತ್ತಿದ್ದರೂ ಕಿಮ್ಮತ್ತಿದೆ. ಆರ್ಥಿಕ ಕಷ್ಟಕಾಲಕ್ಕೆ ಆಗುವ ಏಕೈಕ ಬಂಧು ಎಂದರೆ ಅದು ನಾವು ಮಾಡಿಸಿಕೊಳ್ಳುವ ಒಡವೆಗಳು ಎನ್ನಬಹುದು. ಕಷ್ಟ ಕಾಲದ ಬಂಧುವಾಗಿ, ಸೌಂದರ್ಯ ಹೆಚ್ಚಿಸುವ ಆಭರಣವಾಗಿ, ಪ್ರತಿಷ್ಠೆ ಸಂಕೇತವಾಗಿ ಬಂಗಾರ ತನ್ನದೇ ಪಾತ್ರ ವಹಿಸುತ್ತದೆ. ಹೀಗಾಗಿ ಬಂಗಾರ ಎಲ್ಲರಿಗೂ ಪ್ರಿಯ. ಬೆಲೆ ಎಷ್ಟೇ ಏರಿಕೆಯಾದರೂ ಚಿನ್ನ ಖರೀದಿಸುವವರ ಸಂಖ್ಯೆಗೇನೂ ಬರವಿಲ್ಲ, ಚಿನ್ನದ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತವೆ. ಇನ್ನು ಮದುವೆಯ ಸೀಸನ್ ಆದ್ರೆ ಹೇಳಬೇಕಾಗಿಲ್ಲ. ಬಲವಾದ ಮಾರಾಟ ಮುಂದುವರಿಯುತ್ತದೆ.
ಹಿಂದಿನಿಂದಲೂ ನಂಬಿಕೊಂಡು ಬಂದಿರುವಂತೆ ಚಿನ್ನ ಒಂದು ರೀತಿಯಲ್ಲಿ ಸೇಫ್ ಡಿಪಾಸಿಟ್ ಇದ್ದ ಹಾಗೆ. ಆರ್ಥಿಕವಾಗಿಯಾವುದೇ ಸಮಸ್ಯೆ ಎದುರಾದರೂ ಮೊದಲು ಮನುಷ್ಯನಿಗೆ ಕೈಬಿಡದ ಆಪದ್ಬಾಂಧವನೆಂದರೆ ಅದು ಬಂಗಾರ. ಹಾಗಾಗಿಯೇ ಜಗತ್ತಿನಾದ್ಯಂತ ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಮತ್ತು ಪ್ರತಿಯೊಬ್ಬ ಸಾಮಾನ್ಯ ಮನುಷ್ಯನೂ ಒಂದಿಷ್ಟು ಚಿನ್ನ ಖರೀದಿಸುವಲ್ಲಿ ಉತ್ಸುಕನಾಗಿಯೇ ಇರುತ್ತಾನೆ.
ಬೆಳ್ಳಿ ದರ
ಬೆಳ್ಳಿ ಕೊಳ್ಳುವವರಿಗೆ ಕಳೆದ ಮೂರು ದಿನಗಳು ಸೂಕ್ತವಾಗಿತ್ತು, ಏಕೆಂದರೆ ಏರಿಕೆಯೋ ಇಲ್ಲದೆ, ಇಳಿಕೆಯೂ ಇಲ್ಲದೇ ತಟಸ್ಥವಾಗಿಬಿಟ್ಟಿತ್ತು. ಆದರೆ ಇಂದು ತನ್ನ ವರಸೆ ಬದಲಿಸಿದ ಬೆಳ್ಳಿ ದುಬಾರಿಯಾಗಿದೆ. ಇಂದು ಒಂದು ಕೆಜಿಗೆ 72,300 ರೂ ಆಗಿ ಬೆಳ್ಳಿ ಏರಿಕೆ ಕಂಡಿದೆ. ಚಿನ್ನದಂತೆ ಬೆಳ್ಳಿಯೂ ಸಹ ಹೂಡಿಕೆಯ ಸಾಧನವಾಗಿದ್ದು ಬಹಳಷ್ಟು ಜನರು ಬೆಳ್ಳಿಯ ಮೇಲೆಯೂ ಹೂಡಿಕೆ ಮಾಡುತ್ತಿರುತ್ತಾರೆ. ಚಿನ್ನ-ಬೆಳ್ಳಿಗಳ ಬೆಲೆಗಳು ಸಾಮಾನ್ಯವಾಗಿ ಯುಎಸ್ ಡಾಲರ್ ಹಾಗೂ ರೂಪಾಯಿ ಮಧ್ಯದ ಏಳು-ಬೀಳುಗಳ ಮೇಲೆಯೂ ಅವಲಂಬಿತವಾಗಿರುತ್ತದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ
. ಬೆಂಗಳೂರಿನಲ್ಲಿ ಬೆಳ್ಳಿ ದರ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 743, ರೂ. 7,430 ಹಾಗೂ ರೂ 74,300 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,300 ಆಗಿದ್ದರೆ ದೆಹಲಿಯಲ್ಲಿ ರೂ. 72,300 ಮುಂಬೈನಲ್ಲಿ ರೂ. 72,300 ಹಾಗೂ ಕೊಲ್ಕತ್ತದಲ್ಲೂ ರೂ. 72,300 ಗಳಾಗಿದೆ.