Gold And Silver Price: ಚಿನ್ನದ ಮೇಲೆ ಹೂಡಿಕೆ ಮಾಡಬೇಕಾ? ಇಂದಿನ ಬಂಗಾರದ ದರ ಇಲ್ಲಿದೆ
Gold And Silver Price Today: ಭಾರತದಲ್ಲಿಂದು ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂಪಾಯಿ ಏರಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 270 ರೂಪಾಯಿ ಏರಿಕೆ ಕಂಡಿದೆ.
ಸದ್ಯ ಸಾಲು ಸಾಲು ಮದುವೆಗಳು ನಡೆಯುತ್ತಿರುವ ಹಿನ್ನೆಲೆ ಚಿನ್ನ ಖರೀದಿಗೆ ಜನರು ಮುಂದಾಗುತ್ತಿದ್ದಾರೆ. ಆದರೆ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಆಗುತ್ತಿರುತ್ತದೆ. (ಸಾಂದರ್ಭಿಕ ಚಿತ್ರ)
2/ 8
ಹಾಗಾಗಿ ಚಿನ್ನ ಖರೀದಿ ಮಾಡುವ ಮೊದಲು ಮಾರುಕಟ್ಟೆಯಲ್ಲಿ ಇಂದಿನ ಬೆಲೆ ಎಷ್ಟಿದೆ ಅಂತ ತಿಳಿದುಕೊಳ್ಳಬೇಕು. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಇಲ್ಲಿದೆ. (ಸಾಂದರ್ಭಿಕ ಚಿತ್ರ)
3/ 8
ಬೆಂಗಳೂರಿನಲ್ಲಿಯೂ ಚಿನ್ನದ ಬೆಲೆ ಏರಿಕೆ
ರಾಜಧಾನಿ ಬೆಂಗಳೂರಿನಲ್ಲಿಯೂ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. 22 ಕ್ಯಾರೆಟ್ 8 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂಪಾಯಿ ಏರಿಕೆಯಾಗಿ 40,000 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆ 50 ಸಾವಿರ ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)
4/ 8
ಇನ್ನು 24 ಕ್ಯಾರೆಟ್ 8 ಗ್ರಾಂ ಚಿನ್ನದ ಬೆಲೆಯಲ್ಲಿ 208 ರೂಪಾಯಿ, 10 ಗ್ರಾಂ ಚಿನ್ನದ ಬೆಲೆಯಲ್ಲಿ 260 ರೂಪಾಯಿ ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ 43,632 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ರೇಟ್ 54,540 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)
5/ 8
ದೇಶದ ಪ್ರಮುಖ ನಗರಗಳ ಚಿನ್ನದ ಬೆಲೆ
22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಚೆನ್ನೈನಲ್ಲಿ 50,560 ರೂಪಾಯಿ,ಮುಂಬೈ; 49,950 ರೂ, ದೆಹಲಿ: 50,100 ರೂ, ಕೋಲ್ಕತ್ತಾ: 49,950 ರೂ., ಹೈದಾರಾಬಾದ್: 49,950 ರೂಪಾಯಿ. ಆಗಿದೆ (ಸಾಂದರ್ಭಿಕ ಚಿತ್ರ)
6/ 8
ಬೆಳ್ಳಿ ಬೆಲೆ
ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಇಂದು 10 ಗ್ರಾಂ ಬೆಳ್ಳಿ ಬೆಲೆಯಲ್ಲಿ 5 ರೂಪಾಯಿ ಇಳಿಕೆಯಾಗಿ 690 ರೂಪಾಯಿ ಆಗಿದೆ. 1 ಕೆಜಿ ಬೆಳ್ಳಿ ಬೆಲೆ 69,000 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)
7/ 8
ಆರ್ಥಿಕ ಸಂಕಷ್ಟದ ಕಾಲದಲ್ಲಿ ಕೈಯನ್ನು ಹಿಡಿಯುವ ನಂಬಿಕಸ್ಥ ಗೆಳೆಯ ಎಂದು ನಂಬಲಾಗಿರುವ ಚಿನ್ನವು ಈಗ ಹೂಡಿಕೆಯ ವಸ್ತುವಾಗಿಯೂ ಪ್ರಾಮುಖ್ಯತೆ ಪಡೆದಿದೆ. ಹಾಗಾಗಿ, ನಮ್ಮ ದೇಶದಲ್ಲಷ್ಟೇ ಅಲ್ಲ, ಜಗತ್ತಿನಾದ್ಯಂತ ಬಂಗಾರಕ್ಕೆ ಇರುವ ಬೇಡಿಕೆ ಅಷ್ಟಿಷ್ಟಲ್ಲ. (ಸಾಂದರ್ಭಿಕ ಚಿತ್ರ)
8/ 8
ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿ ಸಹಜ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಈ ವ್ಯವಹಾರ ಹೊಂದಿದೆ. (ಸಾಂದರ್ಭಿಕ ಚಿತ್ರ)