Gold-Silver Price: ಚಿನ್ನ ಖರೀದಿಗೂ ಮುನ್ನ ಇಂದಿನ ದರ ತಿಳಿದುಕೊಳ್ಳಿ
Gold and Silver Rate: ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಏರಿಕೆ ಉಂಟಾಗಿದ್ದು ಪ್ರತಿ ಒಂದು ಗ್ರಾಂ ಆಭರಣ ಚಿನ್ನವು 20 ರೂ.ಗಳಷ್ಟು ಏರಿಕೆಯಾಗಿದೆ. ನಿನ್ನೆ ಪ್ರತಿ ಗ್ರಾಂಗೆ ರೂ. 4,925 ಆಗಿದ್ದ ಆಭರಣ ಚಿನ್ನದ ಬೆಲೆ ಇಂದು ರೂ. 4,945 ಆಗಿದೆ. ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 49,450 ಆಗಿದೆ.
ಚಿನ್ನ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಭಾರತದಲ್ಲಿ ಯಾವುದೇ ಸಂಭ್ರಮ ಇದ್ರೂ ಅಲ್ಲಿ ಚಿನ್ನಗೆ ಪ್ರಮುಖ ಸ್ಥಾನ. ಹಾಗಾಗಿ ಎಲ್ಲರೂ ಚಿನ್ನ ಖರೀದಿಸಬೇಕು ಎಂದು ಕನಸು ಕಾಣುತ್ತಾರೆ. (ಸಾಂದರ್ಭಿಕ ಚಿತ್ರ)
2/ 7
ಆದ್ರೆ ಪ್ರತಿದಿನ ಚಿನ್ನದ ಬೆಲೆಯಲ್ಲಿ ಏರಿಳಿತ ಆಗುತ್ತಿರುವ ಹಿನ್ನೆಲೆ ಯಾವಾಗ ಖರೀದಿಸಬೇಕು ಎಂಬುವುದು ಗೊಂದಲ ಇರುತ್ತದೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಹೀಗಿದೆ. (ಸಾಂದರ್ಭಿಕ ಚಿತ್ರ)
3/ 7
ಬೆಂಗಳೂರಿನಲ್ಲಿ 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂಪಾಯಿ ಏರಿಕೆಯಾಗಿದ್ದು, 4950 ರೂಪಾಯಿ ಆಗಿದೆ. 8 ಗ್ರಾಂ ಚಿನ್ನ 39,600 ರೂಪಾಯಿ, 10 ಗ್ರಾಂ ಚಿನ್ನದ ಬೆಲೆ 49,500 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)
4/ 7
ಇನ್ನು 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿಯೂ 22 ರೂಪಾಯಿ ಏರಿಕೆಯಾಗಿದೆ. ಒಂದು ಗ್ರಾಂ ಚಿನ್ನದ ಬೆಲೆ 5,400 ರೂ, 8 ಗ್ರಾಂ ಚಿನ್ನದ ಬೆಲೆ 43,200 ರೂಪಾಯಿ ಮತ್ತು 10 ಗ್ರಾಂ ಚಿನ್ನದ ಬೆಲೆ 54,000 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)
5/ 7
ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 50,160 ರೂಪಾಯಿ, ಮುಂಬೈ: 49,450 ರೂ., ದೆಹಲಿ: 49,600 ರೂಪಾಯಿ, ಕೋಲ್ಕತ್ತಾ: 49,450 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)
6/ 7
ಬೆಳ್ಳಿ ಬೆಲೆ
ದೇಶದಲ್ಲಿ ಬೆಳ್ಳಿ ಬೆಲೆ ಸಹ ಕೊಂಚ ಏರಿಕೆಯಾಗಿದೆ. 10 ಗ್ರಾಂ ಬೆಳ್ಳಿ ಬೆಲೆಯಲ್ಲಿ 9 ರೂಪಾಯಿ ಏರಿಕೆಯಾಗಿ 652 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ಬೆಲೆ 65,200 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)
7/ 7
ಕೇವಲ ಆಭರಣ ಸಾಧನವಾಗಿ ಮಾತ್ರವಲ್ಲದೆ ಬಂಗಾರವು ಪ್ರಸ್ತುತ ಉತ್ತಮ ಹಾಗೂ ಆಕರ್ಷಕ ಹೂಡಿಕೆಯ ಸಾಧನವಾಗಿಯೂ ಗುರುತಿಸಲ್ಪಡುತ್ತದೆ. ಹಾಗಾಗಿ, ಪ್ರತಿನಿತ್ಯ ಹೂಡಿಕೆದಾರರು ಹಾಗೂ ಆಭರಣ ವ್ಯಾಪಾರಿಗಳು ಚಿನ್ನದ ಬೆಲೆಯಲ್ಲಿ ಉಂಟಾಗುತ್ತಿರುವ ಬದಲಾವಣೆಯ ಮೇಲೆ ಕಣ್ಣಿಟ್ಟಿರುತ್ತಾರೆ. (ಸಾಂದರ್ಭಿಕ ಚಿತ್ರ)