Gold And Silver Price Today: ಕ್ರಿಸ್ಮಸ್ ಹಬ್ಬಕ್ಕೆ ಗೋಲ್ಡ್ ಗಿಫ್ಟ್ ಕೊಡಬೇಕಾ? ಇಲ್ಲಿದೆ ನೋಡಿ ಇವತ್ತಿನ ದರ
Gold And Silver Price Today 25th December 2022: ಇಂದು ಭಾರತದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಮೇಲೆ 150 ರೂಪಾಯಿ ಏರಿಕೆಯಾಗಿದೆ. ಅಂತೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂಪಾಯಿ ಏರಿಕೆಯಾಗಿದೆ. 22 ಮತ್ತು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 49,850 ರೂಪಾಯಿ ಮತ್ತು 54,380 ರೂಪಾಯಿ ಆಗಿದೆ.
ರಾಜಧಾನಿ ಬೆಂಗಳೂರಿನಲ್ಲಿಯೂ ಹಳದಿ ಲೋಹದ ತುಸು ಹೆಚ್ಚಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಏರಿಕೆಯಾಗಿ 49,900 ರೂ.ಗಳಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,410 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)
2/ 7
ಬೆಳ್ಳಿ ಬೆಲೆ
ಚಿನ್ನದ ಜೊತೆಯಲ್ಲಿ ಬೆಳ್ಳಿ ದರ ಸಹ ಏರಿಕೆಯಾಗಿದೆ. 10 ಗ್ರಾಂ ಬೆಳ್ಳಿ ಬೆಲೆಯಲ್ಲಿ 10 ರೂಪಾಯಿ ಏರಿಕೆಯಾಗಿದ್ರೆ, 1 ಕೆಜಿ ಬೆಳ್ಳಿಯಲ್ಲಿ 1,000 ರೂಪಾಯಿ ಏರಿಕೆ ಕಂಡಿದೆ. (ಸಾಂದರ್ಭಿಕ ಚಿತ್ರ)
3/ 7
ಭಾರತದಲ್ಲಿ 10 ಗ್ರಾಂ ಬೆಳ್ಳಿ ಬೆಲೆ 711 ರೂ, 100 ಗ್ರಾಂ ಬೆಳ್ಳಿ ಬೆಲೆ 7,110 ರೂಪಾಯಿ ಮತ್ತು ಒಂದು ಕೆಜಿ ಬೆಳ್ಳಿ ಬೆಲೆ 71,100 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)
4/ 7
ವಿವಿಧ ನಗರಗಳಲ್ಲಿ ಚಿನ್ನದ ಬೆಲೆ
ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟು ಅಂತ ನೋಡೋದಾದ್ರೆ, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 50,790 ರೂ, ಮುಂಬೈ: 49,850 ರೂ, ದೆಹಲಿ: 50,000 ರೂ, ಕೋಲ್ಕತ್ತಾ 49,850 ರೂ, ಹೈದರಾಬಾದ್: 49,850 ರೂಪಾಯಿ ಇದೆ. (ಸಾಂದರ್ಭಿಕ ಚಿತ್ರ)
5/ 7
ಚಿನ್ನ ಸದಾ ಆಕರ್ಷಕ ಸಾಧನವಾಗಿ ಗುರುತಿಸಿಕೊಂಡಿದೆ. ಜಗತ್ತಿನಾದ್ಯಂತ ಚಿನ್ನಕ್ಕೆ ಸಾಕಷ್ಟು ಬೇಡಿಕೆಯಿದೆ. ಕಷ್ಟದ ಸಮಯದಲ್ಲಿ ನೆರವಿಗೆ ಬರುವ ಹಾಗೂ ಆರ್ಥಿಕವಾಗಿ ಸಹಾಯ ಮಾಡುವ ಸಾಮರ್ಥ್ಯ ಚಿನ್ನಕ್ಕಿರುವುದರಿಂದ ಎಷ್ಟು ಸಾಮಾನ್ಯ ಜನರಾದರೂ ಸರಿ ಚಿನ್ನ ಕೊಳ್ಳುವುದರಲ್ಲಿ ಹಿಂದೆ ಸರಿಯುವುದಿಲ್ಲ. (ಸಾಂದರ್ಭಿಕ ಚಿತ್ರ)
6/ 7
ಕಳೆದ ಹಲವು ವರ್ಷಗಳಿಂದ ಚಿನ್ನವು ಹಣದುಬ್ಬರವನ್ನು ನಿಯಂತ್ರಿಸಬಲ್ಲಂತಹ ಶಕ್ತಿಶಾಲಿ ಸಾಧನವಾಗಿಯೂ ಹೊರಹೊಮ್ಮುತ್ತಿದೆ. ಹಾಗಾಗಿ ಹೂಡಿಕೆದಾರರು ಚಿನ್ನವನ್ನು ಒಂದು ಪ್ರಮುಖ ಹೂಡಿಕೆಯ ವಸ್ತುವನ್ನಾಗಿ ನೋಡುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
7/ 7
ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ. (ಸಾಂದರ್ಭಿಕ ಚಿತ್ರ)