ಕಳೆದ ಒಂದು ವಾರವನ್ನು ಗಮನಿಸಿದರೆ ಚಿನ್ನ-ಬೆಳ್ಳಿ ದರಗಳಲ್ಲಿ ಅಲ್ಪ-ಸ್ವಲ್ಪ ಕುಸಿತಗಳು ಆಗುತ್ತಲೇ ಇರುವುದನ್ನು ನೋಡಬಹುದು. ಆದಾಗ್ಯೂ ಏರಿಕೆಯ ಪಥದಲ್ಲೇ ಸಾಗಿದಂತಿರುವ ಚಿನ್ನ ಕೆಲದಿನಗಳ ಹಿಂದೆ ಅರವತ್ತು ಸಾವಿರದ ಗಡಿಯನ್ನೂ ಸಹ ದಾಟಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಅಷ್ಟಕ್ಕೂ ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಕುಸಿತವಾಗಿದೆ ಎನ್ನಬಹುದು.
ದೇಶದ ಮಹಾನಗರಗಳಲ್ಲಿ ಇಂದಿನ ಬೆಳ್ಳಿ ದರಗಳು
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 690, ರೂ. 6,900 ಹಾಗೂ ರೂ. 69,000 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 69,000 ಆಗಿದ್ದರೆ, ದೆಹಲಿಯಲ್ಲಿ ರೂ. 66,800, ಮುಂಬೈನಲ್ಲಿ ರೂ. 66,800 ಹಾಗೂ ಕೊಲ್ಕತ್ತದಲ್ಲೂ ರೂ. 66,800 ಗಳಾಗಿದೆ.