Gold-Silver price today: ಅಕ್ಷಯ ತೃತೀಯ ಮುನ್ನವೇ ಗುಡ್ ನ್ಯೂಸ್; ಅಗ್ಗವಾಯ್ತು ಚಿನ್ನ, ಪಾತಾಳಕ್ಕಿಳಿದ ಬೆಳ್ಳಿ

Gold And Silver Price 19 April 2023: ಅಕ್ಷಯ ತೃತೀಯ ಇನ್ನೇನು ಸಮೀಪದಲ್ಲಿದೆ. ಬಂಗಾರ ಕೊಳ್ಳಲು ಗ್ರಾಹಕರು ಪ್ಲ್ಯಾನ್‌ ಮಾಡುತ್ತಿರುತ್ತಾರೆ. ಈಗಿನಿಂದಲೇ ಸ್ವಲ್ಪ ಸ್ವಲ್ಪ ಬಂಗಾರ ಇಳಿಕೆಯಾಗುತ್ತಿದ್ದರೆ ಗ್ರಾಹಕರಿಗೆ ಸ್ವಲ್ಪ ನಿರಾಳ. ನಿನ್ನೆ ಬೆಳ್ಳಿ-ಬಂಗಾರ ಎರಡೂ ಸ್ಥಿರವಾಗಿತ್ತು. ಈಗ ಅದರ ಬೆನ್ನಲ್ಲೇ ಇಂದು ಎರಡರ ಬೆಲೆಯೂ ಕುಸಿದಿದೆ.

First published:

  • 18

    Gold-Silver price today: ಅಕ್ಷಯ ತೃತೀಯ ಮುನ್ನವೇ ಗುಡ್ ನ್ಯೂಸ್; ಅಗ್ಗವಾಯ್ತು ಚಿನ್ನ, ಪಾತಾಳಕ್ಕಿಳಿದ ಬೆಳ್ಳಿ

    ಭಾರತೀಯರಿಗೆ ಬಂಗಾರ ಅಂದರೆ ಮೋಹ. ಬೆಲೆ ಎಷ್ಟಿದ್ದರೂ ಸರಿ ಅದನ್ನು ಖರೀದಿ ಮಾಡಬೇಕು. ಧರಿಸಬೇಕು ಅನ್ನೋ ಉದ್ದೇಶ ಹೊಂದಿರುತ್ತಾರೆ. ಚಿನ್ನಕ್ಕೆ ಯಾವತ್ತಿದ್ದರೂ ಚಿನ್ನದ ಬೆಲೆಯೇ.

    MORE
    GALLERIES

  • 28

    Gold-Silver price today: ಅಕ್ಷಯ ತೃತೀಯ ಮುನ್ನವೇ ಗುಡ್ ನ್ಯೂಸ್; ಅಗ್ಗವಾಯ್ತು ಚಿನ್ನ, ಪಾತಾಳಕ್ಕಿಳಿದ ಬೆಳ್ಳಿ

    ನೀವು ಹತ್ತು ವರ್ಷದ ಹಿಂದಿನ ಚಿನ್ನವನ್ನು ಈಗ ಮಾಡಿದರೂ ನಿಮಗೆ ಅದರ ಮೇಲೆ ದುಪ್ಪಟ್ಟು ಲಾಭ ಸಿಗೋದು ಪಕ್ಕಾ. ಇದೇ ಕಾರಣಕ್ಕಾಗಿ ದೀರ್ಘಾವಧಿಗೆ ಹೂಡಿಕೆ ಮಾಡೋರು ಚಿನ್ನದ ಮೇಲೆ ಹೂಡಿಕೆ ಮಾಡ್ತಾರೆ. ಹಾಗಾದರೆ ಇಂದು ಚಿನ್ನದ ರೇಟ್‌ ಎಷ್ಟಿದೆ? ಯಾವ ಯಾವ ನಗರಗಳಲ್ಲಿ ಹೇಗಿದೆ ಅಂತಾ ನೋಡೋಣ.

    MORE
    GALLERIES

  • 38

    Gold-Silver price today: ಅಕ್ಷಯ ತೃತೀಯ ಮುನ್ನವೇ ಗುಡ್ ನ್ಯೂಸ್; ಅಗ್ಗವಾಯ್ತು ಚಿನ್ನ, ಪಾತಾಳಕ್ಕಿಳಿದ ಬೆಳ್ಳಿ

    ಎಷ್ಟಿದೆ ಇಂದು ಬಂಗಾರದ ರೇಟ್?

    ಏರಿಕೆ, ಇಳಿಕೆ ಕಾಣದೇ ಬಂಗಾರ ನಿನ್ನೆ ಸ್ಥಿರವಾಗಿತ್ತು. ಇಂದಿನ ಬೆಲೆ ನೋಡುವುದಾದರೇ ಗ್ರಾಹಕರಿಗೆ ಸ್ವಲ್ಪ ಖುಷಿ ವಿಚಾರ ಎನ್ನಬಹುದು. ಏಕೆಂದರೆ ಬಂಗಾರದ ದರ ಇಳಿಕೆಯಾಗಿದೆ. ನಿನ್ನೆ ಒಂದು ಗ್ರಾಂಗೆ 5,594 ರೂಪಾಯಿ ಆಗಿದ್ದ ಚಿನ್ನ, ಇಂದು ಅದೇ ಒಂದು ಗ್ರಾಂಗೆ 5,585 ರೂಪಾಯಿ ಆಗಿದೆ.

    MORE
    GALLERIES

  • 48

    Gold-Silver price today: ಅಕ್ಷಯ ತೃತೀಯ ಮುನ್ನವೇ ಗುಡ್ ನ್ಯೂಸ್; ಅಗ್ಗವಾಯ್ತು ಚಿನ್ನ, ಪಾತಾಳಕ್ಕಿಳಿದ ಬೆಳ್ಳಿ

    ಬೇರೆ ಬೇರೆ ನಗರಗಳಲ್ಲಿ ಎಷ್ಟಿದೆ ಚಿನ್ನದ ದರ?

    ಇನ್ನೂ ಬೆಂಗಳೂರು ಸೇರಿ ದೊಡ್ಡ ದೊಡ್ಡ ನಗರಗಳಲ್ಲಿ ಚಿನ್ನದ ದರ ನೋಡುವುದಾದರೆ, ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 55,900 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 56,450, ರೂ. 55,850, ರೂ. 55,850 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 56,000 ರೂ. ಆಗಿದೆ.

    MORE
    GALLERIES

  • 58

    Gold-Silver price today: ಅಕ್ಷಯ ತೃತೀಯ ಮುನ್ನವೇ ಗುಡ್ ನ್ಯೂಸ್; ಅಗ್ಗವಾಯ್ತು ಚಿನ್ನ, ಪಾತಾಳಕ್ಕಿಳಿದ ಬೆಳ್ಳಿ

    ಒಂದು ಗ್ರಾಂ 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,585, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,092 ಆಗಿದೆ. ಎಂಟು ಗ್ರಾಂ22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 44,680 ಮತ್ತು 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 48,736 ಆಗಿದೆ.

    MORE
    GALLERIES

  • 68

    Gold-Silver price today: ಅಕ್ಷಯ ತೃತೀಯ ಮುನ್ನವೇ ಗುಡ್ ನ್ಯೂಸ್; ಅಗ್ಗವಾಯ್ತು ಚಿನ್ನ, ಪಾತಾಳಕ್ಕಿಳಿದ ಬೆಳ್ಳಿ

    ಬೆಳ್ಳಿ ದರ

    ಇಂದು ಬಂಗಾರ ಕೊಂಚ ಇಳಿದರೆ ಬೆಳ್ಳಿ ಇಂದು ಭಾರೀ ಇಳಿಕೆ ಕಂಡಿದೆ. ಕೆಜಿ ಮೇಲೆ 1,100 ಇಳಿಕೆ ಕಂಡಿರುವ ಬೆಳ್ಳಿ ಇಂದು 77,400 ರೂ. ಆಗಿದೆ.

    MORE
    GALLERIES

  • 78

    Gold-Silver price today: ಅಕ್ಷಯ ತೃತೀಯ ಮುನ್ನವೇ ಗುಡ್ ನ್ಯೂಸ್; ಅಗ್ಗವಾಯ್ತು ಚಿನ್ನ, ಪಾತಾಳಕ್ಕಿಳಿದ ಬೆಳ್ಳಿ

    ಬೆಂಗಳೂರಿನಲ್ಲಿ ಬೆಳ್ಳಿ ದರ

     ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ.805, ರೂ. 8,050 ಹಾಗೂ ರೂ. 80,500 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ.80,500 ಆಗಿದ್ದರೆ, ದೆಹಲಿಯಲ್ಲಿ ರೂ. 77,400 ಮುಂಬೈನಲ್ಲಿ ರೂ. 77,400 ಹಾಗೂ ಕೊಲ್ಕತ್ತದಲ್ಲೂ ರೂ. 77,400 ಗಳಾಗಿದೆ.

    MORE
    GALLERIES

  • 88

    Gold-Silver price today: ಅಕ್ಷಯ ತೃತೀಯ ಮುನ್ನವೇ ಗುಡ್ ನ್ಯೂಸ್; ಅಗ್ಗವಾಯ್ತು ಚಿನ್ನ, ಪಾತಾಳಕ್ಕಿಳಿದ ಬೆಳ್ಳಿ

    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

    MORE
    GALLERIES