Flight Ticket Offer: ಬಸ್ ಟಿಕೆಟ್ ದರದಲ್ಲಿ ಫ್ಲೈಟ್ನಲ್ಲಿ ಪ್ರಯಾಣಿಸಿ, ಬಂಪರ್ ಆಫರ್ ಮಿಸ್ಸ್ ಮಾಡ್ಬೇಡಿ!
Go First Airline: ನೀವು ವಿಮಾನದಲ್ಲಿ ಪ್ರಯಾಣಿಸಬೇಕು ಅಂದುಕೊಂಡಿದ್ದೀರಾ? ಹಾಗಿದ್ದರೆ ಈ ಬಂಪರ್ ಆಫರ್ ನಿಮಗಾಗಿ. ಈ ಕಂಪನಿಯು ಅಗ್ಗದ ವಿಮಾನ ಟಿಕೆಟ್ಗಳನ್ನು ನೀಡುತ್ತದೆ. ಇದು ಸೀಮಿತ ಅವಧಿಯ ಕೊಡುಗೆಯಾಗಿದೆ.
Ticket Booking Offer: ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿ ಸಿಕ್ಕಿದೆ. ಏಕೆಂದರೆ ವಿಮಾನ ಟಿಕೆಟ್ಗಳು ಕಡಿಮೆ ದರದಲ್ಲಿ ಲಭ್ಯವಿವೆ. ಹೇಗೆ ಅಂತೀರಾ?ಈ ಕೊಡುಗೆಯ ಬಗ್ಗೆ ನೀವು ತಿಳಿದಿರಲೇಬೇಕು. ಟಿಕೆಟ್ ದರಗಳ ಮೇಲೆ ರಿಯಾಯಿತಿ ಕೊಡುಗೆ ನಿಮಗೆ ಲಭ್ಯವಿದೆ.
2/ 9
ಗೋ ಏರ್ ಅಥವಾ ಗೋ ಫಸ್ಟ್ ಏರ್ಲೈನ್ಸ್ ಇತ್ತೀಚೆಗೆ ಟ್ರಾವೆಲ್ ಇಂಡಿಯಾ ಟ್ರಾವೆಲ್ ಸೇಲ್ ಅನ್ನು ಪ್ರಾರಂಭಿಸಿದೆ. ಈ ಮಾರಾಟವು ಜನವರಿ 16 ರಿಂದ ಪ್ರಾರಂಭವಾಗಿದೆ. ಈ ಮಾರಾಟದ ಭಾಗವಾಗಿ, ನೀವು ಅಗ್ಗದ ವಿಮಾನ ಟಿಕೆಟ್ಗಳನ್ನು ಪಡೆಯಬಹುದು.
3/ 9
ಕಂಪನಿಯು ನೀಡುವ ಟಿಕೆಟ್ ದರಗಳಲ್ಲಿ ಈ ರಿಯಾಯಿತಿ ಕೊಡುಗೆ ಜನವರಿ 19 ರವರೆಗೆ ಲಭ್ಯವಿದೆ. ಹಾಗಾಗಿ ವಿಮಾನದಲ್ಲಿ ಪ್ರಯಾಣಿಸುವ ಉದ್ದೇಶ ಹೊಂದಿರುವವರು ಈ ಕೊಡುಗೆಯನ್ನು ಪಡೆಯಬಹುದು.
4/ 9
ಗೋ ಫಸ್ಟ್ ಏರ್ ಲೈನ್ ನ ಆಫರ್ ಪ್ರಕಾರ ವಿಮಾನ ಟಿಕೆಟ್ ದರ 1,199 ರಿಂದ ಪ್ರಾರಂಭವಾಗುತ್ತದೆ. ಇದು ದೇಶೀಯ ವಿಮಾನ ಪ್ರಯಾಣಕ್ಕೆ ಅನ್ವಯಿಸುತ್ತದೆ. ಅದೇ ಅಂತಾರಾಷ್ಟ್ರೀಯ ವಿಮಾನಗಳ ಟಿಕೆಟ್ ದರ ರೂ. 6599 ರಿಂದ ಪ್ರಾರಂಭವಾಗುತ್ತದೆ.
5/ 9
ಕಂಪನಿಯು ನೀಡುವ ಈ ಕೊಡುಗೆಯ ಭಾಗವಾಗಿ, ಪ್ರಯಾಣಿಕರು ಫೆಬ್ರವರಿ 4 ರಿಂದ ಸೆಪ್ಟೆಂಬರ್ 30 ರವರೆಗೆ ಪ್ರಯಾಣಿಸಬಹುದು. ಆದರೆ ಈ ಕೊಡುಗೆ ಸೀಮಿತ ಅವಧಿಗೆ ಮಾತ್ರ. ಸೀಮಿತ ಸೀಟುಗಳಿಗೆ ಸಹ ಕೊಡುಗೆ ಅನ್ವಯಿಸುತ್ತದೆ.
6/ 9
ಹಾಗಾಗಿ ನೀವು ಟಿಕೆಟ್ ಬುಕ್ ಮಾಡಲು ಬಯಸಿದರೆ, ಅದನ್ನು ತಕ್ಷಣವೇ ಮಾಡುವುದು ಉತ್ತಮ. ಇಲ್ಲವಾದರೆ ಯಾವುದೇ ಆಫರ್ ಇಲ್ಲದಿರಬಹುದು. ಆಫರ್ನ ಭಾಗವಾಗಿ 10 ಲಕ್ಷಕ್ಕೂ ಹೆಚ್ಚು ಸೀಟುಗಳನ್ನು ಲಭ್ಯಗೊಳಿಸಲಾಗಿದೆ ಎಂದು ಕಂಪನಿಯು ಬಹಿರಂಗಪಡಿಸಿದೆ.
7/ 9
ಇದಲ್ಲದೆ, ಕಂಪನಿಯು ವಿಮಾನ ಪ್ರಯಾಣಿಕರಿಗೆ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುತ್ತಿದೆ. ಮರುಹೊಂದಿಕೆ ಮತ್ತು ರದ್ದತಿ ಉಚಿತ. ಇದರಿಂದ ಪ್ರಯಾಣಿಕರಿಗೆ ನೆಮ್ಮದಿ ಸಿಗಲಿದೆ ಎನ್ನಬಹುದು.
8/ 9
'ನಿಮ್ಮ ಬ್ಯಾಗ್ಗಳನ್ನು ಪ್ಯಾಕ್ ಮಾಡಿ. ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಲಭ್ಯವಾಗುವಂತೆ ಮಾಡಿದ್ದೇವೆ. ದೇಶೀಯ ವಿಮಾನ ಟಿಕೆಟ್ 1199ರ ಆರಂಭಿಕ ಬೆಲೆಯಲ್ಲಿ ಪಡೆಯಿರಿ. ಅಂತಾರಾಷ್ಟ್ರೀಯ ಪ್ರಯಾಣದ ಶುಲ್ಕ 6599 ರಿಂದ ಆರಂಭವಾಗಿದೆ' ಎಂದು ಕಂಪನಿ ಟ್ವೀಟ್ ಮಾಡಿದೆ.
9/ 9
ಕಳೆದ ವಾರ, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಕಂಪನಿಗೆ ಶೋಕಾಸ್ ನೋಟಿಸ್ ನೀಡಿದೆ. ಬೆಂಗಳೂರಿನಲ್ಲಿ ಸುಮಾರು 55 ಪ್ರಯಾಣಿಕರನ್ನು ಬಿಟ್ಟು ವಿಮಾನ ಟೇಕ್ ಆಫ್ ಆಗಿತ್ತು. ಈ ಆದೇಶದಲ್ಲಿ ಗೋ ಫಸ್ಟ್ ಏರ್ಲೈನ್ ಡಿಜಿಸಿಎ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗೆ ಈ ಕುರಿತು ನೋಟಿಸ್ ನೀಡಿದೆ.