ತುಮಕೂರು ರಸ್ತೆಯ ನಾಗಸಂದ್ರ ಮೆಟ್ರೋ ಸ್ಟೇಷನ್ (Nagasandra Metro Station) ಬಳಿ ನಿರ್ಮಾಣಗೊಂಡಿರುವ ಐಕಿಯ ಶಾಪಿಂಗ್ ಮಾಲ್ಗೆ ಜನಸಾಗರವೇ ಹರಿದು ಬರ್ತಿದೆ. 2018 ರಲ್ಲಿ ಭಾರತಕ್ಕೆ ಕಾಲಿಟ್ಟ ಸ್ವೀಡಿಷ್ (Swedish) ಪೀಠೋಪಕರಣಗಳ ದೈತ್ಯ ಐಕಿಯ (Ikea) ಕಂಪನಿ ದೇಶದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುತ್ತಿದೆ ಎಂದು ತಿಳಿದುಬಂದಿದ್ದು, ಹಲವು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಗೃಹಬಳಕೆಯ ಪೀಠೋಪಕರಣಗಳ ಮಾರಾಟ ಮಳಿಗೆ ‘ಐಕಿಯ’ ನಗರದಲ್ಲಿ ತನ್ನ ಮಳಿಗೆಯನ್ನು ಜೂನ್ 22ರಂದು ಆರಂಭಿಸಿದೆ. ಐಕಿಯ ಸ್ಟೋರ್ ಓಪನ್ ಆದಾಗಿನಿಂದಲೂ ಜನಸಾಗರವೇ ಇಲ್ಲಿಗೆ ಹರಿದು ಬರುತ್ತಿದೆ. ಮೂರು ಗಂಟೆಗಳ ಕಾಲ ಕಾದು ಒಳಗೆ ಹೋಗ್ತಿದ್ದಾರೆ. ಕೇವಲ 500 ರೂಪಾಯಿಯೊಳಗೆ ಐಕಿಯದಲ್ಲಿ ಏನೆಲ್ಲಾ ಸಿಗುತ್ತೆ ಅಂತ ನಾವು ಇಂದು ಇಲ್ಲಿ ತೋರಿಸಿದ್ದೇವೆ ನೋಡಿ..