ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರೇಕ್ಷಕರಿಗೆ ಉತ್ತಮ ಗುಣಮಟ್ಟದ ವಿಷಯವನ್ನು ಅಭಿವೃದ್ಧಿಪಡಿಸುವುದು ಮತ್ತು ಹೆಚ್ಚಿನ ಚಾನೆಲ್ಗಳಿಗೆ ಅವಕಾಶ ಕಲ್ಪಿಸಲು DTH ಪ್ಲಾಟ್ಫಾರ್ಮ್ನ ಸಾಮರ್ಥ್ಯವನ್ನು ನವೀಕರಿಸುವ ಮೂಲಕ ಬಳಕೆದಾರರಿಗೆ ವೈವಿಧ್ಯಮಯ ವಿಷಯವನ್ನು ಲಭ್ಯಗೊಳಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರೊಂದಿಗೆ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋ ಸೇವೆಗಳು ಮತ್ತಷ್ಟು ಸುಧಾರಣೆಯಾಗಲಿವೆ.