Online Frauds: ಆನ್​​ಲೈನ್​​ ಮೋಸಗಳಿಂದ ಹಣ ಕಳೆದುಕೊಳ್ಳದಿರಲು ಈ 5 ವಿಧಾನಗಳನ್ನು ಅನುಸರಿಸಿ ಸಾಕು

ಸಂಪೂರ್ಣ ಭದ್ರತೆಯೊಂದಿಗೆ ಡಿಜಿಟಲ್ ಹಣಕಾಸು ವಹಿವಾಟುಗಳನ್ನು ನಿರ್ವಹಿಸಲು ಸಹಾಯ ಮಾಡುವ ಕೆಲವು ಮಾರ್ಗಗಳನ್ನು ನಾವು ಇಂದು ಇಲ್ಲಿ ಹೇಳಲಿದ್ದೇವೆ.

First published:

  • 18

    Online Frauds: ಆನ್​​ಲೈನ್​​ ಮೋಸಗಳಿಂದ ಹಣ ಕಳೆದುಕೊಳ್ಳದಿರಲು ಈ 5 ವಿಧಾನಗಳನ್ನು ಅನುಸರಿಸಿ ಸಾಕು

    2016ರ ನವೆಂಬರ್ 8ರಂದು ಪಿಎಂ ಮೋದಿ ನೋಟು ಅಮಾನ್ಯೀಕರಣವನ್ನು ಘೋಷಿಸಿದಾಗ ಭಾರತದಲ್ಲಿ ಮೊದಲ ಬಾರಿಗೆ ಡಿಜಿಟಲ್ ವಹಿವಾಟುಗಳು ಏರಿಕೆ ಕಂಡವು. ಅದರ ನಂತರ, ಕೊರೊನಾ ನಂತರವಂತೂ ಆನ್ ಲೈನ್ ಪೇಮೆಂಟ್ ತುಂಬಾ ಹೆಚ್ಚಾಯಿತು.

    MORE
    GALLERIES

  • 28

    Online Frauds: ಆನ್​​ಲೈನ್​​ ಮೋಸಗಳಿಂದ ಹಣ ಕಳೆದುಕೊಳ್ಳದಿರಲು ಈ 5 ವಿಧಾನಗಳನ್ನು ಅನುಸರಿಸಿ ಸಾಕು

    ಈಗ ನಾವೆಲ್ಲಾ ಸಣ್ಣಪುಟ್ಟ ವಸ್ತುಗಳನ್ನು ಖರೀದಿಸಲು ಸಹ ಆನ್ ಲೈನ್ ಬಳಸುತ್ತೇವೆ. ಹೆಚ್ಚಿನ ಪ್ರಮಾಣದಲ್ಲಿ ಜನ ಆನ್ ಲೈನ್ ಪೇಮೆಂಟ್ ಮೇಲೆ ಅವಲಂಬಿತರಾಗಿದ್ದಾರೆ. ಕಷ್ಟದ ಸಮಯದಲ್ಲಿ ಡಿಜಿಟಲ್ ವಹಿವಾಟುಗಳು ನಮಗೆ ಸಹಾಯ ಮಾಡಿದರೂ, ಇದರಿಂದ ವಂಚನೆಯ ಅಪಾಯವೂ ಹೆಚ್ಚುತ್ತಿದೆ.

    MORE
    GALLERIES

  • 38

    Online Frauds: ಆನ್​​ಲೈನ್​​ ಮೋಸಗಳಿಂದ ಹಣ ಕಳೆದುಕೊಳ್ಳದಿರಲು ಈ 5 ವಿಧಾನಗಳನ್ನು ಅನುಸರಿಸಿ ಸಾಕು

    ಭಾರತೀಯರು ಡಿಜಿಟಲ್ ವಹಿವಾಟಿನ ಸಮಯದಲ್ಲಿ ಹೆಚ್ಚು ವಂಚನೆಗೆ ಗುರಿಯಾಗುತ್ತಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇದಕ್ಕೆ ಭಯಪಡಬೇಡಿ.. ಸಂಪೂರ್ಣ ಭದ್ರತೆಯೊಂದಿಗೆ ಡಿಜಿಟಲ್ ಹಣಕಾಸು ವಹಿವಾಟುಗಳನ್ನು ನಿರ್ವಹಿಸಲು ಸಹಾಯ ಮಾಡುವ ಕೆಲವು ಮಾರ್ಗಗಳನ್ನು ನಾವು ಇಂದು ಇಲ್ಲಿ ಹೇಳಲಿದ್ದೇವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Online Frauds: ಆನ್​​ಲೈನ್​​ ಮೋಸಗಳಿಂದ ಹಣ ಕಳೆದುಕೊಳ್ಳದಿರಲು ಈ 5 ವಿಧಾನಗಳನ್ನು ಅನುಸರಿಸಿ ಸಾಕು

    1) QR ಕೋಡ್ ಬಳಕೆ: QR ಕೋಡ್ ಗಳು ವಂಚಿಸಲು ಸುಲಭವಾದ ಮಾರ್ಗವಾಗಿದೆ. ಅನೇಕ ಬಾರಿ ನಾವು QR ಕೋಡ್ ಗೆ ಕಾರಣವಾಗುವ ಲಿಂಕ್ ಹೊಂದಿರುವ ಸಂದೇಶಗಳನ್ನು ಸ್ವೀಕರಿಸುತ್ತೇವೆ. ಆದರೆ ಅದನ್ನು ಕ್ಲಿಕ್ ಮಾಡಿ ಹಣ ಪಾವತಿಸಬೇಡಿ..

    MORE
    GALLERIES

  • 58

    Online Frauds: ಆನ್​​ಲೈನ್​​ ಮೋಸಗಳಿಂದ ಹಣ ಕಳೆದುಕೊಳ್ಳದಿರಲು ಈ 5 ವಿಧಾನಗಳನ್ನು ಅನುಸರಿಸಿ ಸಾಕು

    2) ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿ: ಹಣ ವರ್ಗಾವಣೆ ಅಥವಾ ಡಿಜಿಟಲ್ ವಹಿವಾಟು ಮಾಡುವಲ್ಲಿ ನೀವು ಎಂದಾದರೂ ತೊಂದರೆ ಎದುರಿಸಿದರೆ, ಕಾರ್ಡ್ ಕಂಪನಿ ಅವರರನ್ನು ಸಂಪರ್ಕಿಸುವುದು ಯಾವಾಗಲೂ ಸುರಕ್ಷಿತ ಮಾರ್ಗವಾಗಿರಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Online Frauds: ಆನ್​​ಲೈನ್​​ ಮೋಸಗಳಿಂದ ಹಣ ಕಳೆದುಕೊಳ್ಳದಿರಲು ಈ 5 ವಿಧಾನಗಳನ್ನು ಅನುಸರಿಸಿ ಸಾಕು

    3) ಟೋಕನೈಸೇಶನ್ ಬಳಕೆ : ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಡಿಜಿಟಲ್ ವಹಿವಾಟುಗಳಿಗಾಗಿ ಬಳಸುವ ಕಾರ್ಡ್ ಗಳ ಟೋಕನೈಸೇಶನ್ ಪರಿಕಲ್ಪನೆಯನ್ನು ಪರಿಚಯಿಸಿದೆ. ಬಳಕೆದಾರರು ಈಗ ಸೂಕ್ಷ್ಮ ಡೇಟಾವನ್ನು ಹಂಚಿಕೊಳ್ಳದೆಯೇ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ. ಆಗಾಗ್ಗೆ ಆನ್ ಲೈನ್ ವಹಿವಾಟುಗಳಲ್ಲಿ ತೊಡಗಿರುವ ಯಾರಾದರೂ ಉತ್ತಮ ಸುರಕ್ಷತೆಗಾಗಿ ಇದನ್ನು ಆರಿಸಿಕೊಳ್ಳಬೇಕು.

    MORE
    GALLERIES

  • 78

    Online Frauds: ಆನ್​​ಲೈನ್​​ ಮೋಸಗಳಿಂದ ಹಣ ಕಳೆದುಕೊಳ್ಳದಿರಲು ಈ 5 ವಿಧಾನಗಳನ್ನು ಅನುಸರಿಸಿ ಸಾಕು

    4) ಕ್ರೆಡಿಟ್ ಸ್ಕೋರ್: ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಯಾವಾಗಲೂ ಟ್ರ್ಯಾಕ್ ಮಾಡಿ. ಇದು ನಿಮ್ಮ ಮಾರುಕಟ್ಟೆಯ ವಿಶ್ವಾಸಾರ್ಹತೆಯನ್ನು ತಿಳಿಯಲು, ನಿಮ್ಮ ಕಾರ್ಡ್ ಮೂಲಕ ಮಾಡಿದ ಪಾವತಿಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Online Frauds: ಆನ್​​ಲೈನ್​​ ಮೋಸಗಳಿಂದ ಹಣ ಕಳೆದುಕೊಳ್ಳದಿರಲು ಈ 5 ವಿಧಾನಗಳನ್ನು ಅನುಸರಿಸಿ ಸಾಕು

    5) ರಕ್ಷಣೆಯ ಪದರಗಳು: ಡಿಜಿಟಲ್ ವಹಿವಾಟು ಅಪ್ಲಿಕೇಶನ್ ಗಳನ್ನು ಪ್ರವೇಶಿಸಲು ಯಾವಾಗಲೂ ಫಿಂಗರ್ಪ್ರಿಂಟ್ ಸ್ಕ್ಯಾನ್ ಅಥವಾ ಫೇಸ್ ಸ್ಕ್ಯಾನ್ ನಂತಹ ರಕ್ಷಣೆಯನ್ನು ಬಳಸುವುದು ಒಳಿತು. (ಸಾಂದರ್ಭಿಕ ಚಿತ್ರ)

    MORE
    GALLERIES