Farming: ಈ ಕೃಷಿ ಮಾಡಿದ್ರೆ ವರ್ಷಕ್ಕೆ 30 ಲಕ್ಷ ಲಾಭ ಸಿಗೋದ್ರಲ್ಲಿ ಅನುಮಾನವೇ ಇಲ್ಲ!

ಕೃಷಿ ಮಾಡಬೇಕು ಅಂದುಕೊಂಡಿರುವವರು ಮತ್ತು ಈಗಾಗಲೇ ವ್ಯವಸಾಯ ಮಾಡ್ತಿರೋರಿಗೆ ಇಲ್ಲೊಂದು ಶುಭಸುದ್ದಿ ಇದೆ. ಕಡಿಮೆ ಬಂಡವಾಳ ಹಾಕಿ, ಲಾಭದ ಬೆಳೆ ತೆಗೆಯುವ ಐಡಿಯಾ ಇಲ್ಲಿದೆ. ಹೌದು, ಇತ್ತೀಚೆಗೆ ರೈತರು ಸಾಂಪ್ರದಾಯಿಕ ಬೆಳೆಗಳ ಬದಲಾಗಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕಡಿಮೆ ಸಮಯ ಮತ್ತು ಕಡಿಮೆ ಬಂಡವಾಳದ ಜೊತೆಗೆ ಹೆಚ್ಚಿನ ಲಾಭ ನಿರೀಕ್ಷೆಯಲ್ಲಿದ್ದಾರೆ. ಅಂತಹ ರೈತರಿಗೆ ನಾವು ಕೊಡುವ ಸಲಹೆ ಸಹಕಾರಿಯಾಗಬಹುದು.

  • Local18
  • |
  •   | New Delhi, India
First published:

  • 17

    Farming: ಈ ಕೃಷಿ ಮಾಡಿದ್ರೆ ವರ್ಷಕ್ಕೆ 30 ಲಕ್ಷ ಲಾಭ ಸಿಗೋದ್ರಲ್ಲಿ ಅನುಮಾನವೇ ಇಲ್ಲ!

    ದೇಶದ ರೈತರು ಈಗ ಸಾಂಪ್ರದಾಯಿಕ ಕೃಷಿಗೆ ಬದಲಾಗಿ ತೋಟಗಾರಿಕಾ ಬೆಳೆಗಳತ್ತ ಗಮನ ಹರಿಸುತ್ತಿದ್ದಾರೆ. ಕಡಿಮೆ ವೆಚ್ಚದಲ್ಲಿ ಉತ್ತಮ ಲಾಭ ಪಡೆಯುವುದು ಅವರ ಉದ್ದೇಶವಾಗಿದೆ. (ಐಕಾನಿಕ್ ಚಿತ್ರ) (ಚಿತ್ರ ಕ್ರೆಡಿಟ್ ಪಿಕ್ಸಾಬೇ)

    MORE
    GALLERIES

  • 27

    Farming: ಈ ಕೃಷಿ ಮಾಡಿದ್ರೆ ವರ್ಷಕ್ಕೆ 30 ಲಕ್ಷ ಲಾಭ ಸಿಗೋದ್ರಲ್ಲಿ ಅನುಮಾನವೇ ಇಲ್ಲ!

    ಕ್ಯಾಪ್ಸಿಕಂ/ ದಪ್ಪ ಮೆಣಸಿನಕಾಯಿ ಎಂದು ಕರೆಯುವ ತರಕಾರಿ ಬೆಳೆ ಹೆಚ್ಚು ಲಾಭದಾಯಕವಾಗಿದೆ. ರಾಜಸ್ಥಾನದ ಭರತ್​ಪುರ ಜಿಲ್ಲೆಯ ಚಿಕ್ಕನಾ ಗ್ರಾಮದ ರೈತ ಪೃಥ್ವಿ ಸಿಂಗ್ ಈ ಬೆಳೆ ಬೆಳೆದು ಲಾಭ ಗಳಿಸಿದ್ದಾರೆ. ಉತ್ತರ ಪ್ರದೇಶದ ರೈತರಿಂದ ಕಲಿತು 2 ವರ್ಷಗಳ ಹಿಂದೆ ಕ್ಯಾಪ್ಸಿಕಂ ಕೃಷಿ ಆರಂಭಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಇನ್ನೊಂದೆಡೆ ಈ ಬಾರಿ ಕ್ಯಾಪ್ಸಿಕಂಗೆ ಬೆಲೆ ಚೆನ್ನಾಗಿರುವುದರಿಂದ ದುಪ್ಪಟ್ಟು ಆದಾಯ ಬಂದಿದೆ. (ಐಕಾನಿಕ್ ಚಿತ್ರ) (ಚಿತ್ರ ಕ್ರೆಡಿಟ್ ಪಿಕ್ಸಾಬೇ)

    MORE
    GALLERIES

  • 37

    Farming: ಈ ಕೃಷಿ ಮಾಡಿದ್ರೆ ವರ್ಷಕ್ಕೆ 30 ಲಕ್ಷ ಲಾಭ ಸಿಗೋದ್ರಲ್ಲಿ ಅನುಮಾನವೇ ಇಲ್ಲ!

    ಈ ಕೃಷಿಯಿಂದ ಬರುವ ಆದಾಯ ವರ್ಷಕ್ಕೆ 25 ರಿಂದ 30 ಲಕ್ಷ ರೂ. ಇವರ ಸಂಪಾದನೆ ನೋಡಿ ಸುತ್ತಮುತ್ತಲಿನ ರೈತರೂ ಈ ಕೃಷಿ ಮಾಡಲು ಮುಂದಾಗಿದ್ದಾರೆ. (ಐಕಾನಿಕ್ ಚಿತ್ರ) (ಚಿತ್ರ ಕ್ರೆಡಿಟ್ ಪಿಕ್ಸಾಬೇ)

    MORE
    GALLERIES

  • 47

    Farming: ಈ ಕೃಷಿ ಮಾಡಿದ್ರೆ ವರ್ಷಕ್ಕೆ 30 ಲಕ್ಷ ಲಾಭ ಸಿಗೋದ್ರಲ್ಲಿ ಅನುಮಾನವೇ ಇಲ್ಲ!

    ಪೃಥ್ವಿ ಸಿಂಗ್ ಮಾತನಾಡುತ್ತಾ, ಉತ್ತರ ಪ್ರದೇಶದ ಆಗ್ರಾ ಜಿಲ್ಲೆ ನಮ್ಮ ಗ್ರಾಮದ ಸಮೀಪದಲ್ಲಿದೆ. ಯಾವುದಾದರೂ ಶಾಪಿಂಗ್ ಮಾಡಬೇಕಾದರೆ ಆಗ್ರಾಕ್ಕೆ ಮಾತ್ರ ಹೋಗುತ್ತಾರೆ. ಒಂದು ದಿನ ನಾನು ನನ್ನ ಹಳ್ಳಿಯ ರೈತರೊಂದಿಗೆ ಆಲೂಗಡ್ಡೆ ಮಾರಲು ಆಗ್ರಾ ಮಂಡಿಗೆ ಹೋಗಿದ್ದೆ. ಅಲ್ಲಿ ಕ್ಯಾಪ್ಸಿಕಂ ಮಾರಾಟ ಮಾಡಲು ಆಗ್ರಾದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದನ್ನು ನೋಡಿದೆ. (ಐಕಾನಿಕ್ ಚಿತ್ರ) (ಚಿತ್ರ ಕ್ರೆಡಿಟ್ ಪಿಕ್ಸಾಬೇ)

    MORE
    GALLERIES

  • 57

    Farming: ಈ ಕೃಷಿ ಮಾಡಿದ್ರೆ ವರ್ಷಕ್ಕೆ 30 ಲಕ್ಷ ಲಾಭ ಸಿಗೋದ್ರಲ್ಲಿ ಅನುಮಾನವೇ ಇಲ್ಲ!

    ಆ ರೈತರನ್ನು ಸಂಪರ್ಕಿಸಿ ಕ್ಯಾಪ್ಸಿಕಂ ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡೆ . ಅವರ ಸಲಹೆ ಮೇರೆಗೆ ಗ್ರಾಮದ ರೈತರಿಂದ 10 ಎಕರೆ ಜಮೀನನ್ನು ಗುತ್ತಿಗೆ ಪಡೆದು ಎರಡು ವರ್ಷಗಳ ಹಿಂದೆ ಕೃಷಿ ಮಾಡಿದೆ ಎಂದು ಹೇಳಿದರು. (ಐಕಾನಿಕ್ ಚಿತ್ರ) (ಚಿತ್ರ ಕ್ರೆಡಿಟ್ ಪಿಕ್ಸಾಬೇ)

    MORE
    GALLERIES

  • 67

    Farming: ಈ ಕೃಷಿ ಮಾಡಿದ್ರೆ ವರ್ಷಕ್ಕೆ 30 ಲಕ್ಷ ಲಾಭ ಸಿಗೋದ್ರಲ್ಲಿ ಅನುಮಾನವೇ ಇಲ್ಲ!

    ವರ್ಷಕ್ಕೆ 6 ರಿಂದ 7 ಬಾರಿ ಕ್ಯಾಪ್ಸಿಕಂ ಕೊಯ್ಲು ಮಾಡಲಾಗುತ್ತದೆ. ಒಂದು ಎಕರೆಯಲ್ಲಿ 15 ಸಾವಿರ ಕೆಜಿ ಕ್ಯಾಪ್ಸಿಕಂ ಬೆಳೆಯಬಹುದು. ಈ ಬಾರಿ ಮಾರುಕಟ್ಟೆಯಲ್ಲಿ ಕ್ಯಾಪ್ಸಿಕಂ ಬೆಲೆ ಕ್ವಿಂಟಾಲ್‌ಗೆ 1,500 ರಿಂದ 2,000 ರೂ. ಇದೆ. ಸುಮಾರು 10 ಎಕರೆ ಕೃಷಿಯಿಂದ ವರ್ಷಕ್ಕೆ ರೂ. 25 ರಿಂದ 30 ಲಕ್ಷ ರೂ. ಸಂಪಾದನೆ ಮಾಡಬಹುದು. (ಐಕಾನಿಕ್ ಚಿತ್ರ) (ಚಿತ್ರ ಕ್ರೆಡಿಟ್ ಪಿಕ್ಸಾಬೇ)

    MORE
    GALLERIES

  • 77

    Farming: ಈ ಕೃಷಿ ಮಾಡಿದ್ರೆ ವರ್ಷಕ್ಕೆ 30 ಲಕ್ಷ ಲಾಭ ಸಿಗೋದ್ರಲ್ಲಿ ಅನುಮಾನವೇ ಇಲ್ಲ!

    ಕ್ಯಾಪ್ಸಿಕಂ ಬೆಳೆಯಲು ಹಸಿರುಮನೆ ಸೂಕ್ತ. ಆಕರ್ಷಕ ಬಣ್ಣ, ನಿರ್ದಿಷ್ಟ ಆಕಾರ, ಗರಿಷ್ಠ ಪ್ರಮಾಣ ಮತ್ತು ಉತ್ತಮ ಗುಣಮಟ್ಟದ ಇಳುವರಿ ಪಡೆಯಲು ಕ್ಯಾಪ್ಸಿಕಂ ಅನ್ನು ಹಸಿರುಮನೆಗಳಲ್ಲಿ ಬೆಳೆಯಬಹುದು. (ಐಕಾನಿಕ್ ಚಿತ್ರ) (ಚಿತ್ರ ಕ್ರೆಡಿಟ್ ಪಿಕ್ಸಾಬೇ)

    MORE
    GALLERIES