ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿಗಾಗಿ ಕಾಯುತ್ತಿರುವ ರೈತರಿಗೆ ಮಹತ್ವದ ಸುದ್ದಿಯೊಂದು ಬಂದಿದೆ. ಮುಂದಿನ ಕಂತಿಗಾಗಿ ಕಾತರದಿಂದ ಕಾಯುತ್ತಿರುವ ರೈತರಲ್ಲಿ ನೀವೂ ಒಬ್ಬರಾಗಿದ್ದರೆ, ನೀವು ಇ-ಕೆವೈಸಿ ಮಾಡದಿದ್ದರೆ, ಈ ಯೋಜನೆಯಡಿ ನಿಮಗೆ ರೂ. 2000 ಲಭ್ಯವಿಲ್ಲ. 13ನೇ ಕಂತಿಗೆ ರೂ. 2,000 ಪಡೆಯಲು ಶೀಘ್ರದಲ್ಲೇ KYC ಅನ್ನು ನವೀಕರಿಸಿ. (ಸಾಂಕೇತಿಕ ಚಿತ್ರ)
ಇದರ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು ಎಂಬ ಷರತ್ತು ಕೂಡ ಇದೆ. ನೋಂದಣಿಗಾಗಿ, ರೈತರು ತಮ್ಮ ಪಡಿತರ ಚೀಟಿ ವಿವರಗಳನ್ನು ಅಪ್ಲೋಡ್ ಮಾಡಬೇಕು. ಇತರ ಅಗತ್ಯ ದಾಖಲೆಗಳ ಸಾಫ್ಟ್ ಪ್ರತಿಗಳನ್ನು ಸಲ್ಲಿಸಬೇಕು. ಇಲ್ಲಿಯವರೆಗೆ ಇ ಕೆವೈಸಿ ಮಾಡದ ರೈತರು, ಆ ರೈತರು ಪಿಎಂ ಕಿಸಾನ್ಗಾಗಿ ಇ ಕೆವೈಸಿಯನ್ನು 2 ರೀತಿಯಲ್ಲಿ ಪೂರ್ಣಗೊಳಿಸಬಹುದು.(ಸಾಂಕೇತಿಕ ಚಿತ್ರ)
ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ ಮೂಲಕ ಮನೆಯಲ್ಲಿ ಕುಳಿತು ಈ ಕೆಲಸವನ್ನು ಆನ್ಲೈನ್ನಲ್ಲಿ ಮಾಡಬಹುದು. ಇದಲ್ಲದೆ, ರೈತರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (CSC) ಭೇಟಿ ನೀಡುವ ಮೂಲಕ ತಮ್ಮ ಇ-ಕೆವೈಸಿ ಪಡೆಯಬಹುದು. ರೈತನೇ ಒಟಿಪಿ ಮೂಲಕ ಇ-ಕೆವೈಸಿ ಮಾಡಿದರೆ ಹಣ ಕೊಡಬೇಕಾಗಿಲ್ಲ, ಆದರೆ ಕಾಮನ್ ಸರ್ವೀಸ್ ಸೆಂಟರ್ಗೆ ಹೋಗಿ ಇ-ಕೆವೈಸಿ ಮಾಡಿದರೆ ಅದಕ್ಕಾಗಿ ಒಂದಿಷ್ಟು ರೂಪಾಯಿ ಖರ್ಚು ಮಾಡಬೇಕಾಗುತ್ತದೆ.(ಸಾಂಕೇತಿಕ ಚಿತ್ರ)