ಇಲ್ಲಿನ ರೈತರು ನೀರನ್ನು ಕರ್ನಾಟಕದಿಂದ ಪಡೆಯಬೇಕೆಂದು ಬಯಸಿದ್ದರು. ಆದರೆ ಅದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಇನ್ನು ಮಳೆ ಕಡಿಮೆ, ನೀರಿನ ಸೌಲಭ್ಯ ಇಲ್ಲ, ಆದರೆ ಇಂತಹ ಬರಪೀಡಿತ ಪ್ರದೇಶದಲ್ಲೂ ರೈತನೊಬ್ಬ ಮಾಡಿರುವ ಪ್ರಯೋಗ ಜಿಲ್ಲೆಯಲ್ಲಿ ಮನೆ ಮಾತಾಗಿದೆ. ಏಕೆಂದರೆ ಈ ರೈತ ತನ್ನ ಜಮೀನಿನಲ್ಲಿ ಸೇಬು ಬೆಳೆ ಬೆಳೆದು ಎಲ್ಲರನ್ನು ನಿಬ್ಬೆರಗಾಗಿಸಿದ್ದಾನೆ.