Helicopter ಖರೀದಿ ಮಾಡೋಕೆ ಸಾಲ ಕೇಳಿದ ರೈತ! ಕಾರಣ ಕೇಳಿದ್ರೆ ಸಖತ್ ಫನ್ನಿ ಅನ್ನಿಸುತ್ತೆ ರೀ
ರೈತರ ಕಥೆ ಕೇಳಿದರೆ ಕರುಳು ಚುರುಕ್ ಅನ್ನದೇ ಇರದು. ಕಷ್ಟ ಪಟ್ಟು ಬೆವರು ಸುರಿಸಿ ಕೃಷಿ ಮಾಡಿ ಬೆಳೆ ತೆಗೆದಿರುತ್ತಾರೆ. ಆದರೆ, ಸರಿಯಾದ ಬೆಲೆ ಸಿಗದೇ ರೈತರು ಕಂಗಲಾಗಿದ್ದಾರೆ. ಇದನ್ನು ಬಿಟ್ಟು ಬೇರೇನಾದ್ರೂ ಮಾಡಬೇಕು ಎಂದು ಹೆಚ್ಚಿನ ರೈತರು ಹವಣಿಸುತ್ತಲೇ ಇರುತ್ತಾರೆ.
ರೈತರ ಕಥೆ ಕೇಳಿದರೆ ಕರುಳು ಚುರುಕ್ ಅನ್ನದೇ ಇರದು. ಕಷ್ಟ ಪಟ್ಟು ಬೆವರು ಸುರಿಸಿ ಕೃಷಿ ಮಾಡಿ ಬೆಳೆ ತೆಗೆದಿರುತ್ತಾರೆ. ಆದರೆ, ಸರಿಯಾದ ಬೆಲೆ ಸಿಗದೇ ರೈತರು ಕಂಗಲಾಗಿದ್ದಾರೆ. ಇದನ್ನು ಬಿಟ್ಟು ಬೇರೇನಾದ್ರೂ ಮಾಡಬೇಕು ಎಂದು ಹೆಚ್ಚಿನ ರೈತರು ಹವಣಿಸುತ್ತಲೇ ಇರುತ್ತಾರೆ.
2/ 8
ಕೃಷಿಯಿಂದ ಲಾಭ ಬರುತ್ತಿಲ್ಲ ಎಂದು ಮಹಾರಾಷ್ಟ್ರದ ಹಿಂಗೋಲಿಯ 22 ವರ್ಷದ ರೈತನೊಬ್ಬ ಹೆಲಿಕಾಪ್ಟರ್ ಖರೀದಿಸಲು ಹೊರಟಿದ್ದಾನೆ. ಇದಕ್ಕಾಗಿ 6.6 ಕೋಟಿ ರೂ. ಸಾಲ ನೀಡುವಂತೆಯೂ ಬ್ಯಾಂಕ್ಗೆ ಅರ್ಜಿ ಸಲ್ಲಿಸಿದ್ದಾನೆ.
3/ 8
ಹೆಲಿಕಾಪ್ಟರ್ ಪಡೆದು ಅದನ್ನು ಬಾಡಿಗೆಗೆ ನೀಡಿ ನೆಮ್ಮದಿಯ ಜೀವನ ನಡೆಸುವುದೇ ಈತನ ಕನಸಂತೆ. ಮಹಾರಾಷ್ಟ್ರದ ಹಿಂಗೋಲಿಯ 22 ವರ್ಷದ ರೈತ ಕೃಷಿಗೆ ಬೆಲೆ ಬಂದಿದೆ ಎಂಬ ಕಾರಣ ನೀಡಿ ಹೆಲಿಕಾಪ್ಟರ್ ಖರೀದಿಸಲು ಮತ್ತು ಬಾಡಿಗೆಗೆ ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ.
4/ 8
ತಕ್ತೋಡಾ ಗ್ರಾಮದ ಕೈಲಾಸ್ ಪತಂಗೆ ಈ ರೀತಿ ಸಾಲ ಕೇಳಿದ ರೈತ. ಈತ ಗೋರೆಗಾಂವ್ನ ಬ್ಯಾಂಕ್ಗೆ ತೆರಳಿ ಸಾಲ ಕೇಳಿಬಂದಿದ್ದಾನೆ. ಈತನ ಬಳಿಯಲ್ಲಿ ಎರಡು ಎಕರೆ ಭೂಮಿ ಇದೆ. ಕಳೆದ ಕೆಲವು ವರ್ಷಗಳಿಂದ ಅನಿಯಮಿತ ಮಳೆ ಮತ್ತು ಬರಗಾಲದಂತಹ ಪರಿಸ್ಥಿತಿಗಳು ಕೃಷಿಯನ್ನು ದುಬಾರಿಯಾಗಿಸಿದೆ.ಬರಗಾಲದಿಂದಾಗಿ ಇದರಲ್ಲಿ ಸರಿಯಾಗಿ ಬೆಳೆ ಬೆಳೆಯಲು ಆಗುತ್ತಿಲ್ಲ ಎಂಬುದು ಈತನ ದೂರು.
5/ 8
“ಕಳೆದ ಎರಡು ವರ್ಷಗಳಿಂದ ನನ್ನ ಜಮೀನಿನಲ್ಲಿ ಸೋಯಾಬೀನ್ ಬೆಳೆಯುತ್ತಿದ್ದೆ. ಆದರೆ ಅಕಾಲಿಕ ಮಳೆಯಿಂದಾಗಿ ಅದು ನನಗೆ ಉತ್ತಮ ಆದಾಯವನ್ನು ತರಲಿಲ್ಲ. ಬೆಳೆ ವಿಮೆಯ ಹಣವೂ ಸಾಕಾಗಲಿಲ್ಲ,” ಎಂದು ಪತಂಗೆ ಹೇಳಿದ್ದಾನೆ.
6/ 8
"ದೊಡ್ಡ ವ್ಯಕ್ತಿಗಳು ಮಾತ್ರ ದೊಡ್ಡ ಕನಸುಗಳನ್ನು ಹೊಂದಿರಬೇಕು, ರೈತರೂ ದೊಡ್ಡ ಕನಸು ಕಾಣಬೇಕು ಎಂದು ಯಾರು ಹೇಳುತ್ತಾರೆ, ನಾನು ಹೆಲಿಕಾಪ್ಟರ್ ಖರೀದಿಸಲು 6.65 ಕೋಟಿ ರೂಪಾಯಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಇತರ ವ್ಯವಹಾರಗಳಲ್ಲಿ ಸಾಕಷ್ಟು ಪೈಪೋಟಿ ಇದೆ."
7/ 8
ಈ ಅಂಶಗಳನ್ನು ಪರಿಗಣಿಸಿ, ಪತಂಗೆ ಒಂದು ಹೆಲಿಕಾಪ್ಟರ್ ಖರೀದಿಸಿ ಅದನ್ನು ಬಾಡಿಗೆಗೆ ಕೊಟ್ಟು ಉತ್ತಮ ಜೀವನ ಸಾಗಿಸುವ ಯೋಚನೆಯಲ್ಲಿದ್ದಾನೆ.
8/ 8
'ಇತರ ವ್ಯವಹಾರಗಳಲ್ಲಿ ಸಾಕಷ್ಟು ಸ್ಪರ್ಧೆ ಇದೆ. ಆದ್ದರಿಂದ ನಾನು ಇದನ್ನು ಮಾಡಲು ನಿರ್ಧರಿಸಿದ್ದೇನೆ,” ಎಂದು ಎದೆಯುಬ್ಬಿಸಿ ಹೇಳಿದ್ದಾನೆ. ಇವರ ಡಿಮ್ಯಾಂಡ್ಗೆ ಬ್ಯಾಂಕ್ನವರು ಸಾಲ ಕೊಡುತ್ತಾರಾ ಕಾದು ನೋಡಬೇಕಿದೆ.