Oil Price Down: ಚುನಾವಣೆಗೂ ಮುನ್ನವೇ ಗುಡ್​ ನ್ಯೂಸ್ ಕೊಟ್ಟ ಮೋದಿ, ಅಡುಗೆ ಎಣ್ಣೆ ಬೆಲೆ ಭಾರೀ ಇಳಿಕೆ!

Oil Rate: ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಬಿಗ್​ ಗುಡ್​ ನ್ಯೂಸ್ ಕೊಟ್ಟಿದೆ. ಇದರಿಂದ ಅನೇಕರಿಗೆ ನೆಮ್ಮದಿ ಸಿಗಲಿದೆ ಎಂದರೆ ತಪ್ಪಾಗಲ್ಲ. ಅದರಲ್ಲೂ ಮದುವೆ ಸೀಸನ್​ನಲ್ಲಿ ಈ ನಿರ್ಧಾರ ಕೈಗೊಂಡಿರೋದು ಇನ್ನೂ ಸೂಪರ್​ ಅಂತಿದ್ದಾರೆ ಜನ.

First published:

  • 19

    Oil Price Down: ಚುನಾವಣೆಗೂ ಮುನ್ನವೇ ಗುಡ್​ ನ್ಯೂಸ್ ಕೊಟ್ಟ ಮೋದಿ, ಅಡುಗೆ ಎಣ್ಣೆ ಬೆಲೆ ಭಾರೀ ಇಳಿಕೆ!

    ಸಾಮಾನ್ಯ ಜನರಿಗೆ ಈ ಸುದ್ದಿ ನೆಮ್ಮದಿ ಕೊಡಲಿದೆ ಎಂದರೆ ತಪ್ಪಾಗಲ್ಲ. ಮದುವೆ ಸೀಸನ್‌ಗೆ ಇದು ಒಳ್ಳೆಯ ಸುದ್ದಿ. ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ. ಇದರಿಂದ ಎಷ್ಟೋ ಮಂದಿಗೆ ನೆಮ್ಮದಿ ಸಿಗಲಿದೆ ಎನ್ನಬಹುದು.

    MORE
    GALLERIES

  • 29

    Oil Price Down: ಚುನಾವಣೆಗೂ ಮುನ್ನವೇ ಗುಡ್​ ನ್ಯೂಸ್ ಕೊಟ್ಟ ಮೋದಿ, ಅಡುಗೆ ಎಣ್ಣೆ ಬೆಲೆ ಭಾರೀ ಇಳಿಕೆ!

    ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗುತ್ತಿದೆ. ಈ ಆದೇಶದಲ್ಲಿ ಕೇಂದ್ರ ಸರ್ಕಾರ ಮಹತ್ವದ ಆದೇಶವನ್ನೂ ಹೊರಡಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ದರ ಇಳಿಕೆಗೆ ಅನುಗುಣವಾಗಿ ದೇಶೀಯ ಮಾರುಕಟ್ಟೆಯಲ್ಲೂ ಅಡುಗೆ ಎಣ್ಣೆಯ ಬೆಲೆಯನ್ನು ಕಡಿಮೆ ಮಾಡುವಂತೆ ತೈಲ ಕಂಪನಿಗಳಿಗೆ ಸರ್ಕಾರ ಸೂಚಿಸಿದೆ.

    MORE
    GALLERIES

  • 39

    Oil Price Down: ಚುನಾವಣೆಗೂ ಮುನ್ನವೇ ಗುಡ್​ ನ್ಯೂಸ್ ಕೊಟ್ಟ ಮೋದಿ, ಅಡುಗೆ ಎಣ್ಣೆ ಬೆಲೆ ಭಾರೀ ಇಳಿಕೆ!

    ಇದರಿಂದಾಗಿ ಅಡುಗೆ ಎಣ್ಣೆ ಮಾರಾಟ ಮಾಡುವ ಕಂಪನಿಗಳು ತೈಲ ಬೆಲೆ ಇಳಿಕೆ ಮಾಡಲು ನಿರ್ಧರಿಸಿವೆ. ಅಡುಗೆ ಎಣ್ಣೆಯ ಬೆಲೆಯನ್ನು ಶೇ.6ರಷ್ಟು ಇಳಿಸಲು ನಿರ್ಧರಿಸಲಾಗಿದೆ. ಇದರಿಂದ ಜನ ಸಾಮಾನ್ಯರಿಗೆ ಸಾಕಷ್ಟು ನೆಮ್ಮದಿ ಸಿಗಲಿದೆ ಎಂದು ಹೇಳಬಹುದು.

    MORE
    GALLERIES

  • 49

    Oil Price Down: ಚುನಾವಣೆಗೂ ಮುನ್ನವೇ ಗುಡ್​ ನ್ಯೂಸ್ ಕೊಟ್ಟ ಮೋದಿ, ಅಡುಗೆ ಎಣ್ಣೆ ಬೆಲೆ ಭಾರೀ ಇಳಿಕೆ!

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸರಕು ದರಗಳಿಗೆ ಅನುಗುಣವಾಗಿ ದೇಶದಲ್ಲಿ ಅಡುಗೆ ಎಣ್ಣೆಯ ಗರಿಷ್ಠ ಮಾರಾಟ ಬೆಲೆಯನ್ನು (ಎಂಆರ್‌ಪಿ) ಕಡಿಮೆ ಮಾಡಬೇಕು ಎಂದು ಕೇಂದ್ರ ಹೇಳಿದೆ. ಹೀಗಾಗಿ ತೈಲ ಕಂಪನಿಗಳೂ ದರ ಕಡಿತಕ್ಕೆ ಒಪ್ಪಿಕೊಂಡಿವೆ.

    MORE
    GALLERIES

  • 59

    Oil Price Down: ಚುನಾವಣೆಗೂ ಮುನ್ನವೇ ಗುಡ್​ ನ್ಯೂಸ್ ಕೊಟ್ಟ ಮೋದಿ, ಅಡುಗೆ ಎಣ್ಣೆ ಬೆಲೆ ಭಾರೀ ಇಳಿಕೆ!

    ಫಾರ್ಚೂನ್ ಬ್ರಾಂಡ್ ಅಡಿಯಲ್ಲಿ ಅಡುಗೆ ಎಣ್ಣೆಯನ್ನು ಮಾರಾಟ ಮಾಡುವ ಅದಾನಿ ವಿಲ್ಮಾರ್ ಮತ್ತು ಜೆಮಿನಿ ಬ್ರ್ಯಾಂಡ್ ಅಡಿಯಲ್ಲಿ ತೈಲ ಮಾರಾಟ ಮಾಡುವ ಜೆಮಿನಿ ಎಡಿಬಲ್ ಮತ್ತು ಫ್ಯಾಟ್ಸ್ ಇಂಡಿಯಾದಂತಹ ಕಂಪನಿಗಳು ಅಡುಗೆ ತೈಲ ಬೆಲೆಯನ್ನು ರೂ. 5, ರೂ. 10 ಕಡಿತಗೊಳಿಸಲು ನಿರ್ಧರಿಸಲಾಗಿದೆ.

    MORE
    GALLERIES

  • 69

    Oil Price Down: ಚುನಾವಣೆಗೂ ಮುನ್ನವೇ ಗುಡ್​ ನ್ಯೂಸ್ ಕೊಟ್ಟ ಮೋದಿ, ಅಡುಗೆ ಎಣ್ಣೆ ಬೆಲೆ ಭಾರೀ ಇಳಿಕೆ!

    ಕಡಿಮೆ ದರದ ಲಾಭ ಮುಂದಿನ ಮೂರು ವಾರಗಳಲ್ಲಿ ಜನಸಾಮಾನ್ಯರಿಗೆ ಲಭ್ಯವಾಗಲಿದೆ. ಅಡುಗೆ ಎಣ್ಣೆ ಬೆಲೆ ಇಳಿಕೆಯಾಗುತ್ತಿರುವುದು ಸಕಾರಾತ್ಮಕ ಅಂಶ ಎಂದೇ ಹೇಳಬಹುದು. ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ ​​(ಎಸ್‌ಇಎ) ಈ ಪ್ರಮುಖ ಘೋಷಣೆ ಮಾಡಿದೆ.

    MORE
    GALLERIES

  • 79

    Oil Price Down: ಚುನಾವಣೆಗೂ ಮುನ್ನವೇ ಗುಡ್​ ನ್ಯೂಸ್ ಕೊಟ್ಟ ಮೋದಿ, ಅಡುಗೆ ಎಣ್ಣೆ ಬೆಲೆ ಭಾರೀ ಇಳಿಕೆ!

    ಅಡುಗೆ ಎಣ್ಣೆಗಳ ಮೇಲಿನ ಎಂಆರ್‌ಪಿಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ತಿಳಿಸಿರುವುದಾಗಿ ಎಸ್‌ಇಎ ಬಹಿರಂಗಪಡಿಸಿದೆ. ಈ ಬಗ್ಗೆ ತನ್ನ ಸದಸ್ಯರಿಗೆ ತಿಳಿಸಲು ಮತ್ತು ದರಗಳಲ್ಲಿನ ಕಡಿತದ ಪ್ರಯೋಜನವು ಜನಸಾಮಾನ್ಯರಿಗೆ ಶೀಘ್ರವಾಗಿ ಸಿಗುವಂತೆ ನೋಡಿಕೊಳ್ಳಲು ಕೇಳಲಾಗಿದೆ ಎಂದು ಅದು ಹೇಳಿದೆ.

    MORE
    GALLERIES

  • 89

    Oil Price Down: ಚುನಾವಣೆಗೂ ಮುನ್ನವೇ ಗುಡ್​ ನ್ಯೂಸ್ ಕೊಟ್ಟ ಮೋದಿ, ಅಡುಗೆ ಎಣ್ಣೆ ಬೆಲೆ ಭಾರೀ ಇಳಿಕೆ!

    ಕಳೆದ ಆರು ತಿಂಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದರಲ್ಲೂ ಕಳೆದ 60 ದಿನಗಳಲ್ಲಿ ದರ ಮತ್ತಷ್ಟು ಕಡಿಮೆಯಾಗಿದೆ. ಶೇಂಗಾ, ಸೋಯಾಬೀನ್, ಸಾಸಿವೆ ಉತ್ಪಾದನೆಯೂ ಹೆಚ್ಚಿದೆ. ಆದರೆ, ದೇಶೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಿಲ್ಲ.

    MORE
    GALLERIES

  • 99

    Oil Price Down: ಚುನಾವಣೆಗೂ ಮುನ್ನವೇ ಗುಡ್​ ನ್ಯೂಸ್ ಕೊಟ್ಟ ಮೋದಿ, ಅಡುಗೆ ಎಣ್ಣೆ ಬೆಲೆ ಭಾರೀ ಇಳಿಕೆ!

    ಅಂತರಾಷ್ಟ್ರೀಯ ಮಾರುಕಟ್ಟೆಯ ಪರಿಸ್ಥಿತಿಗಳ ಪ್ರಕಾರ, ದೇಶೀಯ ಮಾರುಕಟ್ಟೆಯಲ್ಲಿ ಇನ್ನೂ ಅಡುಗೆ ಎಣ್ಣೆಯ ಬೆಲೆ ಹೆಚ್ಚಾಗಿದೆ ಎಂದು ಹೇಳಬಹುದು. ಹಾಗಾಗಿಯೇ ಕೇಂದ್ರ ಸರ್ಕಾರ ಇತ್ತೀಚೆಗೆ ತೈಲ ಕಂಪನಿಗಳಿಗೆ ದರ ಇಳಿಕೆ ಮಾಡುವಂತೆ ಆದೇಶ ನೀಡಿತ್ತು. ಅದಕ್ಕೆ ತಕ್ಕಂತೆ ಕಂಪನಿಗಳೂ ದರ ಇಳಿಕೆ ಮಾಡಿವೆ.

    MORE
    GALLERIES