Edible Oil Price Down: ಜನಸಾಮಾನ್ಯರಿಗೆ ಬಂಪರ್ ಸುದ್ದಿ- ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ

Oil Rate Down | ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದಾಗಿ ದೇಶಕ್ಕೆ ಆಮದು ಕೂಡ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಹಾಗಾಗಿ ಜನಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದಾರೆ.

First published:

  • 18

    Edible Oil Price Down: ಜನಸಾಮಾನ್ಯರಿಗೆ ಬಂಪರ್ ಸುದ್ದಿ- ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ

    Oil Price | ಸತತ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದ ಗ್ರಾಹಕನಿಗೆ ಈಗ ಸಿಹಿಸುದ್ದಿ ಸಿಕ್ಕಿದೆ. ಹೌದು, ಎಲ್ಲಾ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿ ಜನಸಾಮಾನ್ಯರ ಜೇಬು ಸುಡುತ್ತಿತ್ತು. ಆದರೆ ಈಗ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಿದೆ.

    MORE
    GALLERIES

  • 28

    Edible Oil Price Down: ಜನಸಾಮಾನ್ಯರಿಗೆ ಬಂಪರ್ ಸುದ್ದಿ- ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ

    ವಿದೇಶಿ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲೂ ತೈಲ ಬೆಲೆ ಇಳಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. ಇದು ಜನರ ಪಾಲಿಗೆ ಸಮಾಧಾನದ ವಿಷಯ ಎಂದು ಹೇಳಬಹುದು. ಸ್ಥಳೀಯ ಮಂಡಿಗಳಲ್ಲಿ ಎಣ್ಣೆ ಮತ್ತು ಎಣ್ಣೆಕಾಳುಗಳ ಬೆಲೆ ಕಡಿಮೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ದರ ಇಳಿಕೆಯಾದ ಹಿನ್ನೆಲೆ, ಕಡಿಮೆ ಬೆಲೆಗೆ ದೇಶಕ್ಕೆ ತೈಲ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಅಡುಗೆ ಎಣ್ಣೆ ಬೆಲೆ ಇಳಿಕೆ ಕಾಣುತ್ತಿದೆ.

    MORE
    GALLERIES

  • 38

    Edible Oil Price Down: ಜನಸಾಮಾನ್ಯರಿಗೆ ಬಂಪರ್ ಸುದ್ದಿ- ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ

    ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ ಪ್ರಕಾರ, ನವೆಂಬರ್-ಮಾರ್ಚ್ ಅವಧಿಯಲ್ಲಿ ಅಡುಗೆ ಎಣ್ಣೆ ಆಮದು ವರ್ಷದಿಂದ ವರ್ಷಕ್ಕೆ 23.7 % ರಷ್ಟು ಹೆಚ್ಚಾಗಿದೆ. 6.98 ಮಿಲಿಯನ್ ಟನ್ ದಾಖಲಾಗಿದೆ. ಪಾಮ್ ಆಯಿಲ್ ಬೆಲೆಗಳು ಏಪ್ರಿಲ್‌ನಲ್ಲಿ ವರ್ಷದಿಂದ ವರ್ಷಕ್ಕೆ ಶೇ.42 ರಷ್ಟು ಇಳಿಕೆಯಾಗಿವೆ. ಪ್ರತಿ ಟನ್‌ಗೆ 1791 ಡಾಲರ್‌ಗಳಿಂದ 1030 ಡಾಲರ್‌ಗೆ ಇಳಿದಿದೆ.

    MORE
    GALLERIES

  • 48

    Edible Oil Price Down: ಜನಸಾಮಾನ್ಯರಿಗೆ ಬಂಪರ್ ಸುದ್ದಿ- ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ

    ಅಲ್ಲದೆ, ಕಚ್ಚಾ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯ ಬೆಲೆಗಳು ಕ್ರಮವಾಗಿ 45 % ಮತ್ತು 53 % ರಷ್ಟು ಕಡಿಮೆಯಾಗಿದೆ. ಇವುಗಳು ಪ್ರತಿ ಟನ್‌ಗೆ ಕ್ರಮವಾಗಿ 1040 ಡಾಲರ್ ಮತ್ತು 1010 ಡಾಲರ್‌ಗಳಿಗೆ ಇಳಿದಿವೆ.

    MORE
    GALLERIES

  • 58

    Edible Oil Price Down: ಜನಸಾಮಾನ್ಯರಿಗೆ ಬಂಪರ್ ಸುದ್ದಿ- ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ

    ಬೆಲೆ ಕುಸಿತದ ಹಿನ್ನೆಲೆಯಲ್ಲಿ, ಹೆಚ್ಚಿನ ಆಮದುಗಳಿಂದಾಗಿ ಸಾಸಿವೆ ಮತ್ತು ಸೋಯಾಬೀನ್ ಬೆಲೆ ದೇಶೀಯ ಮಾರುಕಟ್ಟೆಯಲ್ಲಿ ಕುಸಿಯಿತು. ದೇಶದ ಪ್ರಮುಖ ತೈಲ ಸಂಘವಾದ SOPA ಪ್ರಕಾರ, ಸರ್ಕಾರವು ಸಾಸಿವೆ ಎಣ್ಣೆಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿದೆ. ದೇಶದ ಕೆಲವು ಮಾರುಕಟ್ಟೆಗಳಲ್ಲಿ ಸಾಸಿವೆ ಎಣ್ಣೆಯ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಇದೆ.

    MORE
    GALLERIES

  • 68

    Edible Oil Price Down: ಜನಸಾಮಾನ್ಯರಿಗೆ ಬಂಪರ್ ಸುದ್ದಿ- ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ

    ಸಾಸಿವೆ ಎಣ್ಣೆ ದರ ಈಗ 5 ಸಾವಿರದಿಂದ 5100 ರೂ.ಗೆ ಹೆಚ್ಚಿದೆ. ಇದರ ಬೆಂಬಲ ಬೆಲೆ 5450 ರೂ.ಕ್ಕಿಂತ ಕಡಿಮೆಯಾಗಿದೆ. ಕಡಲೆ ಎಣ್ಣೆಯ ಬೆಲೆ ಕ್ವಿಂಟಾಲ್‌ಗೆ 6805 ರಿಂದ 6865 ರೂ.ಗೆ ಹೆಚ್ಚಾಗಿದೆ, ಪ್ರತಿ ಟಿನ್ ಕಡಲೆ ಸಂಸ್ಕರಿಸಿದ ತೈಲ ಬೆಲೆ 2540 ರಿಂದ 2805 ರೂ. ಆಗಿದೆ.

    MORE
    GALLERIES

  • 78

    Edible Oil Price Down: ಜನಸಾಮಾನ್ಯರಿಗೆ ಬಂಪರ್ ಸುದ್ದಿ- ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ

    ಪ್ರತಿ ಕ್ವಿಂಟಾಲ್‌ಗೆ ಪಾಮೊಲಿನ್ x ಕ್ಯಾಂಡೆಲಾ ಬೆಲೆ 9400 ರೂ. ಮುಂದುವರಿಯುತ್ತದೆ. ಸೋಯಾಬೀನ್ ಎಣ್ಣೆ ಡಿಗುಮ್ ಕ್ಯಾಂಡ್ಲಾ ಬೆಲೆ ಕ್ವಿಂಟಾಲ್‌ಗೆ 9 ಸಾವಿರ ರೂ. ಇದೆ. ಪಾಮೊಲಿನ್ ಆರ್‌ಬಿಡಿ ಕ್ವಿಂಟಾಲ್ ಬೆಲೆ 10,250 ರೂ. ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ದರ ಇಳಿಕೆಯಿಂದಾಗಿ, ನಮ್ಮ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ಮುಂಬರುವ ಅವಧಿಯಲ್ಲೂ ಅಡುಗೆ ಎಣ್ಣೆ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    MORE
    GALLERIES

  • 88

    Edible Oil Price Down: ಜನಸಾಮಾನ್ಯರಿಗೆ ಬಂಪರ್ ಸುದ್ದಿ- ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ

    ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಆಗಿರುವುದರಿಂದ, ದೇಶೀಯ ಮಾರುಕಟ್ಟೆಯಲ್ಲೂ ಬೆಲೆ ಇಳಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇದೆ. ಇದರಿಂದ ಜನಸಾಮಾನ್ಯರಿಗೆ ನೆಮ್ಮದಿ ಸಿಗಲಿದೆ. ಆದರೆ ಇದು ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

    MORE
    GALLERIES