Oil Rates: ಲೀಟರ್​ಗೆ 30 ರೂಪಾಯಿ ಇಳಿಸಿದ ಪ್ರಮುಖ ಅಡುಗೆ ಎಣ್ಣೆ ಕಂಪನಿ!

Edible Oil Prices: ಕಳೆದ ಕೆಲವು ದಿನಗಳಿಂದ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ದರಗಳು ಕುಸಿಯುತ್ತಿರುವುದರಿಂದ ಇದರ ಪರಿಣಾಮ ನಮ್ಮ ದೇಶದ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತಿದೆ. ಸರ್ಕಾರ ಈಗಾಗಲೇ ಕಂಪನಿಗಳಿಗೆ ಪ್ರಮುಖ ನಿರ್ದೇಶನಗಳನ್ನು ನೀಡಿದೆ

First published:

  • 19

    Oil Rates: ಲೀಟರ್​ಗೆ 30 ರೂಪಾಯಿ ಇಳಿಸಿದ ಪ್ರಮುಖ ಅಡುಗೆ ಎಣ್ಣೆ ಕಂಪನಿ!

    Oil Prices: ಸಾಮಾನ್ಯ ಜನರಿಗೆ ಇದು ಬಂಪರ್ ನ್ಯೂಸ್​ ಎಂದರೆ ತಪ್ಪಾಗಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಕ್ರಮದಲ್ಲಿ ದೇಶೀಯ ಮಾರುಕಟ್ಟೆಯಲ್ಲೂ ಅಡುಗೆ ಎಣ್ಣೆ ಬೆಲೆಯನ್ನು ಕಂಪನಿಗಳು ಇಳಿಸುತ್ತಿವೆ. ಇದರಿಂದ ಎಷ್ಟೋ ಮಂದಿಗೆ ನೆಮ್ಮದಿ ಸಿಗಲಿದೆ ಎನ್ನಬಹುದು.

    MORE
    GALLERIES

  • 29

    Oil Rates: ಲೀಟರ್​ಗೆ 30 ರೂಪಾಯಿ ಇಳಿಸಿದ ಪ್ರಮುಖ ಅಡುಗೆ ಎಣ್ಣೆ ಕಂಪನಿ!

    ಕೇಂದ್ರ ಸರ್ಕಾರ ಈಗಾಗಲೇ ತೈಲ ಕಂಪನಿಗಳಿಗೆ ಮಹತ್ವದ ನಿರ್ದೇಶನ ನೀಡಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ದರಗಳ ಇಳಿಕೆಗೆ ಅನುಗುಣವಾಗಿ ತೈಲ ಎಂಆರ್‌ಪಿ ದರಗಳನ್ನು ಸಹ ಕಡಿಮೆ ಮಾಡಬೇಕು ಎಂದು ಅದು ಹೇಳಿದೆ. ಹೀಗಾಗಿ ತೈಲ ಕಂಪನಿಗಳೂ ಬೆಲೆ ಇಳಿಕೆ ಮಾಡುತ್ತಿವೆ.

    MORE
    GALLERIES

  • 39

    Oil Rates: ಲೀಟರ್​ಗೆ 30 ರೂಪಾಯಿ ಇಳಿಸಿದ ಪ್ರಮುಖ ಅಡುಗೆ ಎಣ್ಣೆ ಕಂಪನಿ!

    ಅದಾನಿ ವಿಲ್ಮಾರ್ ಎಂಡಿ ಮತ್ತು ಸಿಇಒ ಯಾಂಗ್ಶು ಮಲ್ಲಿಕ್ ಅವರು ಜನವರಿಯಿಂದ ಅಡುಗೆ ಎಣ್ಣೆ ಬೆಲೆಯನ್ನು ಕಡಿಮೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ವಸ್ತುಗಳ ಬೆಲೆ ಕುಸಿತವೇ ಇದಕ್ಕೆ ಕಾರಣ ಎನ್ನಲಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಕಡಿಮೆಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    MORE
    GALLERIES

  • 49

    Oil Rates: ಲೀಟರ್​ಗೆ 30 ರೂಪಾಯಿ ಇಳಿಸಿದ ಪ್ರಮುಖ ಅಡುಗೆ ಎಣ್ಣೆ ಕಂಪನಿ!

    ಜನವರಿಯಿಂದ ಅದಾನಿ ವಿಲ್ಮಾರ್ ಕಂಪನಿಯು ಫಾರ್ಚೂನ್ ಸೋಯಾಬೀನ್ ಎಣ್ಣೆಯ ಬೆಲೆಯನ್ನು ಕಡಿಮೆ ಮಾಡಿದೆ. 18ರಷ್ಟು ಕಡಿತ ಮಾಡಲಾಗಿದೆ. ಜನವರಿ ತಿಂಗಳಲ್ಲಿ ಲೀಟರ್ ತೈಲ ಬೆಲೆ ರೂ. 170ರಲ್ಲಿತ್ತು. ಆದರೆ ಈಗ ಈ ಬೆಲೆ ರೂ. 140ಕ್ಕೆ ಇಳಿದಿದೆ.

    MORE
    GALLERIES

  • 59

    Oil Rates: ಲೀಟರ್​ಗೆ 30 ರೂಪಾಯಿ ಇಳಿಸಿದ ಪ್ರಮುಖ ಅಡುಗೆ ಎಣ್ಣೆ ಕಂಪನಿ!

    ತೈಲ ಬೆಲೆ ಕುಸಿತದಿಂದ ಕಂಪನಿಯ ಮಾರಾಟವೂ ಹೆಚ್ಚಿದೆ ಎನ್ನಬಹುದು. 2022-23 ರ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ಖಾದ್ಯ ತೈಲ ಮಾರಾಟವು ಶೇಕಡಾ 4 ರಷ್ಟು ಹೆಚ್ಚಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಬೆಲೆ ಇಳಿಕೆಯೇ ಇದಕ್ಕೆ ಕಾರಣ.

    MORE
    GALLERIES

  • 69

    Oil Rates: ಲೀಟರ್​ಗೆ 30 ರೂಪಾಯಿ ಇಳಿಸಿದ ಪ್ರಮುಖ ಅಡುಗೆ ಎಣ್ಣೆ ಕಂಪನಿ!

    ಆರೋಗ್ಯಕರ ಮತ್ತು ಟೇಸ್ಟಿ ಖಾದ್ಯ ತೈಲ ಬ್ರಾಂಡ್‌ನ ಬೆಲೆಗಳನ್ನು ಕಡಿಮೆ ಮಾಡಲಾಗಿದೆ ಎಂದು ಇಮಾಮಿ ಗ್ರೂಪ್ ನಿರ್ದೇಶಕ ಆದಿತ್ಯ ಅಗರ್ವಾಲ್ ಹೇಳಿದ್ದಾರೆ. ಜನವರಿಯಿಂದ ನೋಡಿದರೆ ತಿಂಗಳಿಗೆ ಶೇ.2ರಿಂದ 3ರಷ್ಟು ಬೆಲೆ ಇಳಿಕೆಯಾಗಿದೆ ಎಂದು ವಿವರಿಸಿದರು.

    MORE
    GALLERIES

  • 79

    Oil Rates: ಲೀಟರ್​ಗೆ 30 ರೂಪಾಯಿ ಇಳಿಸಿದ ಪ್ರಮುಖ ಅಡುಗೆ ಎಣ್ಣೆ ಕಂಪನಿ!

    ಮದರ್ ಡೈರಿ ಕೂಡ ಬೆಲೆಯನ್ನು ಕಡಿಮೆ ಮಾಡುತ್ತಿದೆ. ಧಾರಾ ಬ್ರಾಂಡ್‌ನಲ್ಲಿ ಮಾರಾಟವಾಗುವ ಖಾದ್ಯ ತೈಲಗಳ ಬೆಲೆಯನ್ನು ಲೀಟರ್‌ಗೆ 20 ರವರೆಗೆ ಕಡಿಮೆ ಮಾಡಲು ಕಂಪನಿಯು ಇತ್ತೀಚೆಗೆ ನಿರ್ಧರಿಸಿದೆ.

    MORE
    GALLERIES

  • 89

    Oil Rates: ಲೀಟರ್​ಗೆ 30 ರೂಪಾಯಿ ಇಳಿಸಿದ ಪ್ರಮುಖ ಅಡುಗೆ ಎಣ್ಣೆ ಕಂಪನಿ!

    ಕಳೆದ 3ರಿಂದ 4 ತಿಂಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಗಳು ಭಾರೀ ಇಳಿಕೆ ಕಂಡಿವೆ. ಇದರಿಂದಾಗಿ ದೇಶದಲ್ಲಿ ಅಡುಗೆ ಎಣ್ಣೆ ಬೆಲೆ ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರ ಕಂಪನಿಗಳಿಗೆ ಆದೇಶವನ್ನೂ ಹೊರಡಿಸಿದೆ. ಹಾಗಾಗಿಯೇ ಈಗ ಕಂಪನಿಗಳೂ ದರ ಇಳಿಸುತ್ತಿವೆ.

    MORE
    GALLERIES

  • 99

    Oil Rates: ಲೀಟರ್​ಗೆ 30 ರೂಪಾಯಿ ಇಳಿಸಿದ ಪ್ರಮುಖ ಅಡುಗೆ ಎಣ್ಣೆ ಕಂಪನಿ!

    ಕಳೆದ 2 ತಿಂಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಲವು ಖಾದ್ಯ ತೈಲಗಳ ಬೆಲೆ ಪ್ರತಿ ಟನ್‌ಗೆ 200ರಿಂದ 250 ಡಾಲರ್‌ಗಳಷ್ಟು ಇಳಿಕೆಯಾಗಿದೆ. ಆದಾಗ್ಯೂ, ಈ ಕಡಿತವು ದೇಶೀಯ ಮಾರುಕಟ್ಟೆಯಲ್ಲಿ ತೈಲ ದರಗಳ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಹಾಗಾಗಿ ಮುಂಬರುವ ಅವಧಿಯಲ್ಲಿ ಅಡುಗೆ ಎಣ್ಣೆ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

    MORE
    GALLERIES